ಸೋಮವಾರ, ಏಪ್ರಿಲ್ 28, 2025
HomeCinemaAnanth nag: ಅಬ್ರಕಡಾಬ್ರ ಎಂದು ಹಿರಿಯ ನಟ ಅನಂತ್ ನಾಗ್: ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್.

Ananth nag: ಅಬ್ರಕಡಾಬ್ರ ಎಂದು ಹಿರಿಯ ನಟ ಅನಂತ್ ನಾಗ್: ಏನಿದು ಸ್ಟೋರಿ ಇಲ್ಲಿದೆ ಡಿಟೇಲ್ಸ್.

- Advertisement -

ಅಪ್ಘಾನಿಸ್ತಾನ್ ವಿಚಾರದಲ್ಲಿ ಹಲವರನ್ನು ತರಾಟೆಗೆ ತೆಗೆದುಕೊಂಡಿದ್ದ ಹಿರಿಯ ಅನಂತ ನಾಗ್ ಅಷ್ಟೇ ಲವಲವಿಕೆಯಿಂದ ಸ್ಯಾಂಡಲ್ ವುಡ್ ಗೆ ಮರಳಿದ್ದಾರೆ. ಒಂದಾದ ಮೇಲೊಂದು ಸಿನಿಮಾದಲ್ಲಿ ಬ್ಯುಸಿಯಾಗಿರೋ ಅನಂತ್ ನಾಗ್ ಮುಂದಿನ ಸಿನಿಮಾ ಅಬ್ರಕಡಾಬ್ರ.

ಯುವನಿರ್ದೇಶಕ ರಕ್ಷಿತ್ ಶೆಟ್ಟಿ ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಅನಂತ್ ನಾಗ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾ ಒಪ್ಪಿಕೊಳ್ಳೋಕೆ ಚಿತ್ರಕತೆ ಕಾರಣ ಎಂದಿರುವ ನಟ ಅನಂತ್ ನಾಗ್ ಗೆ ಮೊದಲ ಬಾರಿಗೆ ಚಿತ್ರವೊಂದನ್ನು ನಿರ್ದೇಶಿಸುತ್ತಿರುವ ಶಿಶಿರ ರಾಜ್ ಆಕ್ಷ್ಯನ್ ಕಟ್ ಹೇಳಲಿದ್ದಾರೆ.

ಬಹಳ ಭಿನ್ನವಾದ ಕತೆ ಚಿತ್ರದಲ್ಲಿದೆ. ನಾನು ನನ್ನ ಬಾಲ್ಯವನ್ನು ಉಡುಪಿಯಲ್ಲಿ ಕಳೆದಿದ್ದೇನೆ. ಶಂಕರ್ ನಾಗ್ ಹುಟ್ಟಿದ್ದು ಸಹ ಉಡುಪಿಯಲ್ಲೇ, ಅಲ್ಲಿಯಚಿತ್ರಣವನ್ನು ಸಿನಿಮಾ ಹೊಂದಿರೋದರಿಂದ ಖುಷಿಯಿಂದ ಈ ಸಿನಿಮಾ ಒಪ್ಪಿಕೊಂಡಿದ್ದೇನೆ ಎಂದು ಅನಂತ ನಾಗ್ ವಿವರಣೆ ನೀಡಿದ್ದಾರೆ.

ಇನ್ನು ಅನಂತ ನಾಗ್ ಅವರ ಆಯ್ಕೆ ಮತ್ತು ಸಿನಿಮಾ ಟೈಟಲ್ ಬಗ್ಗೆ ನಟ ಹಾಗೂ ನಿರ್ಮಾಪಕ ರಕ್ಷಿತ್ ಶೆಟ್ಟಿ ಮಾತನಾಡಿದ್ದು, ಜೀವನದಲ್ಲಿ ಒಮ್ಮೆ ತಿರುಗಿ ನೋಡಿದಾಗ ಏನೇನೋ ಸರಿ ಮಾಡಿಲ್ಲ ಎನ್ನಿಸಿಬಿಡುವ ಮುಂದೇನು ಎಂದು ಪ್ರಶ್ನೆ ಮಾಡುವ ವ್ಯಕ್ತಿಯ ಪಾತ್ರ ಇದು. ಈ ಪಾತ್ರಕ್ಕೆ ಅನಂತ ನಾಗ್ ಅವರೇ ಸೂಕ್ತ ವ್ಯಕ್ತಿ ಎನ್ನಿಸಿತು. ಹೀಗಾಗಿ ಅವರನ್ನೇ ಒಪ್ಪಿಸಿದ್ದೇವೆ ಎಂದಿದ್ದಾರೆ.   

ಮ್ಯಾಜಿಕ್ ಹಿನ್ನೆಲೆಯನ್ನು ಹೊಂದಿರುವ ಕಾರಣಕ್ಕೆ ಸಿನಿಮಾಗೆ ಅಬ್ರಕಡಾಬ್ರ ಎಂದು ಹೆಸರಿಡಲಾಗಿದೆ ಎನ್ನುತ್ತಿದೆ ಚಿತ್ರತಂಡ. ಅವಿನಾಶ್ ಸೇರಿದಂತೆ ಹಲವು ಕಲಾವಿದರು ಸಿನಿಮಾದಲ್ಲಿ ನಟಿಸುತ್ತಿದ್ದು, ಅಗಸ್ಟ್ 26 ರಿಂದ ಉಡುಪಿಯಲ್ಲಿ ಸಿನಿಮಾ ಶೂಟಿಂಗ್ ಆರಂಭವಾಗಲಿದೆ.

ಅನಂತ್ ನಾಗ್ ಗೆ ಹಿಂದಿ ಸೇರಿದಂತೆ ಹಲವು ಭಾಷೆಗಳಿಂದ ಸಿನಿಮಾ ಆಫರ್ ಗಳು ಬಂದ್ರೂ ಸದ್ಯ ಕನ್ನಡ ಬಿಟ್ಟು ಬೇರಾವ ಭಾಷೆಯ ಸಿನಿಮಾಗಳನ್ನು ಅನಂತ ನಾಗ್ ಒಪ್ಪಿಕೊಳ್ಳುತ್ತಿಲ್ಲವಂತೆ. ಮಸಾಲೆ ಹಾಗೂ ಕಮರ್ಷಿಯಲ್ ಸಿನಿಮಾಗಳತ್ತ ಆಸಕ್ತಿ ಇಲ್ಲ ಎಂದಿದ್ದಾರೆ ಅನಂತನಾಗ್.

RELATED ARTICLES

Most Popular