Actor Anantnag: ಹಿರಿಯ‌ ನಟ ಅನಂತನಾಗ್ ಇಂದು ಬಿಜೆಪಿ ಸೇರ್ಪಡೆ

ಬೆಂಗಳೂರು: (Actor Anantnag) ಈ ಹಿಂದೆ ಜೆಡಿಎಸ್‌ ನಲ್ಲಿ ಗುರುತಿಸಿಕೊಂಡಿದ್ದ ಹಿರಿಯ ನಟ ಅನಂತ್‌ ನಾಗ್‌ ಇಂದು ಅಧಿಕೃತವಾಗಿ ಬಿಜೆಪಿ ಪಕ್ಷವನ್ನು ಸೇರಲಿದ್ದಾರೆ. ಪಕ್ಷದ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್ವಕಟೀಲ್‌, ಸಚಿವ ಸುಧಾಕರ್‌, ಸಚಿವ ಮುನಿರತ್ನ ಸಮ್ಮುಖದಲ್ಲಿ ಇಂದು ಸಂಜೆ ೪:೩೦ ಕ್ಕೆ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿಯಲ್ಲಿ ಕಮಲದ ಕೈಹಿಡಿಯಲಿದ್ದಾರೆ.

1994 ರಲ್ಲಿ ಮಲ್ಲೇಶ್ವರಂ ಕ್ಷೇತ್ರದಿಂದ ವಿಧಾನಸಭೆಗೆ ಆಯ್ಕೆಯಾಗಿದ್ದ ಅನಂತ್‌ ನಾಗ್‌, ಜೆಎಚ್‌ ಪಟೇಲ್‌ ಸರಕಾರದಲ್ಲಿ ಬೆಂಗಳೂರು ಅಭಿವೃದ್ದಿ ಪ್ರಾಧಿಕಾರದ ಸಚಿವರಾಗಿದ್ದರು. 1983 ರ ಲೋಕಸಭೆ ಚುನಾವಣೆಯಲ್ಲಿ ಕೂಡ ಸ್ಪರ್ಧಿಸಿದ್ದರು. ಆದರೆ ಇದೀಗ ಜೆಡಿಎಸ್‌ ಪಕ್ಷದಲ್ಲಿ ಗುರುತಿಸಿಕೊಂಡಿದ್ದ ನಾಯಕ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ. ಇವರ ಜೊತೆಗೆ ನೆಲಮಂಗಲದ ಕೆಲವು ಜೆಡಿಎಸ್‌, ಕಾಂಗ್ರೇಸ್‌ ಮುಖಂಡರು ಕೂಡ ಬಿಜೆಪಿಯನ್ನು ಸೇರಲಿದ್ದಾರೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ರಾಜಕೀಯ ವಿಚಾರದಲ್ಲಿ ಅನಂತ್‌ ನಾಗ್‌ ಸಕ್ರೀಯರಾಗಿರಲಿಲ್ಲ. 1983 ರಿಂದ ಜನತಾದಳ ಪಕ್ಷದ ಜೊತೆ ಗುರುತಿಸಿಕೊಂಡಿದ್ದ ಹಿರಿಯ ನಟ 1983, 1985, 1989 ರ ಚುನಾವಣೆಗಳಲ್ಲಿ ಜನತಾದಳದ ಸ್ಟಾರ್‌ ಪ್ರಚಾರಕರಾಗಿದ್ದರು. 2004 ರಲ್ಲಿ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ ನಿಂದ ಸ್ಫರ್ಧಿಸಿ ಸೋಲು ಕಂಡಿದ್ದರು. ಈ ಮಧ್ಯೆ, ಮಂಡ್ಯದಲ್ಲಿಂದು ಬಿಜೆಪಿ ಯುವ ಸಮಾವೇಶ ನಡೆಯಲಿದ್ದು, 50‌ ಸಾವಿರ‌ ಯುವಕರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಗುರಿಯನ್ನು ಬಿಜೆಪಿ ಹಾಕಿಕೊಂಡಿದೆ ಎನ್ನಲಾಗಿದೆ.

ಇದನ್ನೂ ಓದಿ : Free bus pass for students: ಏ.1 ರಿಂದಲೇ ವಿದ್ಯಾರ್ಥಿನಿಯರಿಗೆ ಉಚಿತ ಬಸ್‌ ಪಾಸ್:‌ ಸಿಎಂ ಬೊಮ್ಮಾಯಿ

ಇದನ್ನೂ ಓದಿ : Kota Srinivas Poojary : ಶ್ರೀ ನಾರಾಯಣಗುರು ವಸತಿ ಶಾಲೆ : ಕೊನೆಗೂ ಆದೇಶ ಹೊರಡಿಸಿದ ಸಿಎಂ ಬೊಮ್ಮಾಯಿ

ಇದನ್ನೂ ಓದಿ : JP Nadda State Tour: ಬಿಜೆಪಿ ರಾಷ್ಟ್ರೀಯ ಅಧ್ಯಕ್ಚ ಜೆಪಿ ನಡ್ಡಾ ರಾಜ್ಯ ಪ್ರವಾಸ: ಎಲ್ಲೆಲ್ಲಿ ಯಾವ ಕಾರ್ಯಕ್ರಮಗಳು?

Actor Anantnag: Veteran actor Anantnag joined BJP today

Comments are closed.