ನಟ ರಿಷಬ್‌ ಶೆಟ್ಟಿ ಮಗ ರಣ್ವಿತ್ ಶೆಟ್ಟಿ ಹುಟ್ಟುಹಬ್ಬ ಸಂಭ್ರಮ : ವೈರಲ್‌ ಆಯ್ತು ವಿಡಿಯೋ

ಡಿವೈನ್‌ಸ್ಟಾರ್‌ ರಿಷಬ್‌ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಗುರುತಿಸಿಕೊಂಡಿದ್ದಾರೆ. ಹೀಗಾಗಿ ಸಿನಿಪ್ರೇಕ್ಷಕರು, ಅಭಿಮಾನಿಗಳು ನಟನ ಎಲ್ಲಾ ನಡೆಗಳನ್ನು ಗಮನಿಸುತ್ತಾ ಇದ್ದಾರೆ. ಇತ್ತೀಚೆಗಷ್ಟೇ ತಮ್ಮ ಮಗಳ ಮೊದಲ ವರ್ಷದ ಹುಟ್ಟುಹಬ್ಬ ಸಂಭ್ರಮಾಚರಣೆಯನ್ನು ಸಿನಿಗಣ್ಯರು, ಆಪ್ತ ಸ್ನೇಹಿತರು ಸೇರಿದಂತೆ ಹಲವರೊಂದಿಗೆ ಬಹಳ ಅದ್ಧೂರಿಯಾಗಿ ಆಚರಿಸಿದ್ದಾರೆ. ನಟ ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ಅವರ ಮಗ ರಣ್ವಿತ್ ಶೆಟ್ಟಿ ಹುಟ್ಟುಹಬ್ಬಕ್ಕೆ (Actor Rishabh Shetty son’s birthday) ತಮ್ಮ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವನ್ನು ಹಂಚಿಕೊಳ್ಳುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ.

ರಿಷಬ್‌ ಶೆಟ್ಟಿ ಹಾಗೂ ಪ್ರಗತಿ ಶೆಟ್ಟಿ ದಂಪತಿಗಳು ತಮ್ಮ ಸಾಮಾಜಿಕ ಜಾಲತಾಣದಲ್ಲಿ, “ನಮ್ಮ ಪ್ರೀತಿಯ ಮಗನಿಗೆ ನಾಲ್ಕನೇ ವರ್ಷದ ಹುಟ್ಟು ಹಬ್ಬದ ಶುಭಾಶಯಗಳು..” ಎಂದು ಬರೆದು ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡುವ ಮೂಲಕ ಸಂತಸವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ತಮ್ಮ ಮಗುವಿನ ಆರಂಭಿಕ ದಿನದ ಚಲನವಲನವನ್ನು ಹಂಚಿಕೊಂಡಿದ್ದಾರೆ. ರಣ್ವಿತ್ ಶೆಟ್ಟಿ ಪುಟ್ಟ ಮಗುವಿನಿಂದ ಹಿಡಿದು ಇಲ್ಲಿಯವರೆಗಿನ ಓಡಾಟ, ಆಟಗಳನ್ನು ಹೆಚ್ಚಿನ ಪೋಟೋ ಹಾಗೂ ವಿಡಿಯೋವನ್ನು ಇದರಲ್ಲಿ ಕಾಣಬಹುದು.

ಇದನ್ನೂ ಓದಿ : “ಪುಷ್ಪ 2” ಫಸ್ಟ್ ಲುಕ್ ಪೋಸ್ಟರ್ ಹಂಚಿಕೊಂಡ ಅಲ್ಲು ಅರ್ಜುನ್

ಇದನ್ನೂ ಓದಿ : “ಅಜ್ಞಾತವಾಸಿ” ಸಿನಿಮಾ ಟೀಸರ್‌ಗೆ ಮೆಚ್ಚಗೆ ವ್ಯಕ್ತಪಡಿಸಿದ ನಟ ರಕ್ಷಿತ್‌ ಶೆಟ್ಟಿ

ಸದ್ಯ ರಿಷಬ್‌ ಶೆಟ್ಟಿ ಕಾಂತಾರ 2 ಸಿನಿಮಾ ಕಥೆಯನ್ನು ಬರೆಯುವಲ್ಲಿ ಬ್ಯುಸಿಯಾಗಿದ್ದಾರೆ. ಈ ಮೂಲಕ ಕಾಂತಾರ 2 ಮುಂದಿನ ವರ್ಷದ ಬೇಸಿಗೆಯಲ್ಲಿ ಬೆಳ್ಳಿತೆರೆಗೆ ಅಪ್ಪಳಿಸಲಿದೆ. ಇಷ್ಟೇ ಅಲ್ಲದೇ “ಕಾಂತಾರ 2” “ಕಾಂತಾರ” ಸಿನಿಮಾದ ಮುಂದುವರಿದ ಭಾಗವಲ್ಲ ಎಂಬುದೂ ಸಹ ಖಚಿತವಾಗಿದೆ. ಈ ಬಾರಿ ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಕಥೆಗೂ ಹಿಂದೆ ನಡೆದಿದ್ದೇನು ಎಂಬುದನ್ನು ತೆರೆಮೇಲೆ ತರಲಿದ್ದು, ಇದು ಸೀಕ್ವೆಲ್ ಆಗಿರದೇ ಪ್ರೀಕ್ವೆಲ್ ಆಗಿರಲಿದೆ. ಕಾಂತಾರ ಸಿನಿಮಾದಲ್ಲಿ ತೋರಿಸಲಾಗಿದ್ದ ಭೂತಕೋಲದ ಹಿನ್ನೆಲೆಯನ್ನು ಈ ಬಾರಿ ಇನ್ನೂ ಆಳವಾಗಿ ತೋರಿಸಲಾಗುತ್ತದೆ. ಈ ಮೂಲಕ ಕಾಡುಬೆಟ್ಟು ಶಿವನ ತಂದೆಯ ಕಾಲಘಟ್ಟದ ಕಥೆಯನ್ನು ಸಿನಿ ರಸಿಕರು ನಿರೀಕ್ಷಿಸಬಹುದು ಎಂದು ಸಿನಿತಂಡ ತಿಳಿಸಿದ್ದಾರೆ.

Actor Rishabh Shetty son’s birthday : Actor Rishabh Shetty’s son Ranvit Shetty’s birthday celebration: Video went viral

Comments are closed.