Actor Pawan died : ಸ್ಯಾಂಡಲ್‌ವುಡ್ ನಟ ಪವನ್‌ ಹೃದಯಾಘಾತದಿಂದ ವಿಧಿವಶ

ಸ್ಯಾಂಡಲ್‌ವುಡ್‌ ಖ್ಯಾತ ನಟ-ನಿರ್ದೇಶಕ ವಿಜಯ್ ರಾಘವೇಂದ್ರ ಅವರ ಪತ್ನಿ ಸ್ಪಂದನಾ ಇತ್ತೀಚೆಗೆ ಬ್ಯಾಂಕಾಕ್‌ನಲ್ಲಿ ಬಾರದಲೋಕಕ್ಕೆ ತೆರಳಿದ್ದರು. ಹೃದಯಾಘಾತ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಯುವಕರು ಹೃದಯಾಘಾತದಿಂದ ಸಾಯುತ್ತಿದ್ದಾರೆ. ಇದೀಗ ಕನ್ನಡ ಸಿನಿರಂಗದ ನಟ ಪವನ್‌ ಹೃದಯಾಘಾತದಿಂದ (Actor Pawan died) ವಿಧಿವಶರಾಗಿದ್ದಾರೆ.

ಈ ನೋವು ಮಾಸುವ ಮುನ್ನವೇ ಕಿರುತೆರೆ ನಟ ಪವನ್ ಸಾವನ್ನಪ್ಪಿದ್ದಾರೆ. ಹಿಂದಿ, ತಮಿಳು ಧಾರಾವಾಹಿಗಳಲ್ಲಿ ನಟಿಸಿ ಖ್ಯಾತರಾಗಿದ್ದ ಮಂಡ್ಯ ಮೂಲದ ಪವನ್ ಇತ್ತೀಚೆಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರು 25 ವರ್ಷ ವಯಸ್ಸಿನವರಾಗಿದ್ದರು. ಪವನ್ ಅವರ ಅಂತ್ಯಕ್ರಿಯೆ ಇಂದು (ಆಗಸ್ಟ್ 18) ಮಂಡ್ಯ ಜಿಲ್ಲೆಯ ಕೆಆರ್ ಪಟ್ಟಣದ ಹರಿಹರಪುರ ಗ್ರಾಮದಲ್ಲಿ ನಡೆಯಲಿದೆ. ಇದನ್ನೂ ಓದಿ : Tagaru Palya : ಟಗರು ಪಲ್ಯ ಟೈಟಲ್ ಟ್ರ್ಯಾಕ್ ರಿಲೀಸ್ : ನಾಗಭೂಷಣ್-ಅಮೃತಾ ಪ್ರೇಮ್ ಸಿನಿಮಾ ರಿಲೀಸ್ ಯಾವಾಗ ?

ಅವರ ಕುಟುಂಬದವರು ಮತ್ತು ಸಂಬಂಧಿಕರು ಅಂತ್ಯಕ್ರಿಯೆಯಲ್ಲಿ ಭಾಗವಹಿಸುತ್ತಿದ್ದಾರೆ. ಪವನ್ ಆಗಸ್ಟ್ 16 ರಂದು ನಿಧನರಾದರು. ಅವರಿಗೆ ತೀವ್ರ ಹೃದಯಾಘಾತವಾಗಿತ್ತು. ಕೆಆರ್ ಪೇಟೆ ಮೂಲದ ಪವನ್ ಮಹಾರಾಷ್ಟ್ರದಲ್ಲಿ ನೆಲೆಸಿದ್ದರು. ಪವನ್ ಹಿಂದಿ ಮತ್ತು ತಮಿಳು ಕಿರುತೆರೆ ಧಾರಾವಾಹಿಗಳಲ್ಲಿ ನಟಿಸುತ್ತಿದ್ದರು. ಬೆಳ್ಳಿತೆರೆಯಲ್ಲಿ ಮಿಂಚುವ ಕನಸು ಕಂಡಿದ್ದರು. ಪವನ್ ಅವರ ಹುಟ್ಟೂರಾದ ಕಾರಣ ಮೃತ ದೇಹವನ್ನು ಮಂಡ್ಯಕ್ಕೆ ತರಲಾಗಿದೆ. ಮಧ್ಯಾಹ್ನ 12 ಗಂಟೆಗೆ ಅಂತ್ಯಕ್ರಿಯೆ ನಡೆಯಲಿದೆ.

Sandalwood actor Pawan died due to heart attack

Comments are closed.