Actress Anugowda : ಸ್ಯಾಂಡಲ್‌ವುಡ್‌ ನಟಿ ಅನುಗೌಡ ಮೇಲೆ ಹಲ್ಲೆ : ಸಾಗರದ ಸ್ಥಳೀಯ ನಿವಾಸಿಗಳ ಮೇಲೆ ದೂರು ದಾಖಲು

ನಟಿ ಅನುಗೌಡ (Actress Anugowda) ಕಿರುತೆರೆ, ಕನ್ನಡ ಹಾಗೂ ತಮಿಳು ಸಿನಿಮಾಗಳಲ್ಲಿ ಅಭಿನಯಿಸಿ ಗುರುತಿಸಿಕೊಂಡಿದ್ದಾರೆ. ಸದ್ಯ ನಟಿ ಅನುಗೌಡ ಅವರಿಗೆ ತಮ್ಮ ಊರಿನಲ್ಲಿ ಸ್ಥಳೀಯರಿಂದ ಹಲ್ಲೆಗೆ ಒಳಗಾಗಿದ್ದಾರೆ.

ನಟಿ ಅನುಗೌಡ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ನಟಿಯ ಮೇಲೆ ಸ್ಥಳೀಯ ನಿವಾಸಿಗಳು ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ನಟಿ ಅನುಗೌಡ ಹಾಗೂ ಸ್ಥಳೀಯ ನಿವಾಸಿಗಳಾದ ನೀಲಮ್ಮ ಹಾಗೂ ಮೋಹನ್‌ ಎನ್ನುವರ ನಡುವೆ ಸಾಗರದಲ್ಲಿ ಇರುವ ಜಮೀನು ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ. ಇದೇ ವೇಳೆಯಲ್ಲಿ ಅನುಗೌಡ ಮೇಲೆ ಆರೋಪಿಗಳು ಇಬ್ಬರೂ ಸೇರಿಕೊಂಡು ಹಲ್ಲೆ ಮಾಡಿದ್ದು ತಲೆಗೆ ಏಟು ಬಿದ್ದಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಾಗರದ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಟಿ ಅನುಗೌಡ ಶಿವರಾಜ್‌ಕುಮಾರ್‌, ವಿಷ್ಣುವರ್ಧನ್‌, ಪುನೀತ್‌ ರಾಜ್‌ಕುಮಾರ್‌, ಸುದೀಪ್‌ ಸೇರಿದಂತೆ ಸ್ಟಾರ್‌ ನಟರ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡ ಮಾತ್ರವಲ್ಲದೇ ತಮಿಳು ಸಿನಿಮಾಗಳಿಗೂ ಬಣ್ಣ ಹಚ್ಚಿದ್ದಾರೆ. ಇನ್ನು ಕಾಲುವುಡ್‌ನಲ್ಲೂ ಅನುಗೌಡ ತಕ್ಕ ಮಟ್ಟಿಗೆ ಪರಿಚಿತರೇ ಆಗಿದ್ದಾರೆ.

ಇದನ್ನೂ ಓದಿ : Salaar Teaser : ನಟ ಪ್ರಭಾಸ್‌ ಅಭಿನಯದ ಆಕ್ಷನ್‌ ಸಿನಿಮಾ ಸಲಾರ್ ಟೀಸರ್ ರಿಲೀಸ್‌ ಯಾವಾಗ ?

ಇದನ್ನೂ ಓದಿ : Shah Rukh Khan Injured : ಶೂಟಿಂಗ್‌ ಸೆಟ್‌ನಲ್ಲಿ ಅವಘಡ : ಅಮೇರಿಕಾದಲ್ಲಿ ಶಾರುಖ್ ಖಾನ್‌ಗೆ ಶಸ್ತ್ರಚಿಕಿತ್ಸೆ

ನಟಿ ಅನುಗೌಡ ಸಿನಿಮಾ ಹಾಗೂ ಕಿರುತರೆಯಲ್ಲಿ ನಟಿಸುತ್ತಿದ್ದು, ಸಾಗರ ತಾಲೂಕಿನ ಕಾಸ್ಪಾಡಿ ಗ್ರಾಮದಲ್ಲಿ ಜಮೀನು ಹೊಂದಿದ್ದರು. ಸದ್ಯ ಈ ಜಮೀನನ್ನು ಅವರ ತಂದೆ-ತಾಯಿ ನೋಡಿಕೊಳ್ಳುತ್ತಿದ್ದರು. ನಟಿ ನಟನೆ ಸಲುವಾಗಿ ಬೆಂಗಳೂರಿನಲ್ಲಿ ವಾಸವಾಗಿದ್ದು, ಆಗಾಗ ತಮ್ಮ ಊರಿಗೆ ಹೋಗಿ ಬರುತ್ತಿದ್ದರು. ಹಾಗಾಗಿ ತಮ್ಮ ಜಮೀನನ್ನು ನೋಡಲು ಹೋಗಿದ್ದಾಗ, ಸ್ಥಳೀಯ ನಿವಾಸಿಗಳಾದ ನೀಲಮ್ಮ ಹಾಗೂ ಮೋಹನ್‌ ಎನ್ನುವವರ ನಡುವೆ ಮಾತಿನ ಚಕಮಕು ನಡೆದು ಹಲ್ಲೆ ನಡೆದಿದೆ. ಸದ್ಯ ಹಲ್ಲೆಗೊಂಡ ನಟಿ ಅನುಗೌಡ ಸಾಗರದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

Actress Anugowda: Sandalwood actress Anugowda assaulted: Local residents of Sagar file complaint

Comments are closed.