ಭಾನುವಾರ, ಏಪ್ರಿಲ್ 27, 2025
HomeCinemaAamir Khan Lal Singh Chadha : ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ 1300...

Aamir Khan Lal Singh Chadha : ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ 1300 ಶೋ ರದ್ದು

- Advertisement -

ಬಾಲಿವುಡ್ ನಟ ಅಮೀರ್ ಖಾನ್ ಅಭಿನಯದ ಲಾಲ್ ಸಿಂಗ್ ಚಡ್ಡಾ (Aamir Khan Lal Singh Chadha) ವಿರುದ್ದ ವ್ಯಾಪಕ ವಿರೋಧ ವ್ಯಕ್ತವಾಗುತ್ತಿದೆ. ಜೊತೆಗೆ ಬಿಡುಗಡೆಯ ದಿನದಿಂದಲೂ ಸಿನಿಮಾ ಒಂದಿಲ್ಲೊಂದು ರೀತಿಯಲ್ಲಿ ವಿವಾದ ಸೃಷ್ಟಿಸುತ್ತಿದೆ. ಒಂದೆಡೆ ಸಿನಿಮಾದ ರೇಟಿಂಗ್‌ ಪಾತಾಳಕ್ಕೆ ಕುಸಿದಿದ್ದು, ಇನ್ನೊಂದೆಡೆಯಲ್ಲಿ ಅಮೀರ್ ಖಾನ್ ಲಾಲ್ ಸಿಂಗ್ ಚಡ್ಡಾ 1300 ಶೋಗಳನ್ನು ರದ್ದುಗೊಳಿಸಲಾಗಿದೆ.

ಲಾಲ್ ಸಿಂಗ್ ಚಡ್ಡಾ ಸಿನಿಮಾ ಬಿಡುಗಡೆಯ ದಿನವೇ 20 ಕೋಟಿ ರೂ. ಆದಾಯಗಳಿಸಿದೆ. ಆದ್ರೆ ರಕ್ಷಾ ಬಂಧನದ ಪ್ರಯೋಜನವನ್ನು ಪಡೆದುಕೊಳ್ಳುವಲ್ಲಿ ವಿಫಲವಾಗಿದೆ. ಅದ್ರಲ್ಲೂ ಆರಂಭಿಕ ದನದ ಕಲೆಕ್ಷನ್ಸ್‌ ಹಿಂದಿ ಚಲನ ಚಿತ್ರೋದ್ಯಮವನ್ನು ಬೆಚ್ಚಿಬೀಳಿಸಿದೆ. ರಕ್ಷಾ ಬಂಧನದ ದಿನದಂದೇ ಲಾಲ್ ಸಿಂಗ್ ಚಡ್ಡಾ ಅವರ ಸುಮಾರು 1300 ಶೋಗಳನ್ನು ಕಡಿಮೆ ಮಾಡಲಾಗಿದೆ.

ಯಾವುದೇ ಹಿಂದಿ ಸಿನಿಮಾವು ಬಿಡುಗಡೆಗೆ ಮುನ್ನ ಇಷ್ಟೊಂದು ವಿರೋಧವನ್ನು ಎದುರಿಸಿರಲಿಲ್ಲ. ಲಾಕ್‌ಸಿಂಗ್‌ ಚಡ್ಡಾ ಸಿನಿಮಾ ಪ್ರೇಕ್ಷಕರು ಕಿಕ್ಕಿರಿದು ತುಂಬಿರುವ ಕಡೆಗಳಲ್ಲಿಯೇ ನೀರಸ ಪ್ರದರ್ಶನವನ್ನು ಕಂಡಿದೆ. ಪ್ರೇಕ್ಷಕರ ಕೊರತೆಯ ಹಿನ್ನೆಲೆಯಲ್ಲಿ ಬಹುತೇಕ ಕಡೆಗಳಲ್ಲಿ ಪ್ರದರ್ಶನವನ್ನು ರದ್ದು ಮಾಡಲಾಗಿದೆ. ಬಿಡುಗಡೆಗೂ ಮುನ್ನವೇ ಸಿನಿಮಾವನ್ನು ಬಹಿಷ್ಕರಿಸಿ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ಮಾಡಲಾಗಿತ್ತು. ಪ್ರಚಾರದ ಬಗ್ಗೆ ಪ್ರತಿಕ್ರಿಯಿಸಿದ ಬಾಲಿವುಡ್ ನಟ ಅಮೀರ್ ಖಾನ್, ದಯವಿಟ್ಟು ಚಲನಚಿತ್ರವನ್ನು ವೀಕ್ಷಿಸಲು ಪ್ರೇಕ್ಷಕರಿಗೆ ವಿನಂತಿಸಿದರು. ಚಿತ್ರ ಬಿಡುಗಡೆಯಾದ ನಂತರವೂ ಪರ ಮತ್ತು ವಿರೋಧ ಚರ್ಚೆಗಳು ನಡೆಯುತ್ತಲೇ ಇವೆ. ಆದರೆ, ಸಿನಿಮಾ ಪ್ರೇಕ್ಷಕರಿಗೆ ಸಿನಿಮಾದ ಬಗ್ಗೆ ಅಷ್ಟೊಂದು ಆಸಕ್ತಿ ಇದ್ದಂತಿಲ್ಲ. ಈ ಸಿನಿಮಾವನ್ನು ಬಹಿಷ್ಕರಿಸುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರ ನಡೆದಿದೆ.

ಇದನ್ನೂ ಓದಿ : Keerthy Suresh : ಸೋಲಿನಿಂದ ಕಂಗೆಟ್ಟ ಸೌತ್ ನಟಿಗೆ ಸಖತ್ ಅಫರ್, ಹೊಂಬಾಳೆ ನೆಕ್ಸ್ಟ್ ಮೂವಿಗೆ‌ ಕೀರ್ತಿ ಸುರೇಶ್ ನಾಯಕಿ

ಇದನ್ನೂ ಓದಿ : ಕೆಜಿಎಫ್-2 ಸಿನಿಮಾ ನಿಮ್ಮ ಮನೆ ಬಾಗಿಲಿಗೆ : ಯಶ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್

ಇದನ್ನೂ ಓದಿ : Shilpa Shetty broke her leg: ಶೂಟಿಂಗ್ ವೇಳೆ ಅವಘಡ: ಕಾಲು ಮುರಿದುಕೊಂಡ ಶಿಲ್ಪಾ ಶೆಟ್ಟಿ

ಇದನ್ನೂ ಓದಿ : Ramya Re Entry : ರಮ್ಯನಿಗೆ ಜೊತೆಯಾದ ರಾಜ್ ಶೆಟ್ಟಿ: ಸ್ಯಾಂಡಲ್ ವುಡ್ ಮೋಹಕ ತಾರೆ ಗ್ರ್ಯಾಂಡ್ ರೀ ಎಂಟ್ರಿ

Aamir Khan Lal Singh Chadha 1300 shows cancelled

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular