ಆದಿಪುರುಷ್‌ ಟ್ರೇಲರ್‌ ರಿಲೀಸ್‌ : ರಾಮನ ಪಾತ್ರದಲ್ಲಿ ಮಿಂಚಿದ ನಟ ಪ್ರಭಾಸ್‌

ತೆಲುಗು ಸೂಪರ್‌ಸ್ಟಾರ್ ಪ್ರಭಾಸ್‌ ಅಭಿನಯದ ಆದಿಪುರುಷ್‌ ಸಿನಿಮಾ (Aadipurush trailer release) ಆರಂಭದಿಂದಲೂ ಸಾಕಷ್ಟು ಸದ್ದು ಮಾಡುತ್ತಲೇ ಇದೆ. ಸದ್ಯ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ಆಗಿದ್ದು, ಸಿನಿಪ್ರೇಕ್ಷಕರು ತಮ್ಮ ಮೆಚ್ಚಿನ ನಟನನ್ನು ರಾಮನ ಪಾತ್ರದಲ್ಲಿ ಕಂಡು ಖುಷಿಪಟ್ಟಿದ್ದಾರೆ. ಇನ್ನು ಈ ಸಿನಿಮಾದ ರಿಲೀಸ್‌ ಡೇಟ್‌ ಕೂಡ ಫಿಕ್ಸ್‌ ಆಗಿದ್ದು, ಬರುವ ಜೂನ್​ 16ರಂದು ಬಹಳ ಅದ್ದೂರಿಯಾಗಿ ದೇಶದಾದ್ಯಂತ ಬಿಡುಗಡೆಯಾಗಲಿದೆ.

ಈ ಸಿನಿಮಾವು ರಾಮಾಯಾಣವನ್ನು ಆಧರಿಸಿದ ಕಥೆಯನ್ನು ಒಳಗೊಂಡ ಸಿನಿಮಾವಾಗಿದೆ. ಈ ಸಿನಿಮಾವನ್ನು ಖ್ಯಾತ ನಿರ್ದೇಶಕ ಓಂ ರಾವತ್‌ ನಿರ್ದೇಶನ ಮಾಡಿದ್ದಾರೆ. ಇನ್ನು ಈ ಸಿನಿಮಾದಲ್ಲಿ ರಾಮನಾಗಿ ನಟ ಪ್ರಭಾಸ್‌, ಸೀತೆಯಾಗಿ ಕೃತಿ ಸನೋನ್‌, ರಾವಣನಾಗಿ ಸೈಫ್‌ ಆಲಿ ಖಾನ್‌, ಆಂಜನೇಯನಾಗಿ ದೇವದತ್ತ ನಾಗೆ, ಲಕ್ಷ್ಮಣನಾಗಿ ಸನ್ನಿ ಸಿಂಗ್‌ ಅಭಿನಯಿಸಿದ್ದಾರೆ. ಈ ಸಿನಿಮಾವು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿದೆ. ಸದ್ಯ ಬಿಡುಗಡೆಯಾಗಿರುವ ಟ್ರೇಲರ್‌ನಲ್ಲಿ ಸಾಕಷ್ಟು ಅದ್ದೂರಿತನ ಎದ್ದು ಕಾಣುತ್ತಿದೆ.

ಇನ್ನು ದೊಡ್ಡ ಪರದೆಯಲ್ಲಿ ಆದಿಪುರುಷ್‌ ಸಿನಿಮಾವನ್ನು ನೋಡಲು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ. 3ಡಿ ಅವತರಣಿಕೆಯಲ್ಲಿ ಈ ಸಿನಿಮಾ ಪ್ರದರ್ಶನ ಆಗಲಿರುವುದು ಬಹಳ ವಿಶೇಷವಾಗಿದೆ. ಟಿ ಸೀರೀಸ್‌ನ ಭೂಷಣ್‌ ಕುಮಾರ್ ಅವರು ಆದಿಪುರುಷ್​ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ಬಿಡುಗಡೆ ಆಗುತ್ತಿದೆ. ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳು ಭಾಷೆಯಲ್ಲಿ ತೆರೆಕಾಣಲಿದೆ. ಮೊದಲ ದಿನ ಈ ಸಿನಿಮಾಕ್ಕೆ ಎಷ್ಟು ಕಲೆಕ್ಷನ್​ ಆಗಲಿದೆ ಎನ್ನುವುದನ್ನು ತಿಳಿಯುವ ಕಾತುರತೆ ಮೂಡಿದೆ.

ಇದನ್ನೂ ಓದಿ : ಸಮಂತಾಗೆ ನನ್ನ ರೋಜಾ ನೀನೇ ಎಂದ ಸೆನ್ಸೇಷನಲ್ ಸ್ಟಾರ್ ವಿಜಯ್ ದೇವರಕೊಂಡ

ಇದನ್ನೂ ಓದಿ : ಶೀಘ್ರದಲ್ಲೇ ಕಾಂತಾರ 2 ಚಿತ್ರೀಕರಣ ಆರಂಭ : ರಿಷಬ್‌ ಶೆಟ್ಟಿ

ಪ್ರಭಾಸ್​ ಅವರು ಆದಿಪುರುಷ್​ ಸಿನಿಮಾ ಮೂಲಕ ಗೆಲ್ಲಲೇಬೇಕಾದ ಅನಿವಾರ್ಯತೆ ಇದೆ. ಯಾಕೆಂದರೆ ಬಾಹುಬಲಿ 2 ಬಳಿಕ ಅವರು ನಿರೀಕ್ಷಿತ ಮಟ್ಟದ ಗೆಲುವು ಕಂಡಿಲ್ಲ. ಹಾಗಾಗಿ ಆದಿಪುರುಷ್​ ಸಿನಿಮಾ ಗೆಲ್ಲಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ. ಇದಲ್ಲದೇ ನಟ ಪ್ರಭಾಸ್‌ ಅಭಿನಯದ ಸಲಾರ್, ಪ್ರಾಜೆಕ್ಟ್​ ಕೆ ಸಿನಿಮಾದ ಕೆಲಸದಲ್ಲೂ ಸಾಕಷ್ಟು ಬ್ಯುಸಿ ಆಗಿದ್ದಾರೆ.

Aadipurush Trailer Released: Actor Prabhas shines in the role of Rama

Comments are closed.