Subi Suresh passed away: ಮಲಯಾಳಂ ಖ್ಯಾತ ನಟಿ, ನಿರೂಪಕಿ ಸುಬಿ ಸುರೇಶ್‌ ನಿಧನ

ಕೊಚ್ಚಿ: (Subi Suresh passed away) ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ನ ಖ್ಯಾತ ನಟಿ ನಿರೂಪಕಿ ಸುಬಿ ಸುರೇಶ್‌ (೪೧ ವರ್ಷ) ನಿಧನರಾಗಿದ್ದಾರೆ. ಯಕೃತ್ತಿನ ಕಾಯಿಲೆಯಿಂದ ಬಳಲುತ್ತಿದ್ದ ಸುಬಿ ಸುರೇಶ್‌ ಕಳೇದ ಕೆಲವು ಸಮಯಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚಿಕಿತ್ಸೆ ಫಲಿಸದೇ ಬುಧವಾರ ಕೊನೆಯುಸಿರೆಳೆದಿದ್ದಾರೆ.

ಡ್ಯಾನ್ಸರ್‌ ಹಾಗೂ ಕಾಮಿಡಿಯನ್‌ ಆಗಿ ವೃತ್ತಿ ಜೀವನ ಆರಂಭಿಸಿದ ಸುಬಿ ಸುರೇಶ್‌ ನಂತರದಲ್ಲಿ ಮೇಡ್‌ ಫಾರ್‌ ಈಚ್‌ ಅದರ್‌ ಹಾಗೂ ಕುಟ್ಟಿ ಪಟ್ಟಾಳಂ ಎಂಬ ಮಕ್ಕಳ ಕಾರ್ಯಕ್ರಮದ ಮೂಲಕ ನಿರೂಪಕಿಯಾಗಿ ಖ್ಯಾತಿಯನ್ನು ಪಡೆದರು. ಅಲ್ಲದೇ ಇವರು ಗೃಹನಾಥನ್‌, ತಸ್ಕರ ಲಹಲಾ, ಎಲ್ಸಮ್ಮ ಎನ್ನ ಅಂಕುಟ್ಟಿ, ಡ್ರಾಮಾ, ಕಾರ್ಯಾಸ್ಥಾನ್‌ ಹೀಗೆ ಅನೇಕ ಸಿನಿಮಾಗಳಲ್ಲಿ ಬಣ್ಣ ಹಚ್ಚಿದ್ದಾರೆ. ಇದಲ್ಲದೇ ಲಾಕ್‌ ಡೌನ್‌ ಸಮಯದಲ್ಲಿ ಫಿಟ್‌ ನೆಸ್‌ ಕುರಿತು ಮಾಡುತ್ತಿದ್ದ ವಿಡಿಯೋಗಳು ಫ್ಯಾಮಿಲಿ ಆಡಿಯನ್ಸ್‌ ಗಳ ಗಮನ ಸೆಳೆಯುತ್ತಿತ್ತು.

ಸುಬಿ ಸುರೇಶ್‌ ಅವರು ಮೊದಲು ಕಿರುತೆರೆಯ ಕಾರ್ಯಕ್ರಮಗಳಲ್ಲಿ ಕಾಣಿಸಿಕೊಂಡಿದ್ದು, ನಂತರದಲ್ಲಿ ಹಾಸ್ಯ ಪಾತ್ರಗಳ ಮೂಲಕ ಅವರು ಜನಮೆಚ್ಚುಗೆಯನ್ನು ಪಡೆದುಕೊಂಡರು. ಬಳಿಕ ಅವರಿಗೆ ಸಿನಿಮಾಗಳಲ್ಲಿ ಅವಕಾಶ ಲಭಿಸುತ್ತದೆ. ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ಇವರು ಪ್ರೇಕ್ಷಕರನ್ನು ರಂಜಿಸುತ್ತಿದ್ದರು. ಇದೀಗ ಅವರ ನಿಧನದ ಸುದ್ದಿ ತಿಳಿದು ಅಭಿಮಾನಿಗಳು ಕಂಬನಿ ಮಿಡಿದಿದ್ದು, ಹಲವರು ಸಂತಾಪವನ್ನು ಸೂಚಿಸಿದ್ದಾರೆ.

ಇದನ್ನೂ ಓದಿ : 1000 ಕೋಟಿ ಕ್ಲಬ್‌ ಸೇರಿ ಬಾಲಿವುಡ್‌ ಬಾಕ್ಸ್‌ ಆಫೀಸ್‌ನಲ್ಲಿ ಹೊಸ ದಾಖಲೆ ಸೃಷ್ಟಿಸಿದ ‘ಪಠಾಣ್’

ಇದನ್ನೂ ಓದಿ : Actor Anantnag: ಹಿರಿಯ‌ ನಟ ಅನಂತನಾಗ್ ಇಂದು ಬಿಜೆಪಿ ಸೇರ್ಪಡೆ

ಇದನ್ನೂ ಓದಿ : Sonu Nigam : ಖ್ಯಾತ ಗಾಯಕ ಸೋನು ನಿಗಮ್ ಮೇಲೆ ಹಲ್ಲೆ : ಶಾಸಕನ ಮಗನ ವಿರುದ್ದ ಪ್ರಕರಣ ದಾಖಲು

Subi Suresh passed away: Famous Malayalam actress and presenter Subi Suresh passed away

Comments are closed.