shock for Congress :ಮುರುಗೇಶ್​ ನಿರಾಣಿ-ಎಸ್​.ಆರ್​ ಪಾಟೀಲ್​ ದೋಸ್ತಿಯಿಂದ ಎಚ್ಚೆತ್ತ ಕಾಂಗ್ರೆಸ್​ : ಎಸ್​.ಆರ್​ ಪಾಟೀಲ್​ಗೆ ಹೈಕಮಾಂಡ್​ ಬುಲಾವ್​​

ಬಾಗಲಕೋಟೆ : shock for Congress : ರಾಜ್ಯದಲ್ಲಿ ವಿಧಾನಸಭಾ ಚುನಾವಣೆಗೆ ಇನ್ನೇನು ಕೆಲವೇ ತಿಂಗಳುಗಳು ಬಾಕಿ ಇರುವ ನಡುವೆಯೇ ವಿವಿಧ ರಾಜಕೀಯ ಚಟುವಟಿಕೆಗಳು ಒಂದೊಂದಾಗಿಯೇ ಗರಿಗೆದರುತ್ತಿದೆ. ಸದ್ಯ ರಾಜ್ಯದಲ್ಲಿ ಸಾವರ್ಕರ್​ ವಿವಾದ, ಮೊಟ್ಟೆ ಪಾಲಿಟಿಕ್ಸ್​ನಂತಹ ಘಟನೆಗಳೇ ಮುನ್ನೆಲೆಯಲ್ಲಿ ಇವೆ. ಈ ಎಲ್ಲದರ ನಡುವೆ ಬಾಗಲಕೋಟೆಯಲ್ಲಿ ಹಾಲಿ ಹಾಗೂ ಮಾಜಿ ಸಚಿವರು ಸೈಲೆಂಟ್​ ಆಗಿಯೇ ದೋಸ್ತಿ ಮಾಡಿಕೊಂಡಿದ್ದು ಪಕ್ಷಾಂತರದ ಸುಳಿವು ದಟ್ಟವಾಗಿ ಸಿಕ್ಕಿದೆ.


ಹೌದು..! ಬಾಗಲಕೋಟೆಯಲ್ಲಿ ಸಚಿವ ಮುರುಗೇಶ್​ ನಿರಾಣಿ ಹಾಗೂ ಮಾಜಿ ಸಚಿವ ಎಸ್​.ಆರ್ ಪಾಟೀಲ್​ ಜೊತೆಯಾಗಿ ಕಾಣಿಸಿಕೊಳ್ಳುತ್ತಿದ್ದು ಜಿಲ್ಲೆಯಲ್ಲಿ ರಾಜಕೀಯ ಲೆಕ್ಕಾಚಾರಗಳು ಗರಿಗೆದರುವಂತೆ ಮಾಡಿದೆ. ಇವರಿಬ್ಬರು ಸೌಜನ್ಯಕ್ಕಾಗಿ ಭೇಟಿಯಾಗಿದ್ದಾರಾ ಅಥವಾ ಎಸ್​.ಆರ್​ ಪಾಟೀಲ್​​ರನ್ನು ಕಾಂಗ್ರೆಸ್​ನಿಂದ ಬಿಜೆಪಿಗೆ ಬರಮಾಡಿಕೊಳ್ಳಲು ನಡೆಯುತ್ತಿರುವ ಹುನ್ನಾರವೇ ಎಂಬುದು ಸದ್ಯದ ಚರ್ಚಾ ವಿಷಯವಾಗಿದೆ.


ಎಸ್​.ಆರ್​ ಪಾಟೀಲ್​ ಹಾಗೂ ಮುರುಗೇಶ್​ ನಿರಾಣಿ ದೋಸ್ತಿಯ ಫೋಟೋಗಳು ಸೋಶಿಯಲ್​ ಮೀಡಿಯಾಗಳಲ್ಲಿ ಹರಿದಾಡುತ್ತಿದೆ. ಆಗಸ್ಟ್​ 18ರಂದು ಸಚಿವ ಮುರುಗೇಶ್​ ನಿರಾಣಿ ಹುಟ್ಟುಹಬ್ಬದ ದಿನದಂದು ಎಸ್​.ಆರ್​ ಪಾಟೀಲ್​ ನಿರಾಣಿ ನಿವಾಸಕ್ಕೆ ಭೇಟಿ ನೀಡಿ ಶುಭ ಕೋರಿದ್ದರು. ಇದಕ್ಕೂ ಮುನ್ನ ಜುಲೈ 31ರಂದು ಎಸ್​.ಆರ್​ ಪಾಟೀಲ್​ ಜನ್ಮದಿನದಂದು ಸಚಿವ ಮುರುಗೇಶ್​ ನಿರಾಣಿ ಪಾಟೀಲ್​ ಮನೆಗೆ ತೆರಳಿ ಶುಭಾಶಯ ತಿಳಿಸಿದ್ದರು. ಈ ದೋಸ್ತಿಯ ಫೋಟೋಗಳು ಇದೀಗ ಭಾರೀ ಚರ್ಚೆಗೆ ಗ್ರಾಸವಾಗಿದೆ .


ಎಸ್​.ಆರ್​ ಪಾಟೀಲ್​ ಹಾಗೂ ಮುರುಗೇಶ್​ ನಿರಾಣಿ ದೋಸ್ತಿ ಬಲಗೊಳ್ಳುತ್ತಿರುವ ನಡುವೆಯೇ ಹೈಕಮಾಂಡ್​ನಿಂದ ಎಸ್​.ಆರ್​ ಪಾಟೀಲ್​​ಗೆ ದಿಢೀರ್​ ಬುಲಾವ್​ ಬಂದಿದೆ ಎನ್ನಲಾಗ್ತಿದೆ. ಹೀಗಾಗಿ ಎಸ್​.ಆರ್​ ಪಾಟೀಲ್​ ಶೀಘ್ರದಲ್ಲಿಯೇ ದೆಹಲಿಗೆ ತೆರಳಲಿದ್ದಾರೆ ಎನ್ನಲಾಗಿದೆ. ಎಸ್​.ಆರ್​ ಪಾಟೀಲ್​​ಗೆ ವಿಧಾನ ಪರಿಷತ್​​ ಟಿಕೆಟ್​ ಕೈ ತಪ್ಪಿತ್ತು. ಎಸ್​.ಆರ್​ ಪಾಟೀಲ್​​ಗೆ ವಿಧಾನ ಪರಿಷತ್​ ಟಿಕೆಟ್​​ ತಪ್ಪಿಸಿದ್ದು ಸಿದ್ದರಾಮಯ್ಯ ಎಂಬ ಅಸಮಾಧಾನ ಎಸ್​.ಆರ್​ ಪಾಟೀಲ್​ ಬೆಂಬಲಿಗರಲ್ಲಿದೆ.


ಈ ಘಟನೆ ಬಳಿಕ ಕಳೆದ ಏಳೆಂಟು ತಿಂಗಳಿನಿಂದ ಎಸ್​.ಆರ್​ ಪಾಟೀಲ್​ ಕಾಂಗ್ರೆಸ್​ ಪಕ್ಷದ ಚಟುವಟಿಕೆಗಳಿಂದ ಅಂತರ ಕಾಯ್ದುಕೊಳ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ಗಮನಿಸಿರುವ ಹೈಕಮಾಂಡ್​​ ಎಸ್​.ಆರ್​ ಪಾಟೀಲ್​​ರನ್ನು ದೆಹಲಿಗೆ ಕರೆಯಿಸಿಕೊಂಡು ಮನವೊಲಿಸಲು ನಿರ್ಧರಿಸಿದೆ ಎನ್ನಲಾಗಿದೆ. ಹೀಗಾಗಿ ಇಂದೇ ಎಸ್​.ಆರ್​ ಪಾಟೀಲ್​ ದೆಹಲಿಗೆ ಹೊರಡಲಿದ್ದಾರೆ ಎಂಬ ಮಾಹಿತಿ ಕೂಡ ಲಭ್ಯವಾಗಿದೆ.

ಇದನ್ನು ಓದಿ : threw eggs at the savarkar : ಸಾವರ್ಕರ್​ ಫೋಟೋ ತುಳಿದು, ಮೊಟ್ಟೆ ಹೊಡೆದು ಅಗ್ನಿಗಾಹುತಿ : ಸ್ವಾತಂತ್ರ್ಯ ಹೋರಾಟಗಾರನ ಫೋಟೋಗೆ ಭಾರೀ ಅವಮಾನ

ಇದನ್ನೂ ಓದಿ : T20 World Cup Team India : ಸೆಪ್ಟೆಂಬರ್ 15ಕ್ಕೆ ಟೀಮ್ ಇಂಡಿಯಾ ಆಯ್ಕೆ; Follow Live Updates

Big shock for Congress: closeness between Murugesh Nirani and SR Patil

Comments are closed.