2ನೇ ಮಗುವಿಗೆ ತಂದೆಯಾದ ಧ್ರುವ ಸರ್ಜಾ: ಗಂಡು ಮಗುವಿಗೆ ಜನ್ಮನೀಡಿದ ಪ್ರೇರಣಾ

ಹಾಗೂ ಪ್ರೇರಣಾ (Prerana) ದಂಪತಿಗಳು ಚೊಚ್ಚಲ ಮಗುವನ್ನು ಸ್ವಾಗತಿಸಿದ್ದರು. ಇದೀಗ ಎರಡನೇ ಮಗುವಿಗೆ ಪ್ರೇರಣಾ ಜನ್ಮನೀಡಿದ್ದಾರೆ. ಇಂದು ಬೆಳಗ್ಗೆಯಷ್ಟೇ ಪ್ರೇರಣಾ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಮಧ್ಯಾಹ್ನದ ವೇಳೆಗೆ ಪ್ರೇರಣಾ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್

ನಾಡಿನಾದ್ಯಂತ ಗಣೇಶೋತ್ಸವದ ಸಂಭ್ರಮ ಮನೆಮಾಡಿದೆ. ಈ ಮಧ್ಯೆ ಸ್ಯಾಂಡಲ್ ವುಡ್ ನ ಆಕ್ಷ್ಯನ್ ಪ್ರಿನ್ಸ್ ಧ್ರುವ ಸರ್ಜಾ  (Actor Dhruva Sarja) ಮನೆಯಲ್ಲಿ ಗಣೇಶ ಹಬ್ಬದ ಸಂಭ್ರಮ ಇಮ್ಮಡಿಸಿದ್ದು, ಈಗಾಗಲೇ ಮನೆ ತುಂಬಿರೋ ಪುಟ್ಟ ಗೌರಿಯ ಜೊತೆಗೆ ಗಣೇಶನ ಆಗಮನವಾಗಿದೆ.

ಕಳೆದ ವರ್ಷವಷ್ಟೇ ಧ್ರುವ ಸರ್ಜಾ (Actor Dhruva Sarja) ಹಾಗೂ ಪ್ರೇರಣಾ (Prerana) ದಂಪತಿಗಳು ಚೊಚ್ಚಲ ಮಗುವನ್ನು ಸ್ವಾಗತಿಸಿದ್ದರು. ಇದೀಗ ಎರಡನೇ ಮಗುವಿಗೆ ಪ್ರೇರಣಾ ಜನ್ಮನೀಡಿದ್ದಾರೆ. ಇಂದು ಬೆಳಗ್ಗೆಯಷ್ಟೇ ಪ್ರೇರಣಾ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದು, ಮಧ್ಯಾಹ್ನದ ವೇಳೆಗೆ ಪ್ರೇರಣಾ ಮಗುವಿಗೆ ಜನ್ಮ ನೀಡಿದ್ದು ತಾಯಿ ಮಗು ಆರೋಗ್ಯವಾಗಿದ್ದಾರೆ ಎಂದು ಧ್ರುವ ಸರ್ಜಾ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

Actor Dhruva Sarja and Prerna are a couple who have given birth to a baby boy
Image Credit To Original Source

ಧ್ರುವ ಸರ್ಜಾ ಮೊದಲ ಬಾರಿಗೆ ಪತ್ನಿ ಪ್ರೇರಣಾ ತಾಯ್ತನದ ಸಂಭ್ರಮದಲ್ಲಿದ್ದಾಗ ನನಗೆ ಹೆಣ್ಣುಮಗುವೇ ಆಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದರು. ನನಗೆ ಈಗಾಗಲೇ ಮಗ ಅಂದ್ರೆ ನಟ ಹಾಗೂ ಸಹೋದರ ಚಿರು ಸರ್ಜಾ ಪುತ್ರ ರಾಯನ್ ರಾಜ್ ಸರ್ಜಾ ಇದ್ದಾರೆ. ಹೀಗಾಗಿ ಮನೆಗೊಂದು ಹೆಣ್ಣು ಮಗು ಬೇಕು. ಹೀಗಾಗಿ ಮನೆಗೆ ಮಹಾಲಕ್ಷ್ಮೀಯೇ ಬರುವ ವಿಶ್ವಾಸವಿದೆ ಎಂದಿದ್ದರು.

ಇದನ್ನೂ ಓದಿ : ಅನ್ವೇಶಿ ಜೈನ್ ಎಂಬ ಮಾದಕಕನ್ಯೆ : ಸೋಷಿಯಲ್ ಮೀಡಿಯಾದಲ್ಲಿ ಮೋಡಿ ಮಾಡಿದ ಮಾರ್ಟಿನ್ ಚೆಲುವೆ

ಅವರ ಮಾತಿನಂತೆ ಕಳೆದ ವರ್ಷದ ಸಪ್ಟೆಂಬರ್ ನಲ್ಲಿ ಪ್ರೇರಣಾ ಸರ್ಜಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ಇದಾದ ಬಳಿಕ ಒಂದೇ ವರ್ಷದ ಅವಧಿಯಲ್ಲಿ ಈಗ ಮತ್ತೊಂದು ಗಂಡು ಮಗು ಸರ್ಜಾ ಕುಟುಂಬ ಸೇರಿದೆ. ಧ್ರುವ ಸರ್ಜಾ ಮೊನ್ನೆ ಮೊನ್ನೆಯಷ್ಟೇ ತಮ್ಮ ತೋಟದ ಮನೆಯಲ್ಲಿ ಚಿರು ಸಮಾಧಿ ಬಳಿಯಲ್ಲೇ ಅದ್ದೂರಿ ಸಮಾರಂಭ ಆಯೋಜಿಸಿ ಪತ್ನಿ ಎರಡನೇ ಸೀಮಂತ ಕಾರ್ಯ ನೆರವೇರಿಸಿದ್ದರು.

2019 ರಲ್ಲಿ ಧ್ರುವ ಸರ್ಜಾ ತಾವು ಪ್ರೀತಿಸಿದ ಪ್ರೇರಣಾ ಶಂಕರ ಅವರೊಂದಿಗೆ ದೇಸಿ ಸ್ಟೈಲ್ ನಲ್ಲಿ ವಿವಾಹ ಬಂಧನಕ್ಕೆ ಕಾಲಿರಿಸಿದ್ದರು. ಇದಾದ ಮೂರು ವರ್ಷದ ಬಳಿಕ ಅಂದ್ರೇ 2022 ರಲ್ಲಿ ಧ್ರುವ ಸರ್ಜಾ ಹಾಗೂ ಪ್ರೇರಣಾ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದ್ದರು.

ಇದನ್ನೂ ಓದಿ : ಒಂದೇ ಒಂದು ಡೈಲಾಗ್ ಗೆ ಮನಸೋತ ಮೇಘನಾ: ತತ್ಸಮ ತದ್ಬವದ ಹಿಂದಿದ್ಯಾ ಚಿರು ಕಹಾನಿ

2020 ರಲ್ಲಿ ಧ್ರುವ ಸರ್ಜಾ ಸಹೋದರ ಹಾಗೂ ನಟ ಚಿರಂಜೀವಿ ಸರ್ಜಾ ತೀವ್ರ ಹೃದಯಾಘಾತದಿಂದ ನಿಧನರಾಗಿದ್ದರು. ಈ ವೇಳೆ ಚಿರು ಪತ್ನಿ ಹಾಗೂ ನಟಿ ಮೇಘನಾ ರಾಜ್ ಸರ್ಜಾ ಗರ್ಭಿಣಿಯಾಗಿದ್ದರು. ಅಣ್ಣನ ಸಾವಿನ ಬಳಿಕ ಅತ್ತಿಗೆ ಯನ್ನು ಅತ್ಯಂತ ಜತನದಿಂದ ಜೋಪಾನ ಮಾಡಿದ್ದ ಧ್ರುವ ಸರ್ಜಾ ಮೇಘನಾಗೆ ಅದ್ಧೂರಿ ಸೀಮಂತ ಶಾಸ್ತ್ರ ನೆರವೇರಿಸಿದ್ದರು.

Actor Dhruva Sarja and Prerna are a couple who have given birth to a baby boy 1Actor Dhruva Sarja and Prerna are a couple who have given birth to a baby boy
Image Credit To Original Source

ಇದಾದ ಬಳಿಕ ಮೇಘನಾ ಸರ್ಜಾ ಗಂಡುಮಗುವಿಗೆ ಜನ್ಮ ನೀಡಿದ್ದರು. ಬಳಿಕ ಅಣ್ಣ ಮಗನೊಂದಿಗೆ ಅತ್ಯಂತ ಪ್ರೀತಿಯ ಬಾಂಧವ್ಯ ಹೊಂದಿರೋ ಧ್ರುವ ಸರ್ಜಾ ರಾಯನ್ ರಾಜ್ ಸರ್ಜಾ ನಾಮಕರಣ ಶಾಸ್ತ್ರಕ್ಕೆ ಬೆಳ್ಳಿ ತೊಟ್ಟಿಲು ತಂದು ತಮ್ಮ ಪ್ರೀತಿಯನ್ನು ಹಂಚಿಕೊಂಡಿದ್ದರು.

ಇದನ್ನೂ ಓದಿ : Inamdar Movie: ತೆರೆಗೆ ಬರಲು ಸಿದ್ದವಾಯ್ತು ಮತ್ತೊಂದು ಕನ್ನಡ ಸಿನಿಮಾ ಇನಾಮ್ದಾರ್‌

ಚಿರು ನಿಧನದ ಬಳಿಕ ಸರ್ಜಾ ಕುಟುಂಬ ಹಾಗೂ ಮೇಘನಾ ರಾಜ್ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಸುದ್ದಿ ಹಲವು ಸಲ ಹರಿದಾಡಿದೆ. ಆದರೆ ಮೇಘನಾ ಮತ್ತು ಧ್ರುವ ಸರ್ಜಾ ನಡುವೆ ಒಂದು ವಿಶೇಷ ಬಾಂಧವ್ಯವಿದ್ದು, ನಾವಿಬ್ಬರು ಒಂದು ವಿಶೇಷ ಬಾಂಧವ್ಯವನ್ನು ಹಂಚಿಕೊಳ್ಳುತ್ತೇವೆ.‌

ಧ್ರುವ ಸರ್ಜಾ ನನಗೆ ಚಿಕ್ಕ ಸಹೋದರನಿದ್ದಂತೆ ಎಂದು‌ ಮೇಘನಾ ಸರ್ಜಾ ಹಲವು ಸಂದರ್ಭದಲ್ಲಿ ಹೇಳಿಕೊಂಡಿದ್ದಾರೆ. ಮೊನ್ನೆ ಮೊನ್ನೆ ನಡೆದ ಮೇಘನಾ ಸರ್ಜಾ ಕಮ್ ಬ್ಯಾಕ್ ಸಿನಿಮಾ ತತ್ಸಮ್ ತದ್ಭವದ ಪ್ರೀಮಿಯರ್ ಶೋಗೆ ಸರ್ಜಾ ಕುಟುಂಬದ ಎಲ್ಲ ಸದಸ್ಯರು ಪಾಲ್ಗೊಂಡಿದ್ದು, ಚಿತ್ರ ವೀಕ್ಷಿಸಿ ಮೇಘನಾ ಅವರನ್ನು ಶ್ಲಾಘಿಸಿ ಖುಷಿ ಹಂಚಿಕೊಂಡಿದ್ದರು.

Actor Dhruva Sarja and Prerna are a couple who have given birth to a baby boy

Comments are closed.