Aditi Prabhudeva : ಅದಿತಿ ಪ್ರಭುದೇವ ಅರಶಿನ ಶಾಸ್ತ್ರ : ಪೋಟೋ ವೈರಲ್

ಸ್ಯಾಂಡಲ್‌ವುಡ್‌ನ ಬಹುಬೇಡಿಕೆ ನಟಿಯಾಗಿ ಗುರುತಿಸಿಕೊಂಡಿರುವ ಅದಿತಿ ಪ್ರಭುದೇವ (Aditi Prabhudeva) ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಹಲವು ಸಿನಿಮಾಗಳಲ್ಲಿ ನಟಿಸಿ ಜನಮನ ಗೆದ್ದಿರುವ ಅಪ್ಪಟ ಕನ್ನಡದ ನಟಿ ಎನಿಸಿಕೊಂಡಿದ್ದಾರೆ. ತಮ್ಮ ಮದುವೆಯ ಪೂರ್ವಭಾವಿ ಶಾಸ್ತ್ರಗಳಾದ ಅರಶಿಣ ಶಾಸ್ತ್ರ ಇಂದು ನೆರವೇರಿದ್ದು, ಅದರ ಪೋಟೋಸ್‌ಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ನಟಿ ಅದಿತಿ ಪ್ರಭುದೇವ್‌ ಸುಂದರವಾಗಿ ರೆಡಿಯಾಗಿದ್ದು, ಅರಶಿನ ನೀರಿನಲ್ಲಿ ಮಿಂದು ವಧುವಿನ ಕಳೆ ತಳೆದಿದ್ದಾರೆ. ಸುಂದರವಾಗಿರುವ ಬಿಳಿ ಬಣ್ಣದ ಸೀರೆ ಹಾಗೂ ಅರಶಿನ ಶಾಸ್ತ್ರಕ್ಕೆ ಟ್ರೇಡಿಂಗ್‌ನಲ್ಲಿರುವ ಜ್ಯುವೆಲ್ಸ್‌ನ್ನು ಧರಿಸಿ ಪೋಟೋಗಳಿಗೆ ಸಖತ್‌ ಪೋಸ್‌ನ್ನು ಕೊಟ್ಟಿದ್ದಾರೆ. ನಟಿ ಅರಶಿನ ಶಾಸ್ತ್ರಕ್ಕೆ ವೈಟ್‌ ಔಟ್‌ಫಿಟ್‌ ಆರಸಿಕೊಂಡಿದ್ದು ಚಂದದ ನಗುವಿನೊಂದಿಗೆ ಹೆಚ್ಚು ಕ್ಯೂಟ್‌ ಆಗಿ ಕಾಣಿಸಿದ್ದಾರೆ.

ನಟಿ ಅದಿತಿ ಪ್ರಭುದೇವ್‌ ಯಶಸ್ವಿ ಜೊತೆ ವೈವಾಹಿಕ ಜೀವನಕ್ಕೆ ಕಾಲಿಡುತ್ತಿದ್ದಾರೆ. ಇವರ ವಿವಾಹ ಸಮಾರಂಭವು ನವೆಂಬರ್‌ 27 ಭಾನುವಾರದಂದು ಬೆಂಗಳೂರಿನ ಪ್ಯಾಲೇಸ್‌ ಗ್ರೌಂಡ್‌ನಲ್ಲಿ ನಡೆಯಲಿದೆ. ಇಂದು ಅದಿತಿ ಪ್ರಭುದೇವ ಅವರ ಅರಿಶಿಣ ಶಾಸ್ತ್ರ ನೆರವೇರಿದೆ. ಈ ಪೋಟೋಗಳನ್ನು ಅದತಿತಿ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದು, ಅಭಿಮಾನಿಗಳು ಫಿದಾ ಆಗಿದ್ದಾರೆ.

ಇದನ್ನೂ ಓದಿ : Bipasha and Karan : ತಮ್ಮ ಮೊದಲ ಮಗುವಿನ ಪೋಟೋ ಹಂಚಿಕೊಂಡ ಬಿಪಾಶಾ ಕರಣ್ ಸಿಂಗ್ ಗ್ರೋವರ್ ದಂಪತಿ

ಇದನ್ನೂ ಓದಿ : “Mary” First Look poster: “ಆನ” ನಿರ್ದೇಶಕರ ಹೊಸ ಪ್ರಯತ್ನ: “ಮೇರಿ” ಫಸ್ಟ್‌ ಲುಕ್‌ ಪೋಸ್ಟರ್ ಬಿಡುಗಡೆ

ಇದನ್ನೂ ಓದಿ : Bhediya Box Office Collection Day 1 : ಬಾಕ್ಸಾಫೀಸ್‌ನಲ್ಲಿ ದಾಖಲೆ ಬರೆಯತ್ತಿರುವ ವರುಣ್ ಧವನ್ ಭೇದಿಯ ಸಿನಿಮಾ

ಇದನ್ನೂ ಓದಿ : Naga Chaitanya – Sobhita Dhulipala : ನಾಗ ಚೈತನ್ಯ ಸೋಭಿತಾ ಧೂಳಿಪಾಲ ಡೇಟಿಂಗ್: ಪೋಟೋ ವೈರಲ್

ಹಾಗೆ ಈ ಪೋಟೋಗೆ ಫ್ಯಾನ್ಸ್‌ ಹಲವು ಬಗೆಯ ಕಮೆಂಟ್‌ ಮಾಡುವುದರ ಮೂಲಕ ನಟಿಗೆ ಶುಭಾಶಯ ಕೊರುತ್ತಿದ್ದಾರೆ. ಇನ್ನೂ ಅದಿತಿ ಪ್ರಭುದೇವ್‌ನ್ನು ಮದುವೆ ಆಗುತ್ತಿರುವ ಯಶಸ್ವಿ ಉದ್ಯಮಿ ಮತ್ತು ಕಾಫಿ ಪ್ಲಾಂಟರ್‌ ಆಗಿದ್ದಾರೆ. ಇತ್ತೀಚೆಗಷ್ಟೇ ಇವರ ಮದುವೆ ಆಮಂತ್ರಣ ಪತ್ರಿಕೆಯು ಸಖತ್‌ ವೈರಲ್‌ ಆಗಿತ್ತು. ಇನ್ನೂ ನಾಳೆ ನಡೆಯುವ ವಿವಾಹ ಸಮಾರಂಭಕ್ಕೆ ಕುಟುಂಬಸ್ಥರು, ಸ್ನೇಹಿತರು, ಸಿನಿಗಣ್ಯರು ಸೇರಿದಂತೆ ಅನೇಕರು ಸಾಕ್ಷಿಯಾಗಲಿದ್ದಾರೆ.

Aditi Prabhudeva Arashina Shastra : Photo Viral

Comments are closed.