ಅಫ್ಘಾನಿಸ್ತಾನದಿಂದ ವಾಪಾಸಾದವರಿಗೆ ಶಾಕ್ ಕೊಟ್ಟ ಕೊರೊನಾ ; 10ಕ್ಕೂ ಅಧಿಕ ಮಂದಿಯಲ್ಲಿ ಪತ್ತೆಯಾದ ‌ಹೆಮ್ಮಾರಿ ಸೋಂಕು

ನವದೆಹಲಿ : ಉಗ್ರರ ಕೈವಶವಾಗಿರುವ ಅಫ್ಘಾನಿಸ್ಥಾನವೀಗ ಭೂಮಿಯ ಮೇಲಿನ ನರಕ. ದಿನ ದಿಂದ ದಿನಕ್ಕೆ ಉಗ್ರರ ದುಷ್ಕೃತ್ಯಗಳು ಮಿತಿಮೀರುತ್ತಿದೆ. ತಾಲಿಬಾನ್ ಉಗ್ರರಿಗೆ ಹೆದರಿ ದೇಶ ತೊರೆದು ಇದೀಗ ಭಾರತಕ್ಕೆ ಆಗಮಿಸಿದ್ದ ಅಫ್ಘಾನಿಸ್ತಾನ ನಾಗರಿಕರ ಪೈಕಿ ಕನಿಷ್ಟ ಹತ್ತಕ್ಕೂ ಅಧಿಕ ಮಂದಿಗೆ ಕೊರೊನಾ ಸೋಂಕು ಇರುವುದು ಪತ್ತೆಯಾಗಿದೆ.

ಸೋಮವಾರ ಮತ್ತು ಮಂಗಳವಾರ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದ ಆಫ್ಘನ್ ನಾಗರಿಕರಿಗೆ ಸೋಂಕು ಪತ್ತೆ ಪರೀಕ್ಷೆ ಕೈಗೊಳ್ಳಲಾಗಿತ್ತು. 81 ಮಂದಿ ಆಫ್ಘನ್ ನಾಗರಿಕರು ಎರಡು ದಿನಗಳ ಅವಧಿಯಲ್ಲಿ ಭಾರತಕ್ಕೆ ಬಂದಿಳಿದಿದ್ದರು ಎಂದು ಐಟಿಬಿಪಿ ಗಡಿ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: ಕೊರೊನಾ ಲಸಿಕೆ ಪಡೆದವರಿಗೆ ಬಿಗ್‌ ಶಾಕ್‌ : 13,768 ಮಂದಿಗೆ ಮತ್ತೆ ಸೋಂಕು

ಸೋಂಕು ಪತ್ತೆಯಾಗಿರುವ ಆಫ್ಗನ್ ನಾಗರಿಕರನ್ನು ದಕ್ಷಿಣ ದೆಹಲಿಯ ಕ್ವಾರಂಟೈನ್ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಕೇಂದ್ರ ಆರೋಗ್ಯ ಸಚಿವಾಲಯ ಹೊರಡಿಸಿರುವ ಅಧಿಸೂಚನೆ ಪ್ರಕಾರ ಅಫ್ಘಾನಿಸ್ತಾನದಿಂದ ಬರುವ ಎಲ್ಲರೂ ಕಡ್ಡಾಯವಾಗಿ 14 ದಿನಗಳ ಕಾಲ ಕ್ವಾರಂಟೈನ್ ನಲ್ಲಿ ಇರಬೇಕಾಗುತ್ತದೆ.

ಸೋಂಕು ಪತ್ತೆ ಪರೀಕ್ಷೆಯಲ್ಲಿ ಪಾಸಿಟಿವ್ ಬಂದವರನ್ನು ಕೊರೊನಾ ಶುಶ್ರೂಷಾ ಕೇಂದ್ರಕ್ಕೆ ಸ್ಥಳಾಂತರಿಸಲಾಗುವುದು ಎಂದು ಅಧಿಸೂಚನೆಯಲ್ಲಿ ಹೇಳಲಾಗಿದೆ. ಇದೇ ವೇಳೆ ಅಫ್ಘಾನಿಸ್ತಾನದಿಂದ ಬಂದಿದ್ದ ಇಬ್ಬರು ಭಾರತೀರಿಗೆ ಸೋಂಕು ತಗುಲಿರುವುದು ಪತ್ತೆಯಾದ ಹಿನ್ನೆಲೆಯಲ್ಲಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕೊರೋನಾ ಮಾಹಾಮಾರಿಯ ಜೊತೆಗೆ ತಾಲಿಬಾನ್ ಉಗ್ರರನ್ನು ಎದುರಿಸುವ ಸಂಕಷ್ಟದ ಪರಿಸ್ಥಿತಿ ಈಗ ಎದುರಾಗಿದೆ.

ಇದನ್ನೂ ಓದಿ: ZyCov-D Vaccine: ಕೊನೆಗೂ ಪೋಷಕರಿಗೆ ಸಿಕ್ತು ಸಿಹಿಸುದ್ದಿ: 12 ವರ್ಷ ಮೇಲ್ಪಟ್ಟ ಮಕ್ಕಳಿಗೆ ಸಿದ್ಧವಾಯ್ತು ಜೈಕೊವ್ –ಡಿ ಲಸಿಕೆ!

Comments are closed.