ನಟ ದರ್ಶನ್‌ ಹೇಳಿಕೆ ವಿಡಿಯೋವನ್ನು ಶೇರ್‌ ಮಾಡಿದ ಆಮ್ ಆದ್ಮಿ ಪಕ್ಷ

ನಟ ದರ್ಶನ್‌ ಅಭಿನಯದ “ಕ್ರಾಂತಿ” ಸಿನಿಮಾಕ್ಕಾಗಿ ಅಭಿಮಾನಿಗಳು ಎದುರು ನೋಡುತ್ತಿದ್ದಾರೆ. ಜನವರಿ 26ಕ್ಕೆ ರಿಲೀಸ್‌ಗೆ ಆಗುತ್ತಿರುವ ಈ ಸಿನಿಮಾ ಸ್ಯಾಂಡಲ್‌ವುಡ್‌ನಲ್ಲಿ ಹೊಸ ಕ್ರಾಂತಿ ಮಾಡುವ (Aam Aadmi Party) ನಿರೀಕ್ಷೆಯಲ್ಲಿದ್ದಾರೆ. ಸಿನಿಮಾ ಬಿಡುಗಡೆಗೂ ಮುನ್ನ ದರ್ಶನ್‌ ತಮ್ಮ “ಕ್ರಾಂತಿ” ಏನು ಅನ್ನುವುದನ್ನು ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ಈ ಸಿನಿಮಾದ ಮೂಲಕ ಸರಕಾರಿ ಶಾಲೆಗಳ ಮಹತ್ವವನ್ನು ಹೇಳುವುದಕ್ಕೆ ಹೊರಟಿದ್ದಾರೆ. ಅದಕ್ಕೂ ಮುನ್ನ ತಮ್ಮ ಸಂದರ್ಶನದಲ್ಲಿಯೇ ಸರಕಾರಿ ಶಾಲೆಯ ಅವ್ಯವಸ್ಥೆಯ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ.

ಈಗಾಗಲೇ ಈ ಬಗ್ಗೆ ಸಾಕಷ್ಟು ಸಂದರ್ಶನವನ್ನು ನೀಡಿದ್ದಾರೆ. ಅದರಲ್ಲೇ ಒಂದು ಹೇಳಿಕೆಯನ್ನು ಕರ್ನಾಟಕದ ಆಪ್‌ ಪಕ್ಷ ತನ್‌ ಯೂಟ್ಯೂಬ್‌ ಚಾನೆಲ್‌ನಲ್ಲಿ ಹಂಚಿಕೊಂಡಿದೆ. ಈ ವಿಡಿಯೋದಲ್ಲಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್ ಅವರ ಸರಕಾರಿ ಶಾಲೆಯ ಪರಿಕಲ್ಪನೆಯನ್ನು ಮೆಚ್ಚಿಕೊಂಡಿದ್ದಾರೆ. ಅಷ್ಟಕ್ಕೂ ಈ ವಿಡಿಯೋದಲ್ಲಿ ಅಂತಹದ್ದೇನಿದೆ ಎನ್ನುವುದು ಎಲ್ಲರ ಕುತೂಹಲ ಆಗಿದೆ. ನಟ ದರ್ಶನ್‌ “ಕ್ರಾಂತಿ” ಸಿನಿಮಾದ ಸಂದರ್ಶನದಲ್ಲಿ ತೆರಿಗೆ ಪಾವತಿ ಬಗ್ಗೆ ಮಾತಾಡಿದ್ದಾರೆ. ಸರಕಾರಕ್ಕೆ ಶೇ.34ರಷ್ಟು ತೆರಿಗೆ ಕಟ್ಟಬೇಕು. ಹೀಗಿದ್ದರೂ ಸರಕಾರಿ ಶಾಲೆಗಳು ಯಾಕೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಿಲ್ಲ. ಖಾಸಗಿ ಶಾಲೆಗಳ ಕಡೆಗೆ ಯಾಕೆ ಮಕ್ಕಳು ಮುಖ ಮಾಡುತ್ತಿದ್ದಾರೆ? ಅಂತ ದರ್ಶನ್‌ ಪ್ರಶ್ನೆ ಮಾಡಿದ್ದರು.

“ಸರಕಾರ ಅಂದ್ರೆ ಏನು? ಅಲ್ಲಿ ನಾನು ಶೇ.34ರಷ್ಟು ತೆರಿಗೆ ಪಾವತಿ ಮಾಡುತ್ತೇನೆ. ಸರಕಾರದವರು ಶೇ. ೩೪ಋಷ್ಟು ತೆರಿಗೆ ತೆಗೆದುಕೊಳ್ಳುತ್ತಾರೆ. ಏನು ಉಪ್ಪಿನಕಾಯಿ ಹಾಕುವುದಕ್ಕೆ ತೆಗೆದುಕೊಳ್ಳುತ್ತಾರಾ? ಒಂದು ಕುಗ್ಗಾಗ್ರಾಮದಿಂದಲೋ.. ಹಳ್ಳಿಯಿಂದಾನೋ ಮಕ್ಕಳ ಎಷ್ಟೋ ಕಿಲೋ ಮೀಟರ್‌ ನಡೆಯುತ್ತಾರೆ. ಒಂದೊಳ್ಳೆ ಟೀಚರ್‌ನ್ನು ಅಲ್ಲೇ ಕೊಡಿ. ಯಾಕೆ ಮಕ್ಕಳನ್ನು ಕಳಿಸೋದಿಲ್ಲ ಅವರು” ಎಂದಿರುವ ವಿಡಿಯೋವನ್ನು ಕರ್ನಾಟಕದ ಆಮ್ ಆದ್ಮಿ ಪಕ್ಷ ತನ್ನ ಯೂಟ್ಯೂಬ್‌ ಚಾನೆಲ್‌ನಲ್ಲಿ ಶೇರ್‌ ಮಾಡಿದೆ.

ಸರಕಾರಿ ಶಾಲೆಗಳು ಹಾಗೂ ಖಾಸಗಿ ಶಾಲೆಗಳ ಬಗ್ಗೆ ದರ್ಶನ್‌ ಮಾತಾನಾಡುತ್ತಿದ್ದಾರೆ. ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಬಗ್ಗೆ ಧ್ವನಿ ಎತ್ತುತ್ತಿದ್ದಾರೆ. ಪ್ರತಿ ಸಂದರ್ಶನದಲ್ಲೂ ತಮ್ಮ ಸಿನಿಮಾ ಸರಕಾರಿ ಶಾಲೆ ಬಗ್ಗೆ ಉತ್ತಮ ಸಂದೇಶವನ್ನು ಹೊತ್ತು ತಂದಿದೆ ಎನ್ನುತ್ತಾರೆ. ಕರ್ನಾಟಕದ ಆಮ್ ಆದ್ಮಿ ಪಕ್ಷ ಶೇರ್ ಮಾಡಿರುವ ವಿಡಿಯೋದಲ್ಲಿ ದರ್ಶನ್ ‘ಸರಕಾರಿ ಸಿನಿಮಾ ಬಗ್ಗೆ ಯಾಕೆ ಮಾತಾಡುತ್ತೇವೆ ಅಂದರೆ, ನಾವು ಕನೆಕ್ಟ್ ಆಗುತ್ತೇವೆ. ಇದೇ ದೆಹಲಿಯಲ್ಲಿ ಸರಕಾರಿ ಶಾಲೆ ಉಚಿತವಾಗಿದೆ. ತುಂಬಾನೇ ಚೆನ್ನಾಗಿದೆ.’ ಎಂದು ದರ್ಶನ್ ಹೇಳಿದ್ದರು. ಈ ಹೇಳಿಕೆಯನ್ನು ಆಪ್ ಪಕ್ಷ ಹೈಲೈಟ್ ಮಾಡಿದೆ.

ಕರ್ನಾಟಕದ ಆಮ್ ಆದ್ಮಿ ಪಕ್ಷ ದರ್ಶನ್‌ ಅವರ ಈ ಹೇಳಿಕೆಯ ವಿಡಿಯೋವನ್ನು ಶೇರ್‌ ಮಾಡಿ ಸಮ್ಮನಾಗಿಲ್ಲ ಬದಲಾಗಿ, ದೆಹಲಿ ಸಿಎಂ ಅರವಿಂದ ಕೇಜ್ರವಾಲ್‌ ಅವರ ಸರಕಾರದ ಬಗ್ಗೆನೂ ಹೇಳಿಕೊಂಡಿದೆ.” ದೆಹಲಿ ಚುನಾವಣೆ ದೇಶದ ರಾಜಕಾರಣದಲ್ಲಿ ಹೊಸ ಅಧ್ಯಾಯ ಬರೆದಿದೆ. ದೆಹಲಿಯಲ್ಲಿ ಸರಕಾರದ ಕೆಲಸದ ಮೇಲೆ ಮತ. ಕ್ರೇಜಿವಾಲ್‌ ಅವರು ಸರಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳಂತೆ ಮಾಡಿದ್ದಾರೆ” ಎಂದು ಪಕ್ಷ ಹೇಳಿಕೊಂಡಿದೆ.

ಇದನ್ನೂ ಓದಿ : ಧ್ರುವ 369 ಚಿತ್ರೀಕರಣ ಶ್ರೀಘ್ರದಲ್ಲೇ ಮುಕ್ತಾಯ

ಇದನ್ನೂ ಓದಿ : ನಟ ದರ್ಶನ್‌ ಜೊತೆ ನಟಿಸುವುದು ವಿಶೇಷ ಎಂದ ಬಹುಭಾಷಾ ನಟ ತರುಣ್‌ ರಾಜ್‌ ಅರೋರಾ

ಇದನ್ನೂ ಓದಿ : ಕುರುಡು ಕಾಂಚಾಣ ಮೂಲಕ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟ ಡಬ್ಬಿಂಗ್‌ ಕಲಾವಿದೆ ಅಮೂಲ್ಯ ಗೌಡ

ಇನ್ನು ಕೆಲವೇ ತಿಂಗಳುಗಳಲ್ಲಿ ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಇದಕ್ಕಾಗಿ ಕರ್ನಾಟಕದ ಪ್ರಮುಖ ರಾಜಕೀಯ ಪಕ್ಚಗಳು ಈಗಿನಿಂದಲೇ ರಣತಂತ್ರಗಳನ್ನು ರೂಪಿಸುತ್ತಿವೆ. ಈಗಾಗಲೇ ದೆಹಲಿ ಹಾಗೂ ಪಂಜಾಬ್‌ನಲ್ಲಿ ಅಇಕಾರದ ಚುಕ್ಕಾಣಿ ಹಿಡಿದಿರೋ ಆಮ್ ಆದ್ಮಿ ಪಕ್ಷ ಈ ಬಾರಿ ಕರ್ನಾಟಕದಲ್ಲೂ ಚುನಾವಣೆ ಅಖಾಡಕ್ಕೆ ಇಳಿಯುತ್ತಿದೆ. ಹೀಗಾಗಿ ಆಮ್ ಆದ್ಮಿ ಪಕ್ಷ ಕೂಡ ಪ್ರಮುಖ ರಾಜಕೀಯ ಪಕ್ಷಗಳ ಜೊತೆ ಸೆಣೆಸಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

Aam Aadmi Party shared the video of actor Darshan’s statement

Comments are closed.