Cyber Case : ನ್ಯಾಯಾಧೀಶರ ಪತ್ನಿಯ ಬ್ಯಾಂಕ್ ಖಾತೆಗೆ ಕನ್ನ : 13 ಲಕ್ಷ ರೂ. ದೋಚಿದ ಸೈಬರ್ ಕಳ್ಳರು

ಲಕ್ನೋ : ನ್ಯಾಯಾಧೀಶರೊಬ್ಬರ ಪತ್ನಿ ಕ್ರೆಡಿಟ್ ಕಾರ್ಡ್‌ನ ಮಿತಿಯನ್ನು ಹೆಚ್ಚಿಸಲು ಪ್ರಯತ್ನಿಸುತ್ತಿದ್ದಾಗ ಸೈಬರ್ ದರೋಡೆಕೋರರು (Cyber Case) 13 ಲಕ್ಷ ರೂ. ದರೋಡೆ ಮಾಡಿದ್ದಾರೆ. ವೆಬ್‌ಸೈಟ್‌ನಲ್ಲಿ ಲಭ್ಯವಾದ ಖಾಸಗಿ ಬ್ಯಾಂಕ್‌ನ ಸಹಾಯವಾಣಿ ಸಂಖ್ಯೆಯಿಂದ ವಂಚನೆ ಆಗಿದೆ ಎಂದು ಸಂತ್ರಸ್ತೆ ತನ್ನ ದೂರಿನಲ್ಲಿ ಪೊಲೀಸರಿಗೆ ತಿಳಿಸಿದ್ದಾರೆ.

ವಂಚಕರು ಆಕೆಯ ಮೊಬೈಲ್‌ ಸಂಖ್ಯೆಯಿಂದ ರಿಮೋಟ್ ಕಂಟ್ರೋಲ್ ಆಕ್ಸೆಸ್ ತೆಗೆದುಕೊಂಡು, ಆ ಮೂಲಕ ಆಕೆಯ ಖಾತೆಯ ವಿವರಗಳನ್ನು ಪಡೆದು ಸಾಲ ಮಂಜೂರು ಮಾಡಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ ಎಂದು ಸೈಬರ್ ಸೆಲ್ ಇನ್ಸ್‌ಪೆಕ್ಟರ್ ರಂಜೀತ್ ಸಿಂಗ್ ಹೇಳಿದ್ದಾರೆ. “ನಾವು ಎಫ್‌ಐಆರ್ ದಾಖಲಿಸಿದ್ದೇವೆ. ವಂಚಕರು ಇರುವ ಸ್ಥಳ ಪತ್ತೆ ಹಚ್ಚುವ ಪ್ರಯತ್ನ ಮುಂದುವರಿದಿದೆ ಎಂದು ತಿಳಿಸಿದ್ದಾರೆ.

ಸಂತ್ರಸ್ತೆ ವೆಬ್‌ಸೈಟ್‌ ದೊರೆತ ನಂಬರ್ ಡಯಲ್ ಮಾಡಿದಾಗ, ಖಾಸಗಿ ಬ್ಯಾಂಕ್ ಪ್ರತಿನಿಧಿಯಂತೆ ನಟಿಸಿದ ವಂಚಕನೊಬ್ಬ ಆಕೆಯ ಕ್ರೆಡಿಟ್ ಮಿತಿಯನ್ನು ಹೆಚ್ಚಿಸಲು 15,000 ರೂ.ಗಳನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲು ಕೇಳಿದ್ದಾನೆ. ನವೆಂಬರ್ 25 ರಂದು ಮೊತ್ತವನ್ನು ಮರುಪಾವತಿಸಲಾಗುವುದು ಎಂದು ಭರವಸೆ ನೀಡಿದಾನೆ. ಸಂತ್ರಸ್ತೆಗೆ ಹಣ ಮರುಪಾವತಿ ಆಗದೇ ಇದ್ದಾಗ ಮತ್ತೊಮ್ಮೆ ಆ ಸಂಖ್ಯೆಗೆ ಕರೆ ಮಾಡಿದ್ದೇನೆ ಎಂದು ದೂರಿನಲ್ಲಿ ಹೇಳಿದ್ದಾರೆ. ವಂಚಕನು ಆಕೆಗೆ ಲಿಂಕ್ ಕಳುಹಿಸಿ ಆಕೆಯ ಬ್ಯಾಂಕ್ ಖಾತೆಯ ವಿವರಗಳನ್ನು ಕೇಳುವ ಫಾರ್ಮ್‌ನ್ನು ಭರ್ತಿ ಮಾಡಲು ಹೇಳಿದನು. “ನನಗೆ ನನ್ನ ಹಣವನ್ನು ಹಿಂತಿರುಗಿಸಲಿಲ್ಲ ಮತ್ತು ನವೆಂಬರ್ 28 ರಂದು ನನ್ನ ಬ್ಯಾಂಕ್ ಖಾತೆಯಿಂದ 13 ಲಕ್ಷ ರೂಪಾಯಿಯನ್ನು ಸಾಲವಾಗಿ ತೆಗೆದುಕೊಳ್ಳಲಾಗಿದೆ” ಎಂದು ಆಕೆ ಹೇಳಿದಾಳೆ.

ಪೊಲೀಸರ ಪ್ರಕಾರ, ವಂಚಕರು ಗೂಗಲ್‌ನಲ್ಲಿ ತಮ್ಮ ಸಂಖ್ಯೆಯನ್ನು ಕಸ್ಟಮರ್ ಕೇರ್ ಸಹಾಯವಾಣಿ ಸಂಖ್ಯೆ ಎಂದು ಹೇಳಿಕೊಂಡಿದ್ದಾರೆ. ಅವರು ತಮ್ಮ ಮೊಬೈಲ್ ಫೋನ್‌ಗಳಿಗೆ ಪ್ರವೇಶವನ್ನು ನೀಡುವ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಲು ಕರೆ ಮಾಡಿದವರಿಗೆ ಕೇಳುತ್ತಾರೆ. ಅದು ಅವರ ಬ್ಯಾಂಕ್ ವಿವರಗಳು ಮತ್ತು OTP ಗಳಿಗೆ ಪ್ರವೇಶವನ್ನು ಪಡೆಯಲು ಸಹಾಯ ಮಾಡುತ್ತದೆ.

ಇದನ್ನೂ ಓದಿ : Vikram Kirloskar: ಟೊಯೋಟ ಕಿರ್ಲೋಸ್ಕರ್‌ ಮೋಟಾರ್‌ ಉಪಾಧ್ಯಕ್ಷ ವಿಕ್ರಮ್‌ ಕಿರ್ಲೋಸ್ಕರ್‌ ನಿಧನ

ಇದನ್ನೂ ಓದಿ : Kumble Sundar Rao: ಹಿರಿಯ ಯಕ್ಷಗಾನ ಕಲಾವಿದ, ಮಾಜಿ ಶಾಸಕ ಕುಂಬ್ಳೆ ಸುಂದರ್‌ ರಾವ್‌ ವಿಧಿವಶ

ಇದನ್ನೂ ಓದಿ : BMTC Bus Accident: ಬೈಕ್‌ – ಬಿಎಂಟಿಸಿ ಬಸ್‌ ಭೀಕರ ಅಪಘಾತ: ಇಬ್ಬರು ಸಾವು

“ಕಾರ್ಡ್ ಸಂಖ್ಯೆ, ಸಿವಿವಿ, ಎಟಿಎಂ ಪಿನ್, ಬ್ಯಾಂಕಿಂಗ್ ಪಾಸ್‌ವರ್ಡ್‌ಗಳು ಮತ್ತು ಒನ್-ಟೈಮ್ ಪಾಸ್‌ವರ್ಡ್‌ಗಳ (ಒಟಿಪಿ) ನಂತಹ ಬ್ಯಾಂಕಿಂಗ್ ವಿವರಗಳನ್ನು ಯಾವುದೇ ಸಂದರ್ಭದಲ್ಲಿ ಫೋನ್ ಅಥವಾ ಇ-ಮೇಲ್ ಮೂಲಕ ಯಾರೊಂದಿಗೂ ಹಂಚಿಕೊಳ್ಳಬೇಡಿ. ಸಾಮಾನ್ಯ ಅಭ್ಯಾಸವಾಗಿ, ಯಾವುದೇ ಬ್ಯಾಂಕ್ ಅಥವಾ ಪ್ರತಿಷ್ಠಿತ ಕಂಪನಿಯು ತನ್ನ ಗ್ರಾಹಕರನ್ನು ಫೋನ್ ಅಥವಾ ಇಮೇಲ್ ಮೂಲಕ ಗೌಪ್ಯ ವಿವರಗಳನ್ನು ಕೇಳುವುದಿಲ್ಲ, ”ಎಂದು ಅಧಿಕಾರಿ ಹೇಳಿದರು.

Cyber Case: Bank account of judge’s wife stolen: Rs 13 lakh. Hacked by cyber thieves

Comments are closed.