ಚಿತ್ರೀಕರಣ ಪೂರ್ಣಗೊಳಿಸಿದೆ ‘ಗಡಿಯಾರ’ : ಡಬ್ಬಿಂಗ್ ಹಕ್ಕಿಗಾಗಿ ಬಾರೀ ಡಿಮ್ಯಾಂಡ್

0

ಸ್ಯಾಂಡಲ್ ವುಡ್ ನ ಬಹುನಿರೀಕ್ಷಿತ ಸಿನಿಮಾ ಗಡಿಯಾರ ಶೂಟಿಂಗ್ ಮುಗಿಸಿದೆ. ಸ್ಟಾರ್ ಸಿನಿಮಾಗಳ ಮಟ್ಟಕ್ಕೆ ನಿರೀಕ್ಷೆಯನ್ನು ಹುಟ್ಟು ಹಾಕಿರೋ ಕಮರ್ಷಿಯಲ್ ಸಿನಿಮಾ ತೆರೆಗೆ ಬರೋದನ್ನೇ ಪ್ರೇಕ್ಷಕರು ಕಾದು ಕುಳಿತಿದ್ದಾರೆ. ವಿಭಿನ್ನ ಹೆಸರು, ಕುತೂಹಲ ಮೂಡಿಸಿರೊ ಕಥಾ ಹಂದರ, ಬಹುತಾರಾಗಣವನ್ನು ಹೊಂದಿರೋ ಗಡಿಯಾರ ಸ್ಯಾಂಡಲ್ ವುಡ್ ನ ವಿಭಿನ್ನ ಸಿನಿಮಾವೂ ಹೌದು.

ಚಿತ್ರೀಕರಣವನ್ನು ಮುಗಿಸಿರೋ ಗಡಿಯಾರ ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಶೂಟಿಂಗ್ ಮುಗಿಯುತ್ತಿದ್ದಂತೆಯೇ ” ಗಡಿಯಾರ” ಸಿನಿಮಾಕ್ಕೆ ಹಿಂದಿ, ತಮಿಳ್, ತೆಲುಗು, ಮಲಯಾಲಂ, ಬೊಜ್ಪುರಿ ಹಾಗೂ ಮರಾಠಿ ಭಾಷೆಯಿಂದ ಡಬ್ಬಿಂಗ್ ಗೆ ಡಿಮ್ಯಾಂಡ್ ಬಂದಿದೆ.

ಯುವ ನಿರ್ದೇಶಕ, ಪತ್ರಕರ್ತ ಪ್ರಬಿಕ್ ಮೊಗವೀರ್ ಚಿತ್ರಕ್ಕೆ ನಿರ್ದೇಶನದ ಜೊತೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ರಾಜ್ಯದ ಮುಖ್ಯಮಂತ್ರಿಗಳಾದ ಬಿ.ಎಸ್.ಯಡಿಯೂರಪ್ಪನವರ ಮೂಲಕ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆಮಾಡಿಸಿದ್ದಾರೆ ಪ್ರಬಿಕ್ ಮೊಗವೀರ್.

ಗಡಿಯಾರ ಚಿತ್ರ ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡಿ ಹೊಸ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಚಿತ್ರದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು ಚಿತ್ರದಲ್ಲಿ ದೊಡ್ಡ ತಾರಾಂಗಣವೇ ಇದೆ.

ವಿಶೇಷ ಪಾತ್ರದಲ್ಲಿ ನಿವೃತ್ತ ಹಿರಿಯ ಪೊಲೀಸ್ ಅಧಿಕಾರಿ ಎಸ್.ಪಿ. ಸಾಂಗ್ಲಿಯಾನ ಹಾಗೂ ಯಶ್ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಇನ್ನು ಮುಖ್ಯ ಪಾತ್ರದಲ್ಲಿ ರಾಜ್ ದೀಪಕ್ ಶೆಟ್ಟಿ, ಶೀತಲ್ ಶೆಟ್ಟಿ ಹಾಗೂ ಅತಿಥಿ ಪಾತ್ರದಲ್ಲಿ ರಿಹಾಜ್ ಮತ್ತು ಎಂ.ಟಿ.ಗೌರಿ ಶಂಕರ್ ಬಣ್ಣ ಹಚ್ಚಿದ್ದಾರೆ.

ಮತ್ತು ಮುಖ್ಯ ಭೂಮಿಕೆಯಲ್ಲಿ ಶರತ್ ಲೋಹಿತಾಶ್ವ ಮತ್ತು ಸುಚೇಂದ್ರ ಪ್ರಸಾದ ಜೊತೆಗೆ ಪ್ರದೀಪ್ ಪೂಜಾರಿ, ಗಣೇಶ್ ರಾವ್, ಮನದೀಪ್ ರೈ, ರಾಧಾ ರಾಮಚಂದ್ರ, ಪ್ರಣಯ ಮೂರ್ತಿ, ಎಸಿಪಿ ಚಬ್ಬಿ, ವಿನಯ್ ಕುಮಾರ್ ರಾವ್, ಲೀಲಾ ಮೋಹನ್ ಕಾಣಿಸಿಕೊಂಡಿದ್ದಾರೆ.

ಗಡಿಯಾರ ಚಿತ್ರದಲ್ಲಿ ಥ್ರಿಲ್ಲರ್ ಮಂಜು ರವರ ನಾಲ್ಕು ಅದ್ಬುತ ಸಾಹಸ ಸನ್ನಿವೇಶಗಳಿವೆ.

ಸಂಗೀತ ರಾಘವ್ ಸುಭಾಷ್, ಛಾಯಾಗ್ರಹಣ ಶ್ಯಾಮ್ ಸಿಂಧನೂರ್, ಸಂಕಲನ ಎನ್.ಎಮ್.ವಿಶ್ವ ಮಾಡಿದ್ದಾರೆ.

ಹಾಡುಗಳು ಅದ್ಬುತವಾಗಿ ಮೂಡಿಬಂದಿದ್ದು, ಹೇಮಂತ್ ಕುಮಾರ್, ವ್ಯಾಸರಾಜ್, ಅನುರಾಧ ಭಟ್, ಅಪೂರ್ವ ಶ್ರಿ ಕುಮಾರ್ ಹಾಡುಗಳಿಗೆ ಧ್ವನಿಯಾಗಿದ್ದಾರೆ.

ಚಿತ್ರದಲ್ಲಿ ಮಾಸ್, ಲವ್, ಹಿಸ್ಟಾರಿಕಲ್, ಹಾರರ್, ಥ್ರಿಲ್ಲರ್ ಸೇರಿದಂತೆ ಎಲ್ಲಾ ಅಂಶಗಳಿದ್ದು ಚಿತ್ರ ಸಿರಿರಸಿಕರಿಗೆ ಇಷ್ಟವಾಗುವುದರಲ್ಲಿ ಯಾವುದೇ ಮಾತಿಲ್ಲಾ.

ಕೇವಲ ಥ್ಲಿಲ್ಲರ್, ಸಸ್ಪೆನ್ಸ್ ಮಾತ್ರವಲ್ಲ ಚಿತ್ರದಲ್ಲಿ ಕಾಮಿಡಿ ಕೂಡ ಇದ್ದು, ಚಿತ್ರ ರಸಿಕರಿಗೆ ಕಾಮಿಡಿ ಕಚಗುಳಿಯಿಡೋದ್ರಲ್ಲಿ ಅನುಮಾನವೇ ಇಲ್ಲಾ.

ಮುಂದಿನ 2 ಅಥವಾ 3 ತಿಂಗಳಿನಲ್ಲಿ ಸಿನಿಮಾ ತೆರೆಗೆ ತರಲು ಸಿದ್ದತೆ ಮಾಡಿಕೊಳ್ಳುತ್ತಿದೆ ಚಿತ್ರ ತಂಡ. ಎಲ್ಲವೂ ಅಂದುಕೊಂಡಂತೆ ಆದ್ರೆ ಎಪ್ರೀಲ್ ವೇಳೆಗೆ ಗಡಿಯಾರ ತೆರೆಗೆ ಬರೋದು ಪಕ್ಕಾ.

ಗಡಿಯಾರ ಸಿನಿಮಾ ಶೂಟಿಂಗ್ ಮುಗಿಸೋ ಮೊದಲೇ ಹೊಸ ಭರವಸೆಯನ್ನು ಹುಟ್ಟುಹಾಕಿದೆ. ಬಹು ತಾರಾಗಣದ ಸಿನಿಮಾವೊಂದು ತೆರೆ ಕಾಣುತ್ತಿರೋದಕ್ಕೆ ಚಿತ್ರರಸಿಕರು ಕೂಡ ಕುತೂಹಲ ಭರಿತರಾಗಿದ್ದಾರೆ.

Leave A Reply

Your email address will not be published.