Jersey Sponsor for Team India: ಟೀಮ್ ಇಂಡಿಯಾಗೆ ಸಿಕ್ತು ಹೊಸ ಜರ್ಸಿ ಸ್ಪಾನ್ಸರ್, ಅಡಿಡಾಸ್ ಜೊತೆ 5 ವರ್ಷಗಳ ಒಪ್ಪಂದ

ಮುಂಬೈ: (Jersey Sponsor for Team India) ಟೀಮ್ ಇಂಡಿಯಾ ಆಟಗಾರರ ಜರ್ಸಿ ಪ್ರಾಯೋಜಕತ್ವಕ್ಕೆ ಪ್ರತಿಷ್ಠಿದ ಬ್ರ್ಯಾಂಡ್’ನ ಹುಡುಕಾಟದಲ್ಲಿದ್ದ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ BCCI) ಕೊನೆಗೂ ಹೊಸ ಪ್ರಾಯೋಜಕರನ್ನು ಹುಡುಕುವಲ್ಲಿ ಯಶಸ್ವಿಯಾಗಿದೆ. ಜಗತ್ತಿನ ಅತ್ಯಂತ ಪ್ರಸಿದ್ಧ ಬ್ರ್ಯಾಂಡ್’ಗಳಲ್ಲಿ ಒಂದಾಗಿರುವ ಅಡಿಡಾಸ್ (Adidas) ಕಂಪನಿ, ಟೀಮ್ ಇಂಡಿಯಾದ ಹೊಸ ಜರ್ಸಿ ಸ್ಪಾನ್ಸರ್. ಅಡಿಡಾಸ್ ಜೊತೆ ಬಿಸಿಸಿಐ 2027ರವರೆಗೆ 5 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಮುಂದಿನ ಜೂನ್ ತಿಂಗಳಿಂದ ಟೀಮ್ ಇಂಡಿಯಾ ಆಟಗಾರರು ಅಡಿಡಾಸ್ ಕಂಪನಿಯ ಜರ್ಸಿಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ಹಿಂದೆ ಎಂಪಿಎಲ್ ಸ್ಪೋರ್ಟ್ಸ್ (MPL Sports) ಭಾರತ ಕ್ರಿಕೆಟ್ ತಂಡದ ಜರ್ಸಿ ಪ್ರಾಯೋಜಕತ್ವ ಹೊಂದಿತ್ತು. ಈ ಒಪ್ಪಂದ 2023ರವರೆಗೆ ಇತ್ತು. ಆದರೆ ಇತ್ತೀಚೆಗೆ ಪ್ರಾಯೋಜಕತ್ವದಿಂದದ ಎಂಪಿಎಲ್ ಸ್ಪೋರ್ಟ್ಸ್ ಕಂಪನಿ ಹಿಂದೆ ಸರಿದ ಕಾರಣ ಬಿಸಿಸಿಐ ತಾತ್ಕಾಲಿಕವಾಗಿ ಕಿಲ್ಲರ್ ಜೀನ್ಸ್ ಬ್ರ್ಯಾಂಡ್ ಜೊತೆ ಒಪ್ಪಂದ ಮಾಡಿಕೊಂಡಿತ್ತು. ಸದ್ಯ ಟೀಮ್ ಇಂಡಿಯಾಗೆ ಕಿಲ್ಲರ್ ಜೀನ್ಸ್ ಕಂಪನಿ ಜರ್ಸಿ ಸ್ಪಾನ್ಸರ್ ಆಗಿದ್ದು ಮುಂದಿನ ತಿಂಗಳು ನಡೆಯುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯೊಂದಿಗೆ ಕಿಲ್ಲರ್ ಜೀನ್ಸ್ ಜೊತೆಗಿನ ಒಪ್ಪಂದ ಅಂತ್ಯಗೊಳ್ಳಲಿದೆ.

ಅಡಿಡಾಸ್ ಕಂಪನಿ 2006ರಲ್ಲೇ ಟೀಮ್ ಇಂಡಿಯಾ ಜರ್ಸಿ ಪ್ರಾಯೋಜಕತ್ವಕ್ಕೆ ಬಿಡ್ ಸಲ್ಲಿಸಿತ್ತು. ಆದರೆ ಪ್ರಾಯೋಜಕತ್ವ ಸಿಕ್ಕಿರಲಿಲ್ಲ. ಕೊನೆಗೂ ಭಾರತ ತಂಡದ ಜರ್ಸಿ ಸ್ಪಾನ್ಸರ್’ಷಿಪ್ ಪಡೆಯುವಲ್ಲಿ ಅಡಿಡಾಸ್ ಕಂಪನಿ ಯಶಸ್ವಿಯಾಗಿದೆ. ಕ್ಲಬ್ ಫುಟ್ಬಾಲ್’ನ ದೈತ್ಯ ತಂಡಗಳಾದ ಮ್ಯಾಂಚೆಸ್ಟರ್ ಯುನೈಟೆಡ್, ರಿಯಲ್ ಮ್ಯಾಡ್ರಿಡ್ ಮತ್ತು ಅರ್ಸೆನೆಲ್ ತಂಡಗಳಿಗೆ ಅಡಿಡಾಸ್ ಜರ್ಸಿ ಪ್ರಾಯೋಜಕತ್ವ ಹೊಂದಿದೆ.

ಇದನ್ನೂ ಓದಿ : Suryakumar Yadav Visit Tirupati Thimmappa : ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಿಂದ 6 ದಿನಗಳ ಬ್ರೇಕ್, ತಿರುಪತಿ ತಿಮ್ಮಪ್ಪನ ದರ್ಶನ ಪಡೆದ ಸೂರ್ಯಕುಮಾರ್ ಯಾದವ್

2023ರಿಂದ 2027ರವರೆಗೆ ಭಾರತ ತಂಡ ಒಟ್ಟು 141 ಅಂತರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. ಇದರಲ್ಲಿ 38 ಟೆಸ್ಟ್, 42 ಏಕದಿನ ಹಾಗೂ 61 ಟಿ20 ಪಂದ್ಯಗಳು ಸೇರಿವೆ. ಇದರ ಜೊತೆ ಭಾರತ ಎರಡು ಏಕದಿನ ವಿಶ್ವಕಪ್, 2 ಟಿ20 ವಿಶ್ವಕಪ್ ಹಾಗೂ ಒಂದು ಚಾಂಪಿಯನ್ಸ್ ಟ್ರೋಫಿ ಟೂರ್ನಿಯನ್ನಾಡಲಿದೆ.

Jersey Sponsor for Team India: Team India gets a new jersey sponsor, 5-year deal with Adidas

Comments are closed.