Jurassic World Dominion : ಡೈನೋಸಾರ್‌ಗಳ ಬೃಹತ್‌ ಜಗತ್ತಿನಲ್ಲೊಂದು ಪಯಣ!!

ಜುರಾಸಿಕ್‌ ವಲ್ಡ್‌ ಡೊಮೆನಿಯನ್‌(Jurassic World Dominion) ಚಿತ್ರದ ನಾಯಕ ಓವನ್‌(Owen Grady) ಮಾನವರು ಮತ್ತು ಡೈನೋಸಾರ್‌ಗಳ (Humans and Dinosaurs) ನಡುವೆ ಸಮತೋಲನವನ್ನು ಸೃಷ್ಟಿಸಲು ಪ್ರಯತ್ನಿಸುತ್ತಿದ್ದಂತೆ, ಒಂದು ಕಾಲದಲ್ಲಿ ಪ್ರಾಬಲ್ಯ ಹೊಂದಿದ್ದ ಮತ್ತು ಭೂಮಿಯಾದ್ಯಂತ ಸಂಚರಿಸುತ್ತಿದ್ದ ಬೃಹತ್‌ ಪ್ರಭೇದಗಳ ಮೇಲೆ ವಿಜ್ಞಾನದ ಮೂಲಕ ಮತ್ತೊಮ್ಮೆ ನೋಡುವಂತೆ ಮಾಡಿದೆ.

ಇಸ್ಲಾ ನುಬ್ಲಾರ್‌ ನಾಶವಾದ 4 ವರ್ಷಗಳ ನಂತರ ಡೈನೋಸಾರ್‌ಗಳ ಜೊತೆಯಲ್ಲಿ ಬದುಕಲು ಕಲಿಯುತ್ತಿರುವ ಪ್ರಪಂಚದೊಂದಿಗೆ ಓವನ್‌ ಗ್ರೇಡಿ ಜುರಾಸಿಕ್‌ ವಲ್ಡ್‌ ಡೊಮೆನಿಯನ್‌ ಚಿತ್ರದೊಂದಿಗೆ ಮತ್ತೆ ಮರಳಿದ್ದಾರೆ. ಓವನ್‌ ಎರಡು ಜಾತಿಗಳ ನಡುವೆ ಸಮತೋಲನವನ್ನು ಸೃಷ್ಟಿಸಲು ನೋಡುತ್ತಿರುವಂತಿದೆ. ಆದರೆ ಉಳಿದಿರ ಪ್ರಶ್ನೆಎಂದರೆ ನೈಜ ಜಗತ್ತಿನಲ್ಲಿ ನಾವು ಡೈನೋಸಾರ್‌ಗಳೊಂದಿಗೆ ಬದುಕಬಹುದಿತ್ತೇ?

ಡೈನೋಸಾರ್‌ಗಳು ಒಂದಾನೊಂದು ಕಾಲದಲ್ಲಿ ಭೂಮಿಯಲ್ಲಿ ವಾಸಿಸುತ್ತಿದ್ದವು, ಕೇವಲ ವಾಸಿಸುವುದಷ್ಟೇ ಅಲ್ಲ, ದುರಂತ ಘಟನೆಯು ಗ್ರಹದ ಮೇಲ್ಮೈಯಿಂದ ಅವುಗಳನ್ನು ಅಳಿಸಿಹಾಕುವ ಮೊದಲು ಇಡೀ ಜಗತ್ತಿನ ಮೇಲೆ ತಮ್ಮ ಪ್ರಾಬಲ್ಯ ಸ್ಥಾಪಿಸಿದ್ದವು.

ಸಿನಿಮಾ ನೋಡುವ ಮೊದಲು, ಈಗ ಅವಶೇಷಗಳಲ್ಲಿ ಮಾತ್ರ ಕಂಡುಬರುವ ವೈಜ್ಞಾನಿಕ ದೃಷ್ಟಿಕೋನದಿಂದ ಡೈನೋಸಾರ್‌ಗಳ ನೈಜ ಪ್ರಪಂಚದ ಬಗ್ಗೆ ಒಂದಿಷ್ಟು ವಿಷಯ ತಿಳಿಯೋಣ.

ಡೈನೋಸಾರ್‌ಗಳೆಂದರೆ ಯಾವವು?

ಡೈನೋಸಾರ್‌ಗಳು 140 ಮಿಲಿಯನ್‌ ವರ್ಷಗಳ ಕಾಲ ಭೂಮಿಯ ಮೇಲೆ ವಾಸಿಸುತ್ತಿದ್ದ ಸರಿಸೃಪಗಳ ಗುಂಪಾಗಿತ್ತು. ಅವುಗಳು ವಿವಿಧ ಗಾತ್ರ, ಆಕಾರ ಮತ್ತು ಗುಣಲಕ್ಷಣಗಳಲ್ಲಿ ವಿಕಸನಗೊಂಡಿದ್ದವು. ಭೂಮಿಯ ಮೇಲ್ಮೈಯಿಂದ ಅಗೆದ ಪಳೆಯುಳಿಕೆ ದಾಖಲೆಗಳು ಸ್ಪಿನೋಸಾರಸ್‌ನಂತಹ ದೈತ್ಯಾಕಾರದ ಡೈನೋಸಾರ್‌ಗಳು ಇದ್ದವು ಎಂಬುದನ್ನು ತೋರಿಸಿತು. ಅದು 18 ಮೀಟರ್‌ ಎತ್ತರ ಮತ್ತು 4,000 ಕಿಲೋಗ್ರಾಗಳಷ್ಟು ತೂಕವನ್ನು ಮತ್ತು ಅದರ ಹಲ್ಲುಗಳು ಹಮ್ಮಿಂಗ್‌ಬರ್ಡ್‌ ಗಾತ್ರವಾಗಿತ್ತು. ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ಪ್ರಕಾರ, ಹಲ್ಲಿಗಳು ಮತ್ತು ಮೊಸಳೆಗಳಿಗಿಂತ ಭಿನ್ನವಾಗಿ ಡೈನೋಸಾರ್‌ಗಳು ನೇರವಾದ ನಿಲುವು ಹೊಂದಿದ್ದು, ದೇಹಕ್ಕೆ ಲಂಬವಾಗಿರುವ ನೇರವಾದ ಬೆನ್ನು ಮತ್ತು ಕಾಲುಗಳಿದ್ದವು.

ಸುಮಾರು 251 ಮಿಲಿಯನ್‌ ವರ್ಷಗಳ ಹಿಂದೆ ಭೂಮಿಯ ಮೇಲೆ ಮೊದಲು ಕಾಣಿಸಿಕೊಂಡ ಆರ್ಕೋಸೌರಸ್‌ಗಳು ಈ ಪ್ರಭೇದಿಂದ ಬಂದವುಗಳು. ಇದು ಇತರ ಸರಿಸೃಪಗಳಂತೆ ಮೊಟ್ಟೆಗಳನ್ನು ಇಡುತ್ತವೆ. ಇದರ ಮುಖದ ರಚನೆ ಸಂಪೂರ್ಣವಾಗಿ ವಿಭಿನ್ನವಾಗಿತ್ತು. ನ್ಯಾಚುರಲ್‌ ಹಿಸ್ಟರಿ ಮ್ಯೂಸಿಯಂ ತನ್ನ ವರದಿಯಲ್ಲಿ ‘ಡೈನೋಸಾರ್‌ಗಳ ಕಣ್ಣಿನ ಹಿಂದೆ ಎರಡು ರಂದ್ರಗಳನ್ನು ಹೊಂದಿದ್ದವು. ದೊಡ್ಡ ಬಲವಾದ ದವಡೆಯ ದವಡೆಯ ಸ್ನಾಯುಗಳು ನೇರವಾಗಿ ತಲೆಬುರುಡೆಯ ಮೇಲ್ಭಾಗಕ್ಕೆ ಜೋಡಿಸಲು ರಂದ್ರಗಳ ಮೂಲಕ ಹಾದು ಹೋಗಿದ್ದವು. ಇದರ ಪರಿಣಾಮವಾಗಿ ದವಡೆಗಳು ಅಗಲವಾಗಿ ತೆರೆಯಲು ಮತ್ತು ಹೆಚ್ಚು ಹೆಚ್ಚು ಬಲದಿಂದ ಹಿಡಿತ ಸಾಧಿಸಲು ಸಾಧ್ಯವಾಗುತ್ತಿತ್ತು‘ ಎಂದು ಹೇಳಿದೆ.

ಡೈನೋಸಾರ್‌ಗಳ ಅವನತಿ :

ಸುಮಾರು 65 ಮಿಲಿಯನ್‌ ವರ್ಷಗಳ ಹಿಂದೆ ನಡೆದ ದುರಂತ ಘಟನೆಯಲ್ಲಿ ಈ ಬೃಹತ್‌ ಜಾತಿ ಗೃಹದಿಂದ ನಾಶವಾಯಿತು. ಒಂದು ಬೃಹತ್‌ ಕ್ಷುದ್ರಗೃಹವು ಭೂಮಿಗೆ ಅಪ್ಪಳಿಸಿತು, ಇದು ಅತ್ಯಂತ ಕ್ಲಿಷ್ಟಕರ ವಾತಾವರಣವನ್ನು ಸೃಷ್ಟಿಸಿತು ಇದು ಬೃಹತ್‌ ಜೀವಿಗಳ ಅಳಿವಿಗೆ ಕಾರಣವಾಯಿತು.

ಇದನ್ನೂ ಓದಿ : charlie 777 movie review : ಶ್ವಾನಪ್ರಿಯರ ಹೃದಯ ತಟ್ಟಿದ 777 ಚಾರ್ಲಿ : ಇಲ್ಲಿದೆ ಸಿನಿಮಾ ವಿಮರ್ಷೆ

ಇದನ್ನೂ ಓದಿ : Free Logo Creation: ಫ್ರೀಯಾಗಿ ಲೋಗೋ ಕ್ರಿಯೇಟ್ ಮಾಡುವುದು ಹೇಗೆ?

(Jurassic World Dominion dinosaurs era, extinction and interesting facts)

Comments are closed.