Laal Singh Chaddha : ಲಾಲ್​ ಸಿಂಗ್​ ಛಡ್ಡಾ : ತನ್ನ ಸಿನಿ ಕರಿಯರ್​ನಲ್ಲಿ ಹಿಂದೆಂದೂ ಕಾಣದ ಸೋಲನ್ನುಂಡ ಆಮೀರ್ ಖಾನ್​

Laal Singh Chaddha : ಆಮೀರ್​ ಖಾನ್​​ರ ಸಿನಿಮಾಗಳು ಅಂದರೆ ಅದು ಬ್ಲಾಕ್​ಬಸ್ಟರ್ ಹಿಟ್​ ಎಂಬ ಕಾಲವೊಂದಿತ್ತು. ವರ್ಷಕ್ಕೆ ಒಂದೇ ಸಿನಿಮಾ ನೀಡುತ್ತಿದ್ದರೂ ಸಹ ಆಮೀರ್ ಖಾನ್​ ವರ್ಷಪೂರ್ತಿ ನೆನಪಿಟ್ಟುಕೊಳ್ಳುವಂತೆ ಇರುತ್ತಿದ್ದವು. ಆದರೆ ಟಾಮ್​ ಹ್ಯಾಂಕ್ಸ್​ ಅಭಿನಯದ ಫಾರೆಸ್ಟ್​ ಗಂಪ್​​​ನ ರಿಮೇಕ್​​ ಸಿನಿಮಾವಾದ ಲಾಲ್​ ಸಿಂಗ್​ ಚಡ್ಡಾ ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ನಟಿಸಿರುವ ಆಮೀರ್​ ಖಾನ್​​ ಈ ಸಿನಿಮಾವನ್ನು ಪ್ರೇಕ್ಷಕರಿಗೆ ತಲುಪಿಸುವಲ್ಲಿ ಎಡವಿದ್ದಾರೆ .


ಥಿಯೇಟರ್​ನಲ್ಲಿ ಸಿನಿಮಾ ಬಿಡುಗಡೆಗೊಂಡ ಎರಡು ದಿನಗಳಲ್ಲಿ ಲಾಲ್​ ಸಿಂಗ್​​ ಚಡ್ಡಾ ಸಿನಿಮಾವು ಬಾಕ್ಸಾಫೀಸಿನಲ್ಲಿ ಕೇವಲ 19 ಕೋಟಿ ರೂಪಾಯಿಗಳನ್ನು ಗಳಿಸಲಷ್ಟೇ ಶಕ್ತವಾಗಿವೆ. ಆಮೀರ್ ಖಾನ್​ರ ದೇಶ ವಿರೋಧಿ ಹೇಳಿಕೆಗಳ ಜೊತೆಯಲ್ಲಿ ಅಕ್ಷಯ್​ ಕುಮಾರ್​​ರ ರಕ್ಷಾ ಬಂಧನ್​ ಸಿನಿಮಾ ಕೂಡ ಲಾಲ್​ ಸಿಂಗ್​ ಚಡ್ಡಾಗೆ ಠಕ್ಕರ್​​ ನೀಡಿವೆ .


ಲಾಲ್​ ಸಿಂಗ್​ ಚಡ್ಡಾ ಸಿನಿಮಾದಲ್ಲಿ ಆಮೀರ್​ ಖಾನ್​ಗೆ ಜೋಡಿಯಾಗಿ ಕರೀನಾ ಕಪೂರ್​​ ಕಾಣಿಸಿಕೊಂಡಿದ್ದಾರೆ. ಸೌತ್​ ಸ್ಟಾರ್​ ನಾಗ ಚೈತನ್ಯ ಪಾಲಿಗಿದು ಚೊಚ್ಚಲ ಬಾಲಿವುಡ್​ ಸಿನಿಮಾವಾಗಿದೆ. ಈ ಸಿನಿಮಾವನ್ನು ಸೀಕ್ರೆಟ್​​ ಸೂಪರ್​ ಸ್ಟಾರ್​ ಖ್ಯಾತಿಯ ಅದ್ವೈತ್​​ ಚಂದನ್​ ನಿರ್ದೇಶಿಸಿದ್ದಾರೆ. ಹಾಗೂ ಅತುಲ್​​ ಕುಲಕರ್ಣಿ ಕತೆ ಹೆಣೆದಿದ್ದಾರೆ .


ಬಾಕ್ಸಾಫೀಸಿನ ಮಾಹಿತಿಯ ಪ್ರಕಾರ ಲಾಲ್​ ಸಿಂಗ್​ ಚಡ್ಡಾ ಶುಕ್ರವಾರದ ವೇಳೆಗೆ ಸುಮಾರು 7 ಕೋಟಿ ರೂಪಾಯಿ ನಿವ್ವಳ ಸಂಗ್ರಹವನ್ನು ಹೊಂದಿದೆ. ಈ ಮೂಲಕ 40 ಪ್ರತಿಶತ ಕುಸಿತ ಕಂಡಿದೆ. ಮಾಸ್​ ಮಾರ್ಕೆಟ್​​ನಲ್ಲಿ ಲಾಲ್​ ಸಿಂಗ್ ಚಡ್ಡಾ ಚಿತ್ರವು ಅತ್ಯಂತ ಕಳಪೆ ಕಲೆಕ್ಷನ್​​ ಕಾಣುತ್ತಿದೆ ಎಂದು ವರದಿಯಾಗಿದೆ.

ಈ ಸಂಬಂಧ ಟ್ವೀಟ್​ ಮಾಡಿರುವ ಚಲನಚಿತ್ರ ವ್ಯಾಪಾರ ವಿಶ್ಲೇಷಕ ತರಣ್​ ಆದರ್ಶ್​,#LaalSinghChaddha ಮೊದಲ ದಿನದಲ್ಲಿ ಆಘಾತಕಾರಿ ಕಲೆಕ್ಷನ್​ ಮಾಡಿದೆ. ಪ್ರೀಮಿಯಂ ಮಲ್ಟಿಪ್ಲೆಕ್ಸ್​​ಗಳಲ್ಲಿ ಕಲೆಕ್ಷನ್​ ಉತ್ತಮವಾಗಿದೆ. ಆದರೆ ಮಾಸ್​ ಸರ್ಕ್ಯೂಟ್​​ಗಳಲ್ಲಿ ದುರ್ಬಲ ಕಲೆಕ್ಷನ್​ ಮಾಡುತ್ತಿದೆ. ವೀಕೆಂಡ್​​ನಲ್ಲಿ ಸಿನಿಮಾ ಉತ್ತಮ ಕಲೆಕ್ಷನ್​ ಮಾಡುವ ನಿರೀಕ್ಷೆಯಿದೆ ಎಂದು ಬರೆದುಕೊಂಡಿದ್ದಾರೆ.

ಶುಕ್ರವಾರದಂದು ದೆಹಲಿ ಮೂಲದ ವಕೀಲರೊಬ್ಬರು ಅಮೀರ್ ಖಾನ್​, ಪ್ಯಾರಾಮೌಂಟ್​​ ಪಿಕ್ಚರ್ಸ್​ ಹಾಗೂ ಹಲವರ ವಿರುದ್ಧ ಲಾಲ್​ ಸಿಂಗ್​ ಚಡ್ಡಾದಲ್ಲಿ ಭಾರತೀಯ ಸೇನೆಯನ್ನು ಅಗೌರವಗೊಳಿಸಿದ್ದಾರೆ ಹಾಗೂ ಹಿಂದೂ ಭಾವನೆಗಳನ್ನು ಧಕ್ಕೆಗೊಳಿಸಿದ್ದಾರೆ ಎಂದು ಆರೋಪಿಸಿದ ದೆಹಲಿ ಪೊಲೀಸ್ ಕಮಿಷನರ್ ಸಂಜಯ್ ಅರೋರಾರಿಗೆ ದೂರು ನೀಡಿದ್ದಾರೆ.


ಈ ಸಿನಿಮಾದಲ್ಲಿ ಕಾರ್ಗಿಲ್​ ಯುದ್ಧದಲ್ಲಿ ಹೋರಾಡಲು ಮಾನಸಿಕ ಅಸ್ವಸ್ಥ ವ್ಯಕ್ತಿಗೆ ಸೇನೆಗೆ ಸೇರಲು ಅವಕಾಶ ನೀಡಲಾಯಿತು ಎಂಬ ರೀತಿಯಲ್ಲಿ ಚಿತ್ರಿಸಲಾಗಿದೆ. ಕಾರ್ಗಿಲ್​​ ಯುದ್ಧದಲ್ಲಿ ಹೋರಾಡಲು ದೈಹಿಕವಾಗಿ ಸದೃಢರಾದ ಸಿಬ್ಬಂದಿಯನ್ನೇ ಕಳುಹಿಸಿಕೊಡಲಾಗಿದೆ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಆದರೆ ಈ ಸಿನಿಮಾದ ಮೂಲಕ ಉದ್ದೇಶಪೂರ್ವಕವಾಗಿ ಭಾರತೀಯ ಸೇನಾ ಸಿಬ್ಬಂದಿಯನ್ನು ದೈಹಿಕವಾಗಿ ಅಸಮರ್ಥರು ಎಂದು ತೋರಿಸಲಾಗಿದೆ ಎಂದು ವಕೀಲ ವಿನೀತ್​​ ಜಿಂದಾಲ್​ ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನು ಓದಿ : sonia gandhi tests positive :ಕಾಂಗ್ರೆಸ್​ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಗೆ ಮತ್ತೆ ಕೊರೊನಾ ಪಾಸಿಟಿವ್​​

ಇದನ್ನೂ ಓದಿ : Union Minister Prahlad Joshi : ‘ಯುವತಿಯರು ಕೆಲಸಕ್ಕಾಗಿ ಮಂಚ ಹತ್ತಬೇಕು’ : ಪ್ರಿಯಾಂಕ್​ ಖರ್ಗೆ ಹೇಳಿಕೆಗೆ ಪ್ರಹ್ಲಾದ್​ ಜೋಶಿ ಆಕ್ಷೇಪ

Laal Singh Chaddha box office day 2 collection: Aamir Khan’s film falls by 40%, collects ₹7 crore amid controversies

Comments are closed.