Aero India  : ಪ್ರಧಾನಿ ಮೋದಿ ಔತಣಕೂಟದಲ್ಲಿ ಯಶ್, ರಿಷಬ್ ಶೆಟ್ಟಿ : ಆಯ್ತು ವೈರಲ್ ಫೋಟೊ

ಏಷ್ಯಾದ ಅತಿದೊಡ್ಡ ಏರೋ ಶೋ ಏರೋ ಇಂಡಿಯಾ (Aero India) 2023 ಕ್ಕೆ ಉದ್ಘಾಟಿಸಲೆಂದು ಪ್ರಧಾನಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಭಾನುವಾರ ರಾತ್ರಿ (ಫೆಬ್ರವರಿ 12) ಮೋದಿ ಬೆಂಗಳೂರಿನ ಹೆಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಬಂದಿಳಿದ್ದರು. ಇಲ್ಲಿಂದ ನೇರವಾಗಿ ರಾಜಭವನಕ್ಕೆ ತೆರಳಿದ್ದರು. ಇಂದು (ಫೆಬ್ರವರಿ 13) ಏರೋ ಇಂಡಿಯಾ 2023 ಕಾರ್ಯಕ್ರಮದ ಉದ್ಘಾಟನೆ ನಡೆದಿದ್ದು, ಬೆಳಗ್ಗೆ 9.30ಕ್ಕೆ ಏರೋ ಇಂಡಿಯಾ ಶೋವನ್ನು ಉದ್ಘಾಟನೆ ಮಾಡಿದ್ದಾರೆ. ಇದರ ಸಲುವಾಗಿ ಪ್ರಧಾನಿ ಮೋದಿ ಅವರು ಒಂದು ದಿನ ಮುಂಚಿತವಾಗಿಯೇ ಬೆಂಗಳೂರಿಗೆ ಆಗಮಿಸಿದ್ದರು. ಹಾಗಾಗಿ ಸಿನಿರಂಗ, ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಗಣ್ಯರಿಗೆ ಔತಣಕೂಟ ಆಹ್ವಾನ ನೀಡಿದ್ದರು ಎನ್ನಲಾಗಿದೆ. ಈ ಔತಣಕೂಟದಲ್ಲಿ ಸ್ಯಾಂಡಲ್‌ವುಡ್‌ನ ಯಶ್‌, ರಿಷಬ್‌ ಶೆಟ್ಟಿ ಸೇರಿದಂತೆ ಅನೇಕರು ಭಾಗಿಯಾಗಿದ್ದು, ಅವರ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ.

ರಾಜಭವನದಲ್ಲಿ ಪ್ರಧಾನಿ ನರೇಂದ್ರ ಮೋದಿ ಎಲ್ಲಾ ಸಿನಿರಂಗ, ಉದ್ಯಮ ಹಾಗೂ ಕ್ರಿಕೆಟ್ ಕ್ಷೇತ್ರದ ಔತಣಕೂಟದಲ್ಲಿ ಭಾಗಿಯಾಗಿದ್ದರು ಅನ್ನೋ ಸುದ್ದಿ ಓಡಾಡುತ್ತಿದೆ. ಪ್ಯಾನ್‌ ಇಂಡಿಯಾ ಸ್ಟಾರ್‌ಗಳಾ ನಟ ಯಶ್‌, ರಿಷಬ್‌ ಶೆಟ್ಟಿ ಔತಣಕೂಟದಲ್ಲಿ ಭಾಗಿಯಾಗಿದ್ದರು ಎನ್ನು ಸುದ್ದಿ ಹರಿದಾಡಿದೆ. ಹಾಗೇ ನಿರ್ಮಾಪಕ ವಿಜಯ್‌ ಕಿರಗಂದೂರು, ಶ್ರದ್ಧಾ ಜೈನ್‌, ಅಶ್ವಿನಿ ಪುನೀತ್‌ ರಾಜ್‌ಕುಮಾರ್‌, ನಿರ್ದೇಶಕ ಪ್ರಶಾಂತ್‌ ನೀಲ್‌, ಕ್ರಿಕೆಟ್ ಆಟಗಾರರಾದ ಅನಿಲ್‌ ಕುಂಬ್ಳೆ , ವೆಂಕಟೇಶ್‌ ಪ್ರಸಾದ್‌, ಜಾವಗಲ್‌ ಶ್ರೀನಾಥ್‌, ಮನೀಶ್‌ ಪಾಂಡೆ, ಮಯಾಂಕ್‌ ಅಗರ್ವಾಲ್‌, ಉದ್ಯಮಿ ನಿತಿನ್‌ ಕಾಮತ್‌, ತರುಣ್‌ ಮೆಹ್ತಾ ಅವರಿಗೂ ಔತಣಕೂಟಕ್ಕೆ ಆಹ್ವಾನ ನೀಡಲಾಗಿತ್ತು ಎಂದು ವರದಿಯಾಗಿದೆ.

ಇದನ್ನೂ ಓದಿ : Jani Master : ಪುನೀತ್ ರಾಜ್‌ಕುಮಾರ್ ನಿವಾಸಕ್ಕೆ ಜಾನಿ ಮಾಸ್ಟರ್‌ ಭೇಟಿ ವೈರಲ್‌ ಆಯ್ತು ಪೋಸ್ಟ್

ಇದನ್ನೂ ಓದಿ : ಸಿದ್ದಾರ್ಥ್- ಕಿಯಾರಾ ಅದ್ಧೂರಿ ರಿಸೆಪ್ಷನ್ ಪಾರ್ಟಿ: ಭಾಗಿಯಾದ ಬಾಲಿವುಡ್ ತಾರಾಲೋಕ

ಇದನ್ನೂ ಓದಿ : ಬಾಲಯ್ಯ – ದುನಿಯಾ ವಿಜಿ ನಟನೆಯ ‘ವೀರಸಿಂಹ ರೆಡ್ಡಿ’ ಓಟಿಟಿ ರಿಲೀಸ್ ಡೇಟ್‌ ಫಿಕ್ಸ್

ಎಚ್‌ಎಚ್‌ಎಲ್‌ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಧಾನಿ ನರೇಂದ್ರ ಮೋದಿಗೆ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್ ಸ್ವಾಗತಿಸಿದ್ದರು. ಮುಂಬರುವ ಚುನಾಔಣೆ ಹಿನ್ನಲೆಯಲ್ಲಿ ಈ ಔತಣಕೂಟ ಕೂಡ ಮಹತ್ವ ಪಡೆದುಕೊಂಡಿದೆ. ಯಶ್‌ ಮತ್ತು ರಿಷಬ್‌ ಶೆಟ್ಟಿ ಈಗ ಕೇವಲ ಕನ್ನಡ ಸಿನಿರಂಗ ನಟರಾಗಿ ಉಳಿದುಕೊಳ್ಳದೇ, ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿಯೂ ಬೆಳೆದಿದ್ದಾರೆ. ಅವರ ಸಿನಿಮಾ ಬಾಕ್ಸ್‌ ಆಫೀಸಿನಲ್ಲಿ ಕೋಟಿ ಕೋಟಿ ಲೂಟಿ ಆಗಿರುತ್ತದೆ. ಈ ಕಾರಣದಿಂದಾಗಿಯೇ ಪ್ರಧಾನಿ ಮೋದಿ ಭೇಟಿ ಮಹತ್ವ ಪಡೆದುಕೊಂಡಿದೆ.

ಇದನ್ನೂ ಓದಿ : Archana Jois : ಕೆಜಿಎಫ್‌ ಖ್ಯಾತಿಯ ಅರ್ಚನಾ ಜೋಯಿಸ್‌ ಸಿನಿ ಪಯಣದ ಬಗ್ಗೆ ನಿಮಗೆಷ್ಟು ಗೊತ್ತು ?

Aero India: Yash, Rishabh Shetty at PM Modi’s dinner party: Photo goes viral

Comments are closed.