Actor Dhanush – Aishwarya Rajinikanth : ನಟ ಧನುಷ್‌ ಮತ್ತು ಐಶ್ವರ್ಯಾ ರಜನಿಕಾಂತ್‌ ಡಿವೋರ್ಸ್‌ ಕ್ಯಾನ್ಸಲ್‌ : ಮತ್ತೆ ಒಂದಾದ ದಂಪತಿಗಳು

ಖ್ಯಾತ ತಮಿಳು ನಟ ಧನುಷ್‌ ಕಳೆದ ವರ್ಷ ಜನವರಿ 2022ರಲ್ಲಿ ಐಶ್ವರ್ಯಾ ರಜನಿಕಾಂತ್‌(Actor Dhanush – Aishwarya Rajinikanth) ಜೊತೆಯಲ್ಲಿ ತಮ್ಮ ದಾಂಪತ್ಯ ಜೀವನದಿಂದ ಬೇರೆ ಆಗುವುದಾಗಿ ಘೋಷಿಸಿಕೊಂಡಿದ್ದರು. ಆದರೆ ಈಗ ಮತ್ತೆ ಅವರಿಬ್ಬರು ಒಂದಾಗುತ್ತಾರೆ ಎನ್ನುವ ಸುದ್ದಿ ಎಲ್ಲಡೆ ಹರಡುತ್ತಿದೆ. ಈ ಕುರಿತು ಅವರ ಕುಟುಂಬದಿಂದ ಯಾವುದೇ ತರಹದ ಅಧಿಕೃತ ಮಾಹಿತಿಯನ್ನು ಹಂಚಿಕೊಂಡಿಲ್ಲ. ಆದರೂ ಕೂಡ ಕಾಲಿವುಡ್‌ನಲ್ಲಿ ಇದರ ಕುರಿತು ವದಂತಿಗಳು ಹರಿದಾಡುತ್ತಿವೆ.

2004ರಲ್ಲಿ ಧನುಷ್‌ ಮತ್ತು ಐಶ್ವರ್ಯಾ ರಜನಿಕಾಂತ್‌(Actor Dhanush – Aishwarya Rajinikanth) ವಿವಾಹವಾಗಿದ್ದರು.18 ವರ್ಷಗಳ ಕಾಲ ಸುಖವಾಗಿ ಸಂಸಾರ ನಡೆಸುತ್ತಿದ್ದ ದಂಪತಿಗಳಿಗೆ ಯಾತ್ರ ರಾಜ್‌ ಮತ್ತು ಲಿಂಗ ರಾಜ್‌ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ದಂಪತಿಗಳು 2022 ಜನವರಿಯಲ್ಲಿ ಅಭಿಮಾನಿಗಳಿಗೆ ಕೆಟ್ಟ ಸುದ್ಧಿಯನ್ನು ನೀಡಿದ್ದರು. ಇದು ಅಭಿಮಾನಿಗಳಿಗೆ ತುಂಬಾ ಬೇಸರವನ್ನು ಮೂಡಿಸಿತ್ತು.

ಈ ಹಿಂದೆ ನಟ ಧನುಷ್‌ ಟ್ವೀಟ್‌ ಒಂದರಲ್ಲಿ “18 ವರ್ಷಗಳಿಂದ ಸ್ನೇಹಿತರಾಗಿ, ದಂಪತಿಗಳಾಗಿ, ಪೋಷಕರಾಗಿ ಪರಸ್ಪರ ಜೊತೆಗಿದ್ದೆವು, ಈ ಹಾದಿಯಲ್ಲಿ ಇಬ್ಬರೂ ಬೆಳೆದೆವು, ಅರ್ಥ ಮಾಡಿಕೊಂಡೆವು ಹಾಗೂ ಹೊಂದಾಣಿಕೆಯನ್ನು ಕಲಿತೆವು. ಈಗ ಇಬ್ಬರೂ ಭಿನ್ನ ದಾರಿಗಳಲ್ಲಿ ನಿಂತಿರುತ್ತೇವೆ. ಆದ್ದರಿಂದ ನಾನು ಮತ್ತು ಐಶ್ವರ್ಯಾ ಪರಸ್ಪರ ಒಪ್ಪಿಗೆಯಿಂದ ಬೇರೆ ಆಗುತ್ತಿದ್ದೇವೆ. ವೈಯಕ್ತಿಕವಾಗಿ ಒಬ್ಬರನೊಬ್ಬರು ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತೇವೆ” ಎಂದು ಹೇಳಿದ್ದಾರೆ. ಈಗ ಇವರಿಬ್ಬರು ಮತ್ತೆ ಒಂದಾಗುತ್ತಾರೆ ಎಂಬ ವಿಷಯ ತಿಳಿದ ಅಭಿಮಾನಿಗಳು ಖುಷಿಯಾಗಿದ್ದಾರೆ.

ಇದನ್ನೂ ಓದಿ : Dhruva Sarja : ಧ್ರುವ ಸರ್ಜಾ ಹುಟ್ಟು ಹಬ್ಬದ ಸಂಭ್ರಮಾರಣೆ : ಈ ವರ್ಷ ಅಭಿಮಾನಿಗಳ ಜೊತೆ ನೋ ಸೆಲೆಬ್ರೆಷನ್

ಇದನ್ನೂ ಓದಿ : Kiccha Sudeep : “ಹೊಂಬಾಳೆ ಫಿಲ್ಮ್ಸ್‌” ನಿರ್ಮಾಣದಲ್ಲಿ ಸುದೀಪ್ ಸಿನಿಮಾ: ಕಾರ್ತೀಕ್ ಕೊಟ್ರು ಕ್ಲೂ

ಇದನ್ನೂ ಓದಿ : Dhruva Sarja : ಧ್ರುವ ಸರ್ಜಾ ಹುಟ್ಟು ಹಬ್ಬದ ಸಂಭ್ರಮಾರಣೆ : ಈ ವರ್ಷ ಅಭಿಮಾನಿಗಳ ಜೊತೆ ನೋ ಸೆಲೆಬ್ರೆಷನ್

ಈ ಹಿಂದೆ ನಟ ಧನುಷ್‌ ಮಾಡಿದ ಟ್ವೀಟ್‌ನಲ್ಲಿ ವಿಚ್ಛೇದನ ಪದವನ್ನು ಬಳಸಿರಲಿಲ್ಲ.ಅದಕ್ಕೆ ಪೂರಕವಾಗುವಂತೆ ಧನುಷ್‌ ತಂದೆ ಕಸ್ತೂರಿ ರಾಜ್‌ ಕೂಡ ಡಿವೋರ್ಸ್‌ ಸುದ್ದಿಯನ್ನು ತಳ್ಳಿ ಹಾಕಿದ್ದರು. “ಪರಸ್ಪರ ವೈಮನಸ್ಸಿನ ಕಾರಣಕ್ಕೆ ಹೀಗೆ ಆಗಿದೆ. ಇದು ಒಂದು ಕುಟುಂಬದ ಜಗಳ ಅಷ್ಟೇ. ಗಂಡ-ಹೆಂಡತಿ ನಡುವೆ ಇದೆಲ್ಲವೂ ಸಹಜವಾಗಿರುತ್ತದೆ. ಇದು ವಿಚ್ಛೇದನಕ್ಕೆ ಸಂಬಂಧಪಟ್ಟಿದಲ್ಲವಾಗಿದೆ. ಅವರಿಬ್ಬರು ಈಗ ಚೆನ್ನೈ ಬದಲು ಹೈದರಾಬಾದ್‌ನಲ್ಲಿದ್ದಾರೆ. ಅವರಿಬ್ಬರಿಗೂ ನಾನು ಒಂದಷ್ಟು ಸಲಹೆ ನೀಡಿದ್ದೇನೆ” ಎಂದು ಕಸ್ತೂರಿ ರಾಜ್‌ ಹೇಳಿದ್ದಾರೆ. ನಟ ಧನುಷ್‌ ಮತ್ತು ಐಶ್ವರ್ಯಾ ಇವರಿಬ್ಬರ ದಾಂಪತ್ಯ ಜೀವನದ ಬಗ್ಗೆ ಅಧಿಕೃತ ಮಾಹಿತಿ ಅತಿ ಶೀಘ್ರದಲ್ಲೇ ಬರಲಿದೆ ಎಂದು ಮಾಧ್ಯಮ ವರ್ಗದವರು ಹೇಳಿದ್ದಾರೆ.

Actor Dhanush and Aishwarya Rajinikanth’s divorce is cancelled

Comments are closed.