Natural Dry Cough Medicine:ಒಣಕೆಮ್ಮು ಸಮಸ್ಯೆ ನಿಮ್ಮನ್ನು ಕಾಡುತ್ತಿದೆಯೇ? ಇಲ್ಲಿದೆ ಪರಿಹಾರ

(Natural Dry Cough Medicine)ವಾತಾವರಣದಲ್ಲಿ ಆಗುವ ಬದಲಾವಣೆಯಿಂದ ಇತ್ತಿಚೀನ ದಿನಗಳಲ್ಲಿ ಎಲ್ಲರಲ್ಲೂ ಶೀತ, ಕೆಮ್ಮಿನ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಅದರಲ್ಲೂ ಒಣಕೆಮ್ಮಿನ ಸಮಸ್ಯೆ ಹೆಚ್ಚಾಗಿದೆ. ಈ ಒಣಕೆಮ್ಮು ಪದೇ ಪದೇ ಗಂಟಲಿನಲ್ಲಿ ಕಿರಿಕಿರಿ ಮಾಡುತ್ತದೆ. ಇದಕ್ಕೆ ಸುಲಭ ಪರಿಹಾರ ಮನೆಯಲ್ಲಿಯೇ ಔಷಧಿಯನ್ನು ತಯಾರಿಸಿಕೊಂಡು ಕುಡಿಯಬಹುದು. ಈ ಕುರಿತು ಮಾಹಿತಿಯನ್ನು ಈ ಕೆಳಗೆ ತಿಳಿಸಲಾಗಿದೆ.

(Natural Dry Cough Medicine)ಬೇಕಾಗುವ ಸಾಮಾಗ್ರಿಗಳು:

  • ಒಣ ದ್ರಾಕ್ಷಿ
  • ಹಾಲು
  • ಕಲ್ಲುಸಕ್ಕರೆ
  • ನೀರು

ಮಾಡುವ ವಿಧಾನ:
ಒಂದು ಪಾತ್ರೆಯಲ್ಲಿ ಅರ್ಧಕಪ್‌ ನೀರುಹಾಕಿಕೊಂಡು ಅದಕ್ಕೆ ಒಣದ್ರಾಕ್ಷಿ ಹಾಕಿ ಸಣ್ಣ ಉರಿಯಲ್ಲಿ ಚೆನ್ನಾಗಿ ಕಾಯಿಸಿಕೊಳ್ಳಬೇಕು. ನಂತರ ಒಣ ದ್ರಾಕ್ಷಿಯನ್ನು ಒಂದುಲೋಟಕ್ಕೆ ಹಾಕಿಕೊಂಡು ಸ್ಮಾಶ್‌ ಮಾಡಿಕೊಳ್ಳಬೇಕು. ಪಾತ್ರೆಗೆ ಹಾಲು ಹಾಕಿ ಬಿಸಿ ಮಾಡಿಕೊಂಡು ಬದಿಯಲ್ಲಿ ತೆಗೆದಿಟ್ಟುಕೊಳ್ಳಬೇಕು. ಸ್ಮಾಶ್‌ ಮಾಡಿಕೊಂಡ ಒಣ ದ್ರಾಕ್ಷಿಯ ರಸ , ಕಲ್ಲುಸಕ್ಕರೆಯನ್ನು ಒಂದು ಲೋಟದಲ್ಲಿ ಹಾಕಬೇಕು ಅದಕ್ಕೆ ಬಿಸಿ ಮಾಡಿಕೊಂಡ ಹಾಲು ಬೆರೆಸಿ ಕುಡಿದರೆ ಒಣಕೆಮ್ಮು ಕಡಿಮೆ ಆಗುತ್ತದೆ. ದೊಡ್ಡವರು ದ್ರಾಕ್ಷಿಯ ಸಮೇತ ಹಾಲು ಕುಡಿಯಬಹುದು. ಹತ್ತರಿಂದ ಹದಿನೈದು ದಿನ ಇದನ್ನು ರಾತ್ರಿ ಮಲಗುವ ಮುನ್ನ ಸೇವನೆ ಮಾಡುವುದರಿಂದ ಒಣಕೆಮ್ಮು ಸಮಸ್ಯೆ ನಿವಾರಣೆ ಆಗುತ್ತದೆ.

ಬೇಕಾಗುವ ಸಾಮಾಗ್ರಿಗಳು:

  • ಜೀರಿಗೆ
  • ನೀರು
  • ಕರಿಬೆಲ್ಲ

ಇದನ್ನೂ ಓದಿ:Facial Beauty Tips :ಮುಖದ ಅಂದ ಹೆಚ್ಚಿಸಲು ಈ ನಾಲ್ಕು ಬ್ಯೂಟಿ ಟಿಪ್ಸ್‌ ಅನುಸರಿಸಿ

ಇದನ್ನೂ ಓದಿ:Sanitary Pad : “ಸ್ಯಾನಿಟರಿ ಪ್ಯಾಡ್‌” ಬಳಸುವ ಹದಿಯರೆಯದ ಹೆಣ್ಣುಮಕ್ಕಳೇ ಹುಷಾರ್ ! ನಿಮ್ಮನ್ನು ಕಾಡಲಿದೆ ಕ್ಯಾನ್ಸರ್‌, ಬಂಜೆತನ

ಇದನ್ನೂ ಓದಿ:ISRO : ಓಷನ್‌ಸ್ಯಾಟ್‌ ಮತ್ತು ಇತರೆ 8 ಉಪಗ್ರಹಗಳನ್ನು ಇಂದು ಐತಿಹಾಸಿಕವಾಗಿ ಉಡಾವಣೆ ಮಾಡಿದ ಇಸ್ರೋ

ಮಾಡುವ ವಿಧಾನ
ಒಂದು ಬಾಣಲೆಯಲ್ಲಿ ಒಂದು ಚಮಚದಷ್ಟು ಜೀರಿಗೆ ಹುರಿದುಕೊಳ್ಳಬೇಕು. ನಂತರ ಹುರಿದುಕೊಂಡ ಜೀರಿಗೆಯನ್ನು ಕುಟ್ಟಣಿಗೆಯಲ್ಲಿ ಹಾಕಿ ಪುಡಿಮಾಡಿಕೊಂಡು ಒಂದು ಡಬ್ಬಿಯಲ್ಲಿ ಶೇಖರಿಸಿ ಇಟ್ಟುಕೊಳ್ಳಬೇಕು. ಪಾತ್ರೆಯಲ್ಲಿ ನೀರು ಕಾಯಿಸಿಕೊಳ್ಳಬೇಕು . ಲೋಟದಲ್ಲಿ ಪುಡಿಮಾಡಿಕೊಂಡ ಜೀರಿಗೆ ಪುಡಿ, ಕರಿಬೆಲ್ಲ ಹಾಕಿಕೊಂಡು ಅದಕ್ಕೆ ಕುದಿಯುವ ನೀರು ಹಾಕಿ ಮಿಶ್ರಣ ಮಾಡಿ ಮಕ್ಕಳಿಗೆ ಒಂದು ಚಮಚ ಕೊಡುತ್ತ ಬಂದರೆ ಒಣಕೆಮ್ಮಿನಿಂದ ಮುಕ್ತಿ ಪಡೆಯಬಹುದು. ನಾಲ್ಕು ದಿವಸ ಇದನ್ನು ಕುಡಿಯುವುದರಿಂದ ಒಣಕೆಮ್ಮು ಕಡಿಮೆಯಾಗುತ್ತದೆ.

ಒಂದು ಲೋಟಕ್ಕೆ ಹಾಲು ಹಾಕಿಕೊಂಡು ಅದಕ್ಕೆ ಅರ್ಧ ಟೀ ಚಮಚ ಅರಿಶಿಣ ಬೇರೆಸಿ ಮಿಶ್ರಣಮಾಡಿಕೊಂಡು ಕುಡಿಯುವುದರಿಂದ ಒಣಕೆಮ್ಮಿನ ಸಮಸ್ಯೆ ನಿವಾರಣೆ ಆಗುತ್ತದೆ. ಒಂದು ಪಾತ್ರೆಯಲ್ಲಿ ನೀರು ಹಾಕಿಕೊಂಡು ಅದಕ್ಕೆ ಒಂದು ಚಮಚ ಓಮದ ಕಾಳು ಮತ್ತು ಅರ್ಧ ಚಮಚ ಅರಿಶಿಣ ಹಾಕಿ ನೀರನ್ನು ಕಾಯಿಸಿಕೊಳ್ಳಬೇಕು. ನಂತರ ಇದಕ್ಕೆ ಜೇನುತುಪ್ಪ ಹಾಕಿ ಕುಡಿಯುವುದರಿಂದ ಒಣ ಕೆಮ್ಮಿನ ಸಮಸ್ಯೆ ಕಡಿಮೆ ಆಗುತ್ತದೆ. ದಿನದಲ್ಲಿ ಎರಡು ಸಲ ಈ ಕಶಾಯವನ್ನು ಕುಡಿಯಬೇಕು.

Are you suffering from dry cough? Here is the solution

Comments are closed.