ಪುನೀತ್‌ ರಾಜ್‌ಕುಮಾರ್‌, ರಮ್ಯಾ ಅಭಿನಯದ ಅಭಿ ಸಿನಿಮಾಕ್ಕೆ 20 ವರ್ಷ ಸಂಭ್ರಮ

ಸ್ಯಾಂಡಲ್‌ವುಡ್‌ ಕ್ವೀನ್‌ ರಮ್ಯಾ ಹಾಗೂ ನಟ ಪುನೀತ್‌ ರಾಜ್‌ಕುಮಾರ್‌ ಅಭಿನಯದ “ಅಭಿ” ಸಿನಿಮಾಕ್ಕೆ (Abhi Film) ಇಂದು (ಏಪ್ರಿಲ್‌ 25) 20 ವರ್ಷ ಕಳೆದಿದೆ. ಅಭಿ ಸಿನಿಮಾ ಈ ಜೋಡಿಯ ಮೊದಲ ಸಿನಿಮಾವಾಗಿದ್ದು, ಭರ್ಜರಿ ಯಶಸ್ಸನ್ನು ಕಂಡಿದೆ. ಈ ಸಿನಿಮಾದ ನಂತರ ರಮ್ಯಾ ಹಾಗೂ ನಟ ಪುನೀತ್‌ ರಾಜ್‌ಕುಮಾರ್‌ ಕಾಂಬಿನೇಷನ್‌ನಲ್ಲಿ (Abhi Movie ) ಮೂಡಿ ಬಂದ ಎಲ್ಲಾ ಸಿನಿಮಾಗಳು ಸಖತ್‌ ಹಿಟ್‌ ಆಗಿದ್ದವು. ಹಾಗಾಗಿ ತೆರೆ ಮೇಲೆ ಈ ಜೋಡಿಯನ್ನು ನೋಡಲು ಸಿನಿಪ್ರೇಕ್ಷಕರು ಕಾಯುತ್ತಿದ್ದರು. ಇದೀಗ ಅಪ್ಪು ಅಗಲಿಕೆಯಿಂದ ಆ ಕನಸು ಕೂಡ ಕನಸಾಗಿಯೇ ಉಳಿದಿದೆ. ಸದ್ಯ ನಟಿ ರಮ್ಯಾ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮ ಮೊದಲ ಸಿನಿಮಾ ಹಾಗೂ ಪುನೀತ್‌ ರಾಜ್‌ಕುಮಾರ್ ಜೊತೆಗಿನ ಸವಿ ನೆನಪುನ್ನು ಮೆಲಕು ಹಾಕಿದ್ದಾರೆ.

ನಟಿ ರಮ್ಯಾ ತಮ್ಮ ಇನ್‌ಸ್ಟಾಗ್ರಮಾನಲ್ಲಿ, “ನನ್ನ ಮೊದಲ ಚಿತ್ರ ,ಅಪ್ಪು ಅವರ ಜೊತೆಗಿನ ‘ಅಭಿ’ ಬಿಡುಗಡೆ ಆಗಿ ಇಂದಿಗೆ 20 ವರ್ಷಗಳು. ನನ್ನ ಅಭಿಮಾನಿಗಳ ಹಾಗೂ ಹಿತೈಷಿಗಳ ಕಡೆಯಿಂದ ಇಲ್ಲಿಯವರೆಗೂ ನಾನು ಪಡೆದಿರುವ ನಿರಂತರ ಪ್ರೀತಿಗೆ ನನ್ನ ಹೃದಯವು ಕೃತಜ್ಞತೆಯಿಂದ ತುಂಬಿದೆ. ನನಗೆ ಅವಕಾಶ ಕೊಟ್ಟ ರಾಜ್ ಕುಟುಂಬಕ್ಕೆ ನಾನು ಸದಾ ಚಿರಋಣಿ ಮತ್ತು ನನ್ನ ಸುದೀರ್ಘ ಸಿನಿ ಪಯಣದಲ್ಲಿ ನನ್ನೊಂದಿಗೆ ಕೆಲಸ ಮಾಡಿದ ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳು. ಪ್ರೀತಿಯಿಂದ ನಿಮ್ಮ ರಮ್ಯಾ ” ಎಂದು ಪೋಸ್ಟ್‌ ಮಾಡುವ ಅವಕಾಶ ನೀಡಿದ ದೊಡ್ಮನೆಯವರನ್ನು ಸ್ಮರಿಸಿಕೊಂಡಿದ್ದಾರೆ.

ಈ ಸಿನಿಮಾವು ಪ್ರೇಮಕಥೆ ಜೊತೆಗೆ ಕೋಮ ಸೌಹಾರ್ದತೆಯನ್ನು ಸಂದೇಶ ಸಾರುವ ಕಥೆಯನ್ನು ಒಳಗೊಂಡಿದೆ. ಇನ್ನು ನಿರ್ಮಾಪಕಿ ಪಾರ್ವತಮ್ಮ ರಾಜ್‌ಕುಮಾರ್‌ ರಮ್ಯಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದರು. ಅಸಲಿಗೆ ಅಪ್ಪು ಸಿನಿಮಾಗೆ ರಮ್ಯಾ ಅವರೇ ನಾಯಕಿ ಆಗಬೇಕಿತ್ತು. ಸಿನಿಮಾಗೆ ಬರುವ ಮುನ್ನ ರಮ್ಯಾ ಮಾಡೆಲಿಂಗ್‌ನಲ್ಲಿ ಗುರುತಿಸಿಕೊಂಡಿದ್ದರು. ಅನೇಕ ಫ್ಯಾಷನ್‌ ಶೋಗಳಲ್ಲಿ ರಾಂಪ್‌ ವಾಕ್‌ ಮಾಡಿದ್ದರು. ಅಪ್ಪು ಸಿನಿಮಾಕ್ಕೆ ರಮ್ಯಾ ಆಡಿಷನ್‌ ನೀಡಿದ್ದರು. ಆದರೆ ಆ ಸಿನಿಮಾಕ್ಕೆ ರಮ್ಯಾ ರಿಜೆಕ್ಟ್‌ ಆಗಿದ್ದರು.

ಇದನ್ನೂ ಓದಿ : ಪ್ರೇಮ್‌ ನಿರ್ದೆಶನದ ಕೆಡಿ ಸಿನಿಮಾದ ನಾಯಕಿ ಲುಕ್‌ ಬಿಡುಗಡೆಗೆ ಡೇಟ್‌ ಫಿಕ್ಸ್

ಇದನ್ನೂ ಓದಿ : ಡಾ. ರಾಜಕುಮಾರ್‌ ಹುಟ್ಟುಹಬ್ಬ : ಅಪ್ಪಾಜಿ ಬರ್ತಡೆಗೆ ವಿಶೇಷ ಪತ್ರ ಬರೆದ ಮಗ ಶಿವ ರಾಜ್‌ಕುಮಾರ್‌

ರಮ್ಯಾ ದಪ್ಪ ಇದ್ದ ಕಾರಣಕ್ಕೆ ಪಾರ್ವತಮ್ಮ , ರಮ್ಯಾಗೆ ಸಣ್ಣ ಆಗಲು ಸಮಯ ನೀಡಿ ಅಪ್ಪು ಸಿನಿಮಾಕ್ಕೆ ರಕ್ಷಿತಾ ಅವರನ್ನು ಆಯ್ಕೆ ಮಾಡಿಕೊಂಡರು ಎಂಬ ಮಾತಿದೆ. ಇದಾದ ನಂತರ ಕೊನೆಗೂ ಅಭಿ ಸಿನಿಮಾದ ಮೂಲಕ ನಾಯಕಿಯಾಗಿ ಎಂಟ್ರಿ ಕೊಟ್ಟ ರಮ್ಯಾ ಈಗ ಸ್ಯಾಂಡಲ್‌ವುಡ್‌ ಮೋಹಕತಾರೆ ಆಗಿ ಹೆಸರಾಗಿದ್ದಾರೆ. ಈ ಸಿನಿಮಾಕ್ಕೆ ಕೆ. ಕಲ್ಯಾಣ್‌, ಹಂಸಲೇಖ, ವಿ ನಾಗೇಂದ್ರ ಪ್ರಸಾದ್‌ ಸಾಹಿತ್ಯಕ್ಕೆ ಗುರುಕಿರಣ್‌ ಸಂಗೀತ ನೀಡಿದ್ದರು. ಪೂರ್ಣಿಮಾ ಎಂಟರ್‌ಪ್ರೈಸಸ್‌ ಬ್ಯಾನರ್‌ ಅಡಿ ಪಾರ್ವತಮ್ಮ ರಾಜ್‌ಕುಮಾರ್‌ ನಿರ್ಮಿಸಿದ್ದ ಈ ಸಿನಿಮಾಕ್ಕೆ ದಿನೇಶ್‌ ಬಾಬು ಆಕ್ಷನ್‌ ಕಟ್‌ ಹೇಳಿದ್ದರು. 25 ಏಪ್ರಿಲ್‌ 2003 ರಂದು ಈ ಸಿನಿಮಾ ತೆರೆ ಕಂಡಿತ್ತು.

Abhi Movie : Puneeth Rajkumar, Ramya starrer Abhi Movie celebrates 20 years

Comments are closed.