POCSO Case : ಮುರುಘಾ ಶ್ರೀ ಮತ್ತು ಇಬ್ಬರ ವಿರುದ್ಧ ಆರೋಪ ದೃಢ : ಚಿತ್ರದುರ್ಗ ಎಸ್ಪಿ

ಚಿತ್ರದುರ್ಗ: ಮುರಘಾ ಶ್ರೀಗಳು ಪೋಕ್ಸೋ (POCSO Case)ಪ್ರಕರಣದಲ್ಲಿ ಜೈಲುಪಾಲಗಿದ್ದು, ಅವರ ವಿರುದ್ಧ ಇಬ್ಬರು ಬಾಲಕಿಯರು ದೂರು ನೀಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಭಾಗಶಃ ಪೂರ್ಣಗೊಂಡಿದ್ದು,  ಚಾರ್ಜ್‌ಶೀಟ್‌ ಸಲ್ಲಿಸಲಾಗಿದೆ ಎಂದು ಚಿತ್ರದುರ್ಗದಲ್ಲಿ ಪೊಲೀಸ್‌ ಅಧಿಕಾರಿ ಪರಶುರಾಮ್‌ ಹೇಳಿದ್ದಾರೆ. 

ಈ ಹಿಂದೆ ಅಕ್ಟೋಬರ್‌ 27ರಂದೇ ತನಿಖಾಧಿಕಾರಿ ಅನಿಲ್‌ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. 2ನೇ ಹೆಚ್ಚುವರಿ ಸೆಷನ್ಸ್‌ ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ್ದಾರೆ. ಇನ್ನೂ ಚಾರ್ಜ್‌ಶೀಟ್‌ನ ಸಿಸಿ ನಂಬರ್‌ ಬರುವುದು ಬಾಕಿಯಿದೆ ಎಂದಿದ್ದಾರೆ. ಇದರ ಮಧ್ಯೆ ಎ1 ಡಾ.ಶಿವಮೂರ್ತಿ ಮುರುಘಾ ಶರಣರು, ಎ2 ವಾರ್ಡನ್‌ ರಶ್ಮಿ ಮತ್ತು ಎ4 ಪರಮಶಿವಯ್ಯ ವಿರುದ್ಧ ಆರೋಪ ದೃಢಪಟ್ಟಿವೆ ಎಂದು ಚಿತ್ರದುರ್ಗ ಎಸ್‌ಪಿ ಹೇಳಿದ್ದಾರೆ. ಆದರೆ ಏ3 ಮಠದ ಉತ್ತರಾಧಿಕಾರಿ ಹಾಗೂ ಎ5 ಗಂಗಾಧರಯ್ಯ ಇವರಿಬ್ಬರ ವಿರುದ್ಧದ ಆರೋಪಗಳಿಗೆ ಸಂಬಂಧ ಪಟ್ಟಂತೆ ಯಾವುದೇ ಸಾಕ್ಷ್ಯಾಧಾರಗಳು ಲಭ್ಯವಾಗಿಲ್ಲ. ತನಿಖೆ ನಡೆಯುತ್ತಿದ್ದು, ಸಾಕ್ಷ್ಯಗಳನ್ನು ಸಂಗ್ರಹಿಸಲಾಗುತ್ತಿದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ಅಂತಿಮ ಚಾರ್ಜ್ ಶೀಟ್ ಸಲ್ಲಿಸುತ್ತೇವೆ ಎಂದು ಚಿತ್ರದುರ್ಗ ಎಸ್ಪಿ ಸ್ಪಷ್ಟಪಡಿಸಿದ್ದಾರೆ.

2 ನೇ ಫೋಕ್ಸೋ ಪ್ರಕರಣದ ತನಿಖೆ :
ತನಿಖಾಧಿಕಾರಿ ಡಿವೈಎಸ್ಪಿ ಅನಿಲ್ ಅವರು 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ 27/10/2022 ರಂದು ಚಾರ್ಜ್ ಶೀಟ್ ಸಲ್ಲಿಸಿದ್ದಾರೆ. ಚಿತ್ರದುರ್ಗದ ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣದಲ್ಲಿ ಈಗಾಗಲೇ ಸಂತ್ರಸ್ತೆಯ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಸಂತ್ರಸ್ತರ ಪೋಷಕರ ಹೇಳಿಕೆಯನ್ನೂ ದಾಖಲಿಸಿಕೊಳ್ಳಲಾಗಿದೆ. ಎ1 ಮುರುಘಾಶ್ರೀ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಸಂತ್ರಸ್ತರ ಹೇಳಿಕೆ ಆಧರಿಸಿ ಕೆಲ ಬಾಲಕಿಯರ ಹೇಳಿಕೆ ಪಡೆದಿರುತ್ತೇವೆ ಎಂದಿದ್ದಾರೆ.

ಇದನ್ನೂ ಓದಿ : Bangalore Crime News : ಮಗುವಿನ ಕಾಯಿಲೆ ಬಗ್ಗೆ ನೆಂಟರ ಕೊಂಕು ಮಾತು : ಹೆತ್ತ ಮಗುವನ್ನೇ ಕೊಂದ ತಾಯಿ

ಇದನ್ನೂ ಓದಿ : MP Renukacharya : ಚಂದ್ರಶೇಖರ್ ಸಾವಿನ ಪ್ರಕರಣ ವಿನಯ್ ಗೂರೂಜಿ ಆಶ್ರಮದಲ್ಲಿ ತನಿಖೆ

ಇದನ್ನೂ ಓದಿ : Bandemath swamiji suicide case : ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಪತ್ತೆ

ಮುರುಘಾಶ್ರೀಯಿಂದ 15ಕ್ಕೂ ಹೆಚ್ಚು ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಆರೋಪ:
ಮುರುಘಾಶ್ರೀ ಅವರಿಂದ 15ಕ್ಕೂ ಹೆಚ್ಚು ಮಕ್ಕಳು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಪಾಲುದಾರ ಸಂಸ್ಥೆಯ ಸ್ಟಾನ್ಲಿಗೆ ಕರೆ ಮಾಡಿ ಮಾಹಿತಿಯನ್ನು ಪಡೆದುಕೊಂಡಿರುತ್ತೇವೆ. ಸಂತ್ರಸ್ತೆರು ಮಾಹಿತಿ ನೀಡಿದರೆ ತನಿಖೆ ನಡೆಸುತ್ತೇವೆ ಎಂದು ತಿಳಿಸಿದ್ದಾರೆ. ಒಡನಾಡಿ ಸಂಸ್ಥೆ, ಮಕ್ಕಳ ಕಲ್ಯಾಣ ಸಮಿತಿ ಸಹಯೋಗದಲ್ಲಿ ತನಿಖೆ ನಡೆಸುವಂತೆ ಮನವಿ ಮಾಡಿದ್ದೇವೆ.  ಒಡನಾಡಿ ಸಂಸ್ಥೆಗಳು ಕೆಲವು ಮಾಹಿತಿಯನ್ನು ಒದಗಿಸಿರುತ್ತಾರೆ. ಅದರಂತೆ ಮಾಹಿತಿಯನ್ನು ಆಧರಿಸಿ ತನಿಖೆ ಮುಂದುವರಿಸಿದ್ದೇವೆ. ಆದರೆ ಆ ಸ್ಥಳದಲ್ಲಿ ಸಂತ್ರಸ್ತ ಬಾಲಕಿ ಸಿಕ್ಕಿರುವುದಿಲ್ಲ. ಈ ಬಗ್ಗೆ ಒಡನಾಡಿ ಸಂಸ್ಥೆಗೂ ತಿಳಿಸಿದ್ದೇವೆ. ಸಂತ್ರಸ್ತರ ಬಗ್ಗೆ ಮಾಹಿತಿ ಸಿಕ್ಕರೆ ಖಂಡಿತ ತನಿಖೆ ನಡೆಸುತ್ತೇವೆ ಎಂದು ದುರ್ಗದ ಎಸ್ಪಿ ತಿಳಿಸಿದ್ದಾರೆ.

POCSO case: Allegation confirmed against Muruga Sri and two others – Chitradurga SP

Comments are closed.