ಐಪಿಎಲ್ 2024 : 10 ಓವರ್‌ 98 ರನ್‌, 18.50 ಕೋಟಿ ರೂ.ಗೆ ಖರೀದಿಸಿದ್ದ ಪಂಜಾಬ್‌ ಕಿಂಗ್ಸ್‌ ಬೌಲರ್‌ ದುಬಾರಿ ಬೌಲಿಂಗ್‌

IPL 2024 : ಪಂಜಾಬ್‌ ಕಿಂಗ್ಸ್‌ (PBKS)ತಂಡ ಬರೋಬ್ಬರಿ 18.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ ಆಟಗಾರ ಸ್ಯಾಮ್‌ ಕರನ್‌ (sam curran) 10 ಓವರ್‌ 98 ರನ್‌ ನೀಡಿರುವುದು ತಂಡಕ್ಕೆ ಆಘಾತ ಮೂಡಿಸಿದೆ.

IPL 2024 : ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಹರಾಜು ಪ್ರಕ್ರಿಯೆಗೆ ದಿನಗಣನೆ ಶುರುವಾಗಿದೆ. ತಂಡಕ್ಕೆ ಸೇರ್ಪಡೆಗೊಳಿಸಲು ಹೊಸ ಆಟಗಾರರ ಹುಡುಕಾಟದಲ್ಲಿಯೂ ತೊಡಗಿಕೊಂಡಿವೆ. ಈ ನಡುವಲ್ಲೇ ಪಂಜಾಬ್‌ ಕಿಂಗ್ಸ್‌ (PBKS) ತಂಡ ಬರೋಬ್ಬರಿ 18.50 ಕೋಟಿ ರೂಪಾಯಿ ಕೊಟ್ಟು ಖರೀದಿಸಿದ ಆಟಗಾರ ಸ್ಯಾಮ್‌ ಕರನ್‌ (sam curran) 10 ಓವರ್‌ 98 ರನ್‌ ನೀಡಿರುವುದು ತಂಡಕ್ಕೆ ಆಘಾತ ಮೂಡಿಸಿದೆ.

ವೆಸ್ಟ್‌ ಇಂಡಿಸ್‌ ವಿರುದ್ದ ಇಂಗ್ಲೆಂಡ್‌ ಏಕದಿನ ಸರಣಿಯನ್ನು ಆಡುತ್ತಿದೆ. ಈ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ ತಂಡದ ಆಟಗಾರ ಸ್ಯಾಮ್‌ ಕರನ್‌ ಬೌಲಿಂಗ್‌ಗೆ ವೆಸ್ಟ್‌ ಇಂಡಿಸ್‌ ಆಟಗಾರರು ಭರ್ಜರಿ ಹೊಡೆತವನ್ನೇ ನೀಡಿದ್ದಾರೆ. 10 ಓವರ್‌ ಬೌಲಿಂಗ್‌ ಮಾಡಿದ್ದ ಸ್ಯಾಮ್‌ ಕರನ್‌ ಬರೋಬ್ಬರಿ 98 ರನ್‌ ಬಿಟ್ಟುಕೊಟ್ಟಿದ್ದರು. ಈ ಸುದ್ದಿ ಇದೀಗ ಕ್ರಿಕೆಟ್‌ ವಲಯದಲ್ಲಿ ಬಾರೀ ಚರ್ಚೆಗೆ ಕಾರಣವಾಗಿದೆ.

IPL 2024 sam curran 10 Over 98 Runs, Punjab Kings Bowler Bought for Rs 18.50 Crore Expensive Bowling
Image Credit : India dot com

ಇಂಗ್ಲೆಂಡ್‌ ತಂಡದ ಖ್ಯಾತ ಆಲ್‌ರೌಂಡರ್‌ ಸ್ಯಾಮ್‌ ಕರನ್‌ ಅವರನ್ನು ಪಂಜಾಬ್ ಕಿಂಗ್ಸ್ (PBKS) ಐಪಿಎಲ್ 2023 ಮಿನಿ ಹರಾಜಿನಲ್ಲಿ ಬರೋಬ್ಬರಿ INR 18.50 ಕೋಟಿಗೆ ಖರೀದಿಸಿತ್ತು. ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಇತಿಹಾಸದಲ್ಲಿಯೇ ಅತ್ಯಂತ ದುಬಾರಿ ಆಟಗಾರ ಅನ್ನೋ ಖ್ಯಾತಿಗೆ ಸ್ಯಾಮ್‌ ಕರನ್‌ ಪಾತ್ರರಾಗಿದ್ದರು. ಪಂಜಾಬ್‌ ಕಿಂಗ್ಸ್‌ ಈ ಬಾರಿಯ ಐಪಿಎಲ್‌ನಲ್ಲಿ ಉತ್ತಮ ಆಟದ ನಿರೀಕ್ಷೆಯಲ್ಲಿತ್ತು.

ಇದನ್ನೂ ಓದಿ : ದಕ್ಷಿಣ ಆಫ್ರಿಕಾ ಪ್ರವಾಸ ಏಕದಿನ ತಂಡಕ್ಕೆ ಕೆಎಲ್‌ ರಾಹುಲ್‌ ನಾಯಕ : ರಹಾನೆ, ಪೂಜಾರಾ ಔಟ್‌

ಆದರೆ ಇಂಗ್ಲೆಂಡ್‌ ತಂಡದ ಆಟಗಾರ ವೆಸ್ಟ್‌ ಇಂಡಿಸ್‌ ವಿರುದ್ದದ ಪಂದ್ಯದಲ್ಲಿ 9.5 ಓವರ್‌ ಬೌಲಿಂಗ್‌ ಮಾಡಿ 98 ರನ್‌ ಬಿಟ್ಟುಕೊಡುವ ಮೂಲಕ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ. ಏಕದಿನ ಕ್ರಿಕೆಟ್‌ ಇತಿಹಾಸದಲ್ಲಿಯೇ ಅತೀ ಹೆಚ್ಚು ರನ್‌ ನೀಡಿದ ಇಂಗ್ಲೀಷ್‌ ಬೌಲರ್‌ ಅನ್ನೋ ಕುಖ್ಯಾತಿಯೂ ಸ್ಯಾಮ್‌ ಕರನ್‌ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲಾ ಸ್ಯಾಮ್‌ ಕರನ್‌ ಅವರ ಫಾರ್ಮ್‌ IPL 2024ಕ್ಕೆ ಕಳವಳವನ್ನುಂಟು ಮಾಡಿದೆ.

ಸ್ಯಾಮ್‌ ಕರನ್‌ ಇಂಗ್ಲೆಂಡ್‌ ತಂಡದ ಪ್ರಮುಖ ಆಲ್‌ರೌಂಡರ್‌ ಆಟಗಾರ. ಟಿ20 ಕ್ರಿಕೆಟ್‌ನಲ್ಲಿಯೂ ಅತ್ಯುತ್ತಮ ದಾಖಲೆಯನ್ನು ಹೊಂದಿದ್ದಾರೆ. 25 ವರ್ಷ ವಯಸ್ಸಿನ ಸ್ಯಾಮ್‌ ಕರನ್‌, 2023ರಲ್ಲಿ ಏಕದಿನ ಪಂದ್ಯಗಳ ಪೈಕಿ ಹೇಳಿಕೊಳ್ಳುವಂತಹ ದಾಖಲೆಯನ್ನು ಹೊಂದಿಲ್ಲ. 12 ಪಂದ್ಯಗಳನ್ನು ಆಡಿದ್ದು, 39.07 ರ ಸರಾಸರಿಯಲ್ಲಿ ಕೇವಲ 14 ವಿಕೆಟ್‌ ಪಡೆದುಕೊಂಡಿದ್ದರು.

IPL 2024 sam curran 10 Over 98 Runs, Punjab Kings Bowler Bought for Rs 18.50 Crore Expensive Bowling
Image Credit : X/ PBKS

ಇದನ್ನೂ ಓದಿ : IPL 2024: ಮುಂಬೈ ಇಂಡಿಯನ್ಸ್ ತಂಡಕ್ಕೆ ಯಾರು ನಾಯಕ ? ಹಾರ್ದಿಕ್‌ ಪಾಂಡ್ಯ ಅಥವಾ ರೋಹಿತ್‌ ಶರ್ಮಾ ?

ಕಳೆದ ವರ್ಷ 19 ಟಿ20 ಪಂದ್ಯಗಳನ್ನು ಆಡಿದ್ದು, ಈ ಪೈಕಿ ಅವರು 21.08ರ ಸರಾಸರಿಯಲ್ಲಿ 25 ವಿಕೆಟ್‌ಗಳನ್ನು ಪಡೆದುಕೊಂಡಿದ್ದಾರೆ. ಆದರೆ ಈ ವರ್ಷ ಆರು ಟಿ20 ಪಂದ್ಯಗಳನ್ನು ಆಡಿದ್ದು, 67ರ ಸರಾಸರಿಯೊಂದಿಗೆ ಕೇವಲ ಎರಡು ವಿಕೆಟ್‌ಗಳನ್ನು ಪಡೆದಿದ್ದಾರೆ. ಅಷ್ಟೇ ಅಲ್ಲಾ ಸ್ಯಾಮ್‌ ಕರನ್‌ ಅವರ ಐಪಿಎಲ್ 2023ರ ಅಭಿಯಾನವು ಹೇಳಿಕೊಳ್ಳುವಂತೆ ಇರಲಿಲ್ಲ.

2023ರರ ಐಪಿಎಲ್‌ನಲ್ಲಿ ಒಟ್ಟು 14 ಪಂದ್ಯಗಳನ್ನು ಆಡಿದ್ದು, ಒಂದು ಅರ್ಧ ಶತಕ ಸೇರಿದಂತೆ ಒಟ್ಟು 276 ರನ್ ಗಳಿಸಿದ್ದರು. ಅಷ್ಟೇ ಅಲ್ಲದೇ ಕೇವಲ 10 ವಿಕೆಟ್‌ ಪಡೆಯುವ ಮೂಲಕ ನಿರಾಸೆಯನ್ನು ಅನುಭವಿಸಿದ್ದರು. ಅದ್ರಲ್ಲೂ ನಿರ್ಣಾಯಕ ಪಂದ್ಯಗಳಲ್ಲಿ ಅವರು ದುಬಾರಿಯಾಗಿ ಪರಿಣಮಿಸಿದ್ದರು. ಮುಂದಿನ ಭಾರಿಯ ಐಪಿಎಲ್‌ನಲ್ಲಿ ಸ್ಯಾಮ್‌ ಕರನ್‌ ಮೇಲೆ ಸಾಕಷ್ಟು ನಿರೀಕ್ಷೆಗಳಿತ್ತು.

ಇದನ್ನೂ ಓದಿ : IPL 2024 Retentions : ಐಪಿಎಲ್‌ ಹರಾಜು, ಯಾವ ತಂಡಕ್ಕೆ ಯಾವ ಆಟಗಾರರು : ತಂಡಗಳು ಉಳಿಸಿಕೊಂಡ, ಬಿಡುಗಡೆ ಮಾಡಿದ ಆಟಗಾರರ ಸಂಪೂರ್ಣ ಪಟ್ಟಿ ಇಲ್ಲಿದೆ

IPL 2024 sam curran 10 Over 98 Runs, Punjab Kings Bowler Bought for Rs 18.50 Crore Expensive Bowling

Comments are closed.