ಧ್ರುವ ಸರ್ಜಾ- ನಂದಕಿಶೋರ್ ಕಾಂಬಿನೇಷನ್ ನಲ್ಲಿ ಬರುತ್ತೆ ಮತ್ತೊಂದು ಸಿನಿಮಾ

0

ಆ್ಯಕ್ಷನ್ ಪ್ರಿನ್ಸ್​ ಧ್ರುವ ಸರ್ಜಾ ‘ಪೊಗರು’ ಸಿನಿಮಾ ಎರಡು ತಿಂಗಳ ಒಳಗೆ ತೆರೆ ಮೇಲೆ ಬರಲಿದೆ. ಪೊಗರು ಶೂಟಿಂಗ್ ನಡೆಸುವುದಕ್ಕೆ ಧ್ರುವ ಸರ್ಜಾ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಈ ನಡುವಲ್ಲೇ ನಿರ್ದೇಶಕ ನಂದ ಕಿಶೋಕ್ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ಕೊಟ್ಟಿದ್ದಾರೆ.

ನಟ ಚಿರಂಜೀವಿ ಸರ್ಜಾ ನಿಧನದ ಬೆನ್ನಲ್ಲೇ ಧ್ರುವ ಸರ್ಜಾ ಸಾಕಷ್ಟು ನೊಂದು ಹೋಗಿದ್ದರು. ಅಣ್ಣನ ನೆನಪನ್ನು ಆ್ಯಕ್ಷನ್ ಪ್ರಿನ್ಸ್ ಗೆ ಮರೆಯೋದಕ್ಕೆ ಸಾಧ್ಯವಾಗಿರಲಿಲ್ಲ. ಆದರೆ ನೋವಿನಿಂದ ಹೊರ ಬರುವುದುಕ್ಕೆ ಧ್ರುವ ಸರ್ಜಾ ಪೊಗರು ಶೂಟಿಂಗ್ ನಡೆಸುವುದಕ್ಕೆ ಒಪ್ಪಿಗೆ ನೀಡಿದ್ದಾರೆ.

ತನ್ನಿಂದಾಗಿ ಚಿತ್ರತಂಡಕ್ಕೆ ನಷ್ಟವಾಗಬಾರದು ಅನ್ನೋ ಕಾರಣಕ್ಕೆ ಆ್ಯಕ್ಷನ್ ಪ್ರಿನ್ಸ್ ಮನಸಲ್ಲಿ ನೋವಿನ ಭಾರವನ್ನು ಹೊತ್ತು ಪೊಗರು ಶೂಟಿಂಗ್ ನಲ್ಲಿ ತೊಡಗಿಸಿಕೊಳ್ಳಲಿದ್ದಾರೆ.

ಸಿನಿಮಾದ ಶೂಟಿಂಗ್ ಆರಂಭಗೊಳ್ಳಲಿದ್ದು, ಶೂಟಿಂಗ್ ನಡೆಸುವುದಕ್ಕೆ ಬೇಕಾದ ಎಲ್ಲಾ ಸಿದ್ದತೆಗಳನ್ನು ಮಾಡಿಕೊಂಡಿದೆ.

ಈ ನಡುವಲ್ಲೇ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳಿಗೆ ನಿರ್ದೇಶಕ ನಂದ ಕಿಶೋರ್ ಸಿಹಿ ಸುದ್ದಿಯನ್ನು ನೀಡಿದ್ದಾರೆ. ಧ್ರುವ ಸರ್ಜಾ ಜೊತೆಗೆ ಇನ್ನೊಂದು ಸಿನಿಮಾ ಮಾಡುವುದಾಗಿ ತಿಳಿಸಿದ್ದಾರೆ. ಕಥೆ, ಪ್ರೀ ಪ್ರೊಡಕ್ಷನ್ ಹಂತದ ಕೆಲಸ ಕೂಡ ಮುಗಿದಿದೆ ಎಂದು ಹೇಳಿದ್ದಾರೆ.

ಪೊಗರು ಚಿತ್ರದಲ್ಲಿ ಧ್ರುವ ರಗಡ್​ ಆಗಿ ಕಾಣಿಸಿಕೊಂಡಿದ್ದಾರೆ. ಆದರೆ ಈ ಚಿತ್ರದಲ್ಲಿ ತುಂಬಾನೇ ಸ್ಟೈಲಿಷ್ ಆಗಿ ಕಾಣಲಿದ್ದಾರೆ. ಲಾಕ್​​ಡೌನ್ ಮುಗಿದ ನಂತರ ಶೂಟಿಂಗ್​ ಪ್ರಾರಂಭಿಸಲಿದ್ದೇವೆ ಎಂದಷ್ಟೆ ರಿವೀಲ್ ಮಾಡಿದ್ದಾರೆ ನಂದ ಕಿಶೋರ್.

Leave A Reply

Your email address will not be published.