PRL Recruitment 2022 : PRL ನಲ್ಲಿ ಉದ್ಯೋಗಾವಕಾಶ : ಅಸಿಸ್ಟಂಟ್‌ ಹುದ್ದೆಗಳಿಗೆ ಆನ್‌ಲೈನ್‌ ನಲ್ಲಿ ಅರ್ಜಿ ಸಲ್ಲಿಸಿ.

ಡಾ. ವಿಕ್ರಮ್‌ ಸಾರಾಭಾಯ್‌ ಅವರಿಂದ 1947ರಲ್ಲಿಸ್ಥಾಪಿಸಲ್ಪಟ್ಟ ಫಿಸಿಕಲ್‌ ರಿಸರ್ಚ್‌ ಲ್ಯಾಬೋರೇಟರಿ (PRL) ಅನ್ನು ಭಾರತದ ಬಾಹ್ಯಾಕಾಶ ವಿಜ್ಞಾನದ ತೊಟ್ಟಿಲು ಎಂದು ಕರೆಯುತ್ತಾರೆ. ಭಾರತ ಸರ್ಕಾರದ ಬಾಹ್ಯಾಕಾಶ ಇಲಾಖೆಯ ಘಟಕವಾಗಿರುವ PRL ಭೌತಶಾಸ್ತ್ರ, ಬಾಹ್ಯಾಕಾಶ ಮತ್ತು ವಾಯುಮಂಡಲದ ವಿಜ್ಞಾನ, ಖಗೋಳವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ಸೌರ ಭೌತಶಾಸ್ತ್ರ, ಮತ್ತು ಗ್ರಹ ಮತ್ತು ಭೂ-ವಿಜ್ಞಾನಗಳ ಆಯ್ದ ಕ್ಷೇತ್ರಗಳಲ್ಲಿ ಮೂಲಭೂತ ಸಂಶೋಧನೆಗಳನ್ನು ನಡೆಸುತ್ತದೆ. PRL (PRL Recruitment 2022) ನಲ್ಲಿ ಸಹಾಯಕ ಮತ್ತು ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌ ನೇಮಕಾತಿಗಾಗಿ ಆನಲೈನ್‌ನಲ್ಲಿ ಆರ್ಜಿ ಆಹ್ವಾನಿಸಿದೆ. ಪದವೀಧರರು ಇದರ ಉಪಯೋಗ ಪಡೆದುಕೊಳ್ಳಬಹುದಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅಕ್ಟೋಬರ್‌ 15, 2022ರ ಮೊದಲು ಅರ್ಜಿ ಸಲ್ಲಿಸಬಹುದಾಗಿದೆ.

ಹುದ್ದೆಗಳ ವಿವಿರ :
ಹುದ್ದೆ : ಅಸಿಸ್ಟೆಂಟ್‌
UR – 06, OBC – 02, EWS – 01, SC – 01, ST – 01. ಒಟ್ಟು 11 ಹುದ್ದೆಗಳು.

ಹುದ್ದೆ : ಜೂನಿಯರ್‌ ಪರ್ಸನಲ್‌ ಅಸಿಸ್ಟಂಟ್‌
UR – 04, OBC – 01, SC – 01. ಒಟ್ಟು 7 ಹುದ್ದೆಗಳು.

ಅರ್ಹತೆ :
ಅಸಿಸ್ಟೆಂಟ್‌ ಹುದ್ದೆಗಳಿಗೆ, ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಮತ್ತು ಕಂಪ್ಯೂಟರ್‌ ಪ್ರಾವೀಣ್ಯತೆಯೊಂದಿಗೆ ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು.

ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌ ಹುದ್ದೆಗೆ ಅಭ್ಯರ್ಥಿಗಳು ಕನಿಷ್ಠ 60% ಅಂಕಗಳೊಂದಿಗೆ ಮತ್ತು ಕಂಪ್ಯೂಟರ್‌ ಪ್ರಾವೀಣ್ಯತೆಯೊಂದಿಗೆ ಭಾರತದ ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪದವಿ ಪಡೆದಿರಬೇಕು. ಮತ್ತು 60 WPM ಇಂಗ್ಲೀಷ್‌ ಸ್ಟೆನೋಗ್ರಾಫ್‌ ನೈಪುಣ್ಯತೆಯೊಂದಿಗೆ ಕಂಪ್ಯೂಟರ್‌ ಜ್ಞಾನ ಹೊಂದಿರಬೇಕು. ಅಥವಾ ಒಂದು ವರ್ಷದ ಅನುಭವ ಹೊಂದಿರುವ ಮತ್ತು ಕನಿಷ್ಠ 60% ಅಂಕ ಪಡೆದಿರುವ ಕಮರ್ಷಿಯಲ್‌/ಸೆಕ್ರೆಟಿರಿಯಲ್‌ ಪ್ರ್ಯಾಕ್ಟೀಸ್‌ ಡಿಪ್ಲೊಮಾ ಆಗಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಹೆಚ್ಚಿನ ಮಾಹಿತಿಗೆ PRL ವೆಬ್‌ಸೈಟ್‌ಗೆ ಭೇಟಿ ಕೊಡಿ.

ಇದನ್ನೂ ಓದಿ : Instagram : ಹೊಸ ‘ನೋಟ್ಸ್‌’ ವೈಶಿಷ್ಟ್ಯ ಪರಿಚಯಿಸಿದ ಇನ್‌ಸ್ಟಾಗ್ರಾಮ್‌; ಬಳಸುವುದು ಹೇಗೆ ಅಂತೀರಾ

ವಯೋಮಿತಿ :
ಕನಿಷ್ಠ ವಯಸ್ಸು 18 ವರ್ಷ ಮತ್ತು ಗರಿಷ್ಠ ವಯಸ್ಸು 28 ವರ್ಷಗಳು. ಫಿಸಿಕಲ್ ರಿಸರ್ಚ್ ಲ್ಯಾಬೋರೇಟರಿ PRL 2022 ನೇಮಕಾತಿ ನಿಯಮಗಳ ಪ್ರಕಾರ ವಯಸ್ಸಿನ ಸಡಿಲಿಕೆ ಇರುತ್ತದೆ.

ಅರ್ಜಿ ಶುಲ್ಕ :
UR/OBC/EWS ಅಭ್ಯರ್ಥಿಗಳು 250/– ಅರ್ಜಿ ಶುಲ್ಕ ಭರಿಸತಕ್ಕದ್ದು. SC/ST/PH ಮತ್ತು ಎಲ್ಲಾ ಮಹಿಳೆಯರಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಡೆಬಿಟ್‌ ಕಾರ್ಡ್‌/ಕ್ರೆಡಿಟ್‌ ಕಾರ್ಡ್‌/ನೆಟ್‌ ಬ್ಯಾಂಕಿಗ್‌ ಫೀಸ್‌ ಅಥವಾ UPI ಮುಖಾಂತರ ಅರ್ಜಿ ಶುಲ್ಕ ಪಾವತಿಸಬಹುದಾಗಿದೆ.

ಅರ್ಜಿ ಸಲ್ಲಿಕೆ ಹೇಗೆ?

  • ಮೊದಲಿಗೆ PRL ನ ಅಧಿಕೃತ ವೆಬ್‌ಸೈಟ್‌ ಗೆ https://www.prl.res.in/ ಭೇಟಿ ಕೊಡಿ.
  • ಹೋಮ್‌ ಪೇಜ್‌ನಲ್ಲಿ ಕಾಣಿಸುವ ಅಪಾರ್ಚುನಿಟಿ ಮೇಲೆ ಟ್ಯಾಪ್‌ ಮಾಡಿ.
  • ಅಲ್ಲಿ ಜಾಬ್‌ ವೆಕೆನ್ಸಿ ಮೇಲೆ ಕ್ಲಿಕ್ಕಿಸಿ.
  • ಅಲ್ಲಿ ಅಡ್ವೆಟೈಸ್‌ಮೆಂಟ್‌ ಫಾರ್‌ ರಿಕ್ರುಟ್‌ಮೆಂಟ್‌ ಆಪ್‌ ಅಸಿಸ್ಟೆಂಟ್‌ ಆಂಡ್‌ ಜೂನಿಯರ್‌ ಪರ್ಸನಲ್‌ ಅಸಿಸ್ಟೆಂಟ್‌ ಆಟ್‌ PRL ಮೇಲೆ ಕ್ಲಿಕ್ಕಿಸಿ.
  • ಸೂಕ್ತ ಮಾಹಿತಿಗಳೊಂದಿಗೆ ಅರ್ಜಿ ಭರ್ತಿ ಮಾಡಿ.
  • ಅರ್ಜಿ ಶುಲ್ಕ ಪಾವತಿಸಿ.
  • ಸಬ್ಮಿಟ್‌ ಮಾಡಿ ಮತ್ತು ಅಪ್ಲಿಕೇಶನ್‌ ಸೇವ್‌ ಮಾಡಿಕೊಳ್ಳಿ.

ಇದನ್ನೂ ಓದಿ : SAIL Recruitment 2022 : ಸ್ಟೀಲ್‌ ಅಥೋರಿಟಿ ಆಪ್‌ ಇಂಡಿಯಾದಲ್ಲಿ ಉದ್ಯೋಗಾವಕಾಶ : ಅರ್ಜಿ ಸಲ್ಲಿಸಲು ಇಂದೇ ಕೊನೆ ದಿನ

(PRL Recruitment 2022 apply online for assistant posts)

Comments are closed.