Abhishek Ambarish wedding : ಅಭಿಷೇಕ್‌ ಅಂಬರೀಶ್‌ ಮದುವೆ ಫಿಕ್ಸ್‌ : ಹುಡುಗಿ ಯಾರು? ಮದುವೆ ಯಾವಾಗ ಗೊತ್ತಾ ?

ಸ್ಯಾಂಡಲ್‌ವುಡ್‌ ರೆಬಲ್‌ ಸ್ಟಾರ್‌ ಅಂಬರೀಶ್‌ ಪುತ್ರನಿಗೆ ಕಂಕಣ ಭ್ಯಾಗ ಕೂಡಿ ಬಂದಿದೆ. (Abhishek Ambarish wedding) ನಟ ಅಂಬರೀಶ್‌ ಹಾಗೂ ಸಂಸದೆ ಸುಮಲತಾ ಮುದ್ದಿನ ಮಗನಾದ ಅಭಿಷೇಕ್‌ ಅಂಬರೀಶ್‌ ಡಿಸೆಂಬರ್‌ ಎರಡನೇ ವಾರ ಅರಮನೆ ಮೈದಾನದಲ್ಲಿ ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ ಎಂದು ವದಂತಿ ಹರಿದಾಡುತ್ತಿದೆ. ಈಗಾಗಲೇ ಜೂನಿಯರ್‌ ರೆಬಲ್‌ ಸ್ಟಾರ್‌ನ್ನು ಮದುವೆ ಆಗುವ ಹುಡುಗಿ ಯಾರೆಂದು ಎಲ್ಲರಲ್ಲೂ ಪ್ರಶ್ನೆ ಹುಟ್ಟಿಕೊಂಡಿರುತ್ತದೆ. ಆ ಪ್ರಶ್ನೆಗೆ ಈಗ ಉತ್ತರ ಇಲ್ಲಿದೆ.

ಕೆಲವು ಮೂಲಗಳಿಂದ ತಿಳಿದು ಬಂದಿರುವ ಮಾಹಿತಿ ಪ್ರಕಾರ ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್‌ ವಿವಾಹವಾಗುತ್ತಿದ್ದಾರೆ. ಅಭಿಷೇಕ್‌ ತಂದೆ- ತಾಯಿ ವಿವಾಹ ವಾರ್ಷಿಕೊತ್ಸವದ ದಿನವಾದ ಡಿಸೆಂಬರ್‌ 8ರಂದು ಅನೌನ್ಸ್‌ ಮಾಡಲಿದ್ದು ಡಿಸೆಂಬರ್‌ 11ರಂದು ಮದುವೆ ನಿಶ್ಚಿತಾರ್ಥ ಮಾಡಲು ಗುರು ಹಿರಿಯರು ನಿಶ್ಚಯಿಸಿದ್ದಾರೆ ಎನ್ನಲಾಗಿದೆ. ಇವರ ನಿಶ್ಚಿತಾರ್ಥಕ್ಕೆ ಕಾಲಿವುಡ್‌ ಸೂಪರ್‌ ಸ್ಟಾರ್‌ ರಜನಿಕಾಂತ್‌ರನ್ನು ಕೂಡ ಆಹ್ವಾನಿಸಲಾಗಿದೆ.

ಖ್ಯಾತ ಫ್ಯಾಷನ್‌ ಡಿಸೈನರ್‌ ಗುರು ಪ್ರಸಾದ್‌ ಬಿದ್ದಪ್ಪ ಪುತ್ರಿ ಅವಿವಾ ಬಿದ್ದಪ್ಪ ಮತ್ತು ಅಭಿಷೇಕ್‌ ಮೂರು ವರ್ಷಗಳಿಂದ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಇಬ್ಬರ ಪ್ರೀತಿಯನ್ನು ಮನೆಯಲ್ಲಿ ಗುರು-ಹಿರಿಯರು ಒಪ್ಪಿಕೊಂಡು ಮದುವೆ ಮಾಡಿಸಲು ತಯಾರಿ ನಡೆಸಿದ್ದಾರೆ. ಅಭಿಷೇಕ್‌ ಅಂಬರೀಶ್‌ ಕೈ ಹಿಡಿಯುತ್ತಿರುವ ಅವಿವಾ ಬಿದ್ದಪ್ಪ ಮಾಡಲ್‌ ಎಂದು ಹೇಳಲಾಗುತ್ತಿದೆ. ಆದರೆ ನಿಶ್ಚಿತಾರ್ಥದವರೆಗೂ ಹುಡುಗಿಯ ಬಗ್ಗೆ ಆಗಲಿ ಅಥವಾ ಮದುವೆ ಬಗ್ಗೆ ಆಗಲಿ ಯಾರಿಗೂ ವಿಚಾರ ತಿಳಿಯಬಾರದು ಎನ್ನುವ ಕಾರಣದಿಂದ ಹುಡುಗಿ ಹಾಗೂ ನಿಶ್ಚಿತಾರ್ಥದ ದಿನಾಂಕವನ್ನು ಕುಟುಂಬ ಸದಸ್ಯರು ಗುಟ್ಟಾಗಿ ಇಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ನಿಶ್ಚಿತಾರ್ಥ ತಯಾರಿ ನಡೆಯುತ್ತಿದ್ದು, ಮದುವೆ ದಿನಾಂಕ ಹಾಗೂ ಹುಡುಗಿಯ ಹಿನ್ನಲೆ ಸೇರಿದಂತೆ ಒಂದಷ್ಟು ಮಾಹಿತಿಗಳು ಹೊರಬೀಳಬೇಕಿದೆ.

ಇದನ್ನೂ ಓದಿ : International Film Festival : ಅಂತಾರಾಷ್ಟ್ರೀಯ ಸಿನಿಮೋತ್ಸವ : “ಕೆಜಿಎಫ್‌” ಸಿನಿಮಾ ಹಾಡಿ ಹೊಗಳಿದ ರಾಣಾ ದಗ್ಗುಬಾಟಿ

ಇದನ್ನೂ ಓದಿ : Kriti who dated Prabhas : ಪ್ರಭಾಸ್ ಜೊತೆ ಡೇಟಿಂಗ್ : ವದಂತಿ ಬಗ್ಗೆ ಮೌನ ಮುರಿದ ಕೃತಿ ಸನೋನ್

ಇದನ್ನೂ ಓದಿ : Actress Ramya Birthday : ಜಪಾನಿನಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ನಟಿ ರಮ್ಯಾ

ಕೆಲ ದಿನಗಳ ಹಿಂದೆ ಅಭಿಷೇಕ್‌ ಮದುವೆ ಬಗ್ಗೆ ವದಂತಿಗಳು ಹರಿದಾಡಿದವು ಅದರ ಬಗ್ಗೆ ಪ್ರತಿಕ್ರಿಯಿಸಿದ ಅವರು ಪ್ರತಿ ಸಲ ನನ್ನ ಮದುವೆ ನಿಶ್ಚಿತಾರ್ಥದ ಬಗ್ಗೆ ಈ ರೀತಿ ನ್ಯೂಸ್‌ ಕೇಳುತ್ತಿದ್ದೇನೆ. ನಾನು ನಿತ್ಯ ಕನಕಪುರಕ್ಕೆ ಶೂಟಿಂಗ್‌ ಹೋಗುತ್ತಿದ್ದೇನೆ. ಇದರ ಮಧ್ಯೆ ಯಾವ ಹುಡುಗಿ ನೋಡಿದೆ, ಯಾವಾಗ ನಿಶ್ಚಿತಾರ್ಥ ಮಾಡಿಕೊಂಡೆ ಎಂದು ಗೊತ್ತಿಲ್ಲ. ಪದೇ ಪದೇ ನಿಶ್ಚಿತಾರ್ಥದ ಬಗ್ಗೆ ಮಾತನಾಡುತ್ತಿದ್ದರೆ ಮುಂದೆ ನನಗೆ ಯಾರು ಹುಡುಗಿ ಕೊಡಲ್ಲ” ಎಂದು ನಗೆ ಚಟಾಕಿ ಹಾರಿಸಿದ್ದರು.

Abhishek Ambarish Marriage Fix : Who is the girl? Do you know when the wedding is?

Comments are closed.