EK Love Yaa Rana:”ಏಕ್‌ ಲವ್‌ ಯಾ” ಸಿನಿಮಾ ನಂತರ ನಟಿ ರಕ್ಷಿತಾ ಸಹೋದರ ರಾಣಾರವರ ಮುಂದಿನ ಸಿನಿಮಾದ ಅಪ್ಡೇಟ್

‘ಏಕ್ ಲವ್ ಯಾ’ (EK Love Yaa Rana)ಮೂಲಕ ಸ್ಯಾಂಡಲ್ ವುಡ್ ಅಂಗಳಕ್ಕೆ ಗ್ರ್ಯಾಂಡ್ ಎಂಟ್ರಿ ಕೊಟ್ಟ ನಟಿ ರಕ್ಷಿತಾ ಸಹೋದರ ರಾಣಾ ಮೊದಲ ಸಿನಿಮಾದಲ್ಲೇ ಭರವಸೆ ಹುಟ್ಟು ಹಾಕಿದ್ದು ಗೊತ್ತೇ ಇದೆ. ಪ್ರೇಮ್ ನಿರ್ದೇಶನದಲ್ಲಿ ಮೂಡಿ ಬಂದ “ಏಕ್‌ ಲವ್‌ ಯಾ” ಸಿನಿಮಾದ ಲವ್ ಕಹಾನಿಗೆ ಪ್ರೇಕ್ಷಕರಿಂದ ಬಹಳಷ್ಟು ಮೆಚ್ಚುಗೆ ಹರಿದು ಬಂದಿದೆ. ಜೊತೆಗೆ ರಾಣಾ ನಟನೆಯನ್ನು ಮೆಚ್ಚಿ ಸಿನಿಪ್ರೇಕ್ಷಕರು ಕೊಂಡಾಡಿದ್ದಾರೆ. ನಿರ್ದೇಶಕ ಪ್ರೇಮ್ ಕುಲುಮೆಯಲ್ಲಿ ಪಳಗಿರೋ ರಾಣಾ ಚಂದನವನಕ್ಕೆ ಭರವಸೆಯನ್ನು ಹುಟ್ಟಿಸಿದ ನಟನಾಗೋ ಸಕಲ ಲಕ್ಷಣಗಳನ್ನು ಹೊಂದಿದ್ದಾರೆ ಅನ್ನೋದ್ರಲ್ಲಿ ಎರಡು ಮಾತಿಲ್ಲ.

(EK Love Yaa Rana)ಅನುಭವಿ ಕಲಾವಿದನಂತೆ ಮೊದಲ ಸಿನಿಮಾದಲ್ಲೇ ಮಿಂಚಿ ಚಿತ್ರರಸಿಕರ ಮನಗೆದ್ದ ರಾಣಾ ಈಗೇನು ಮಾಡ್ತಿದ್ದಾರೆ.? ಮುಂದಿನ ಸಿನಿಮಾ ಯಾವ್ದು..? ಯಾರ ನಿರ್ದೇಶನದಲ್ಲಿ ರಾಣಾ ಮುಂದಿನ ಸಿನಿಮಾ ಮೂಡಿಬರಲಿದೆ ಎಂಬ ಹತ್ತು ಹಲವು ಪ್ರಶ್ನೆಗಳು ಮೂಡೋದು ಸಹಜವಾಗಿದೆ. ಅವರ ಅಭಿಮಾನಿಗಳಿಗೆ ಉತ್ತರ ಕೂಡ ಸಿಕ್ಕಿದೆ. ಹೌದು, ರಾಣಾರವರ ಮುಂದಿನ ಸಿನಿಮಾ ನಿರ್ದೇಶನ ಮಾಡ್ತಿರೋದು ಯುವ ನಿರ್ದೇಶಕ. ಅದು ಬೇರೆ ಯಾರೂ ಅಲ್ಲ ನಿರ್ದೇಶಕ ಪ್ರೇಮ್ ನೆಚ್ಚಿನ ಶಿಷ್ಯ. ನಿರ್ದೇಶಕ ಪ್ರೇಮ್ ಜೊತೆಗೆ ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕನಾಗಿ ದುಡಿದ ಅನುಭವ ಇರುವ ವಿಜಯ್ ಈಶ್ವರ್ ಸ್ವತಂತ್ರ ನಿರ್ದೇಶಕನಾಗಿ ಬಡ್ತಿ ಪಡೆಯಲು ಸಜ್ಜಾಗಿದ್ದಾರೆ. ಅವರ ಮೊದಲ ಸಿನಿಮಾವನ್ನು ರಾಣಾಗೆ ಡೈರೆಕ್ಟ್ ಮಾಡುತ್ತಿದ್ದಾರೆ.

ಇದನ್ನೂ ಓದಿ : ಬಹು ನಿರೀಕ್ಷಿತ “ದೂರದರ್ಶನ” ಸಿನಿಮಾದಲ್ಲಿ.. ಪೃಥ್ವಿ ಅಂಬಾರ್ ಜೊತೆ ಉಗ್ರಂ ಮಂಜು ಹೊಸ ಅವತಾರ

ಇದನ್ನೂ ಓದಿ : ತಮ್ಮ ಮಗುವಿನ ಹೆಸರಿನ ಅರ್ಥ ತಿಳಿಸಿದ ನಟಿ ಸೋನಂ ಕಪೂರ್​ ಅಹುಜಾ

ಇದನ್ನೂ ಓದಿ : ವಿಕ್ರಾಂತ್ ರೋಣ…ರಾ..ರಾ..ರಾ..ರಕ್ಕಮ್ಮ ಹಾಡಿಗೆ ಕುಣಿದವರಿಗೆ ಸಿಕ್ತು ಇಪ್ಪತ್ತೈದು ಸಾವಿರ ಬಹುಮಾನ

ಇದನ್ನೂ ಓದಿ : ಕೆಜಿಎಫ್‌ ಖ್ಯಾತಿಯ ಕೃಷ್ಣಾಜಿ ರಾವ್‌ ರವರ ಸಿನಿಮಾ ‘ನ್ಯಾನೋ ನಾರಾಯಣಪ್ಪ’ ಮುಂದಿನ ತಿಂಗಳು ತೆರೆಗೆ

ವಿಜಯ್ ಈಶ್ವರ್ ಮಾಡಿಕೊಂಡ ಸಬ್ಜೆಕ್ಟ್ ರಾಣಾಗೂ ಇಂಪ್ರೆಸ್ ಮಾಡಿದ್ದು, ವಿಜಯ್ ಜೊತೆ ಕೈ ಜೋಡಿಸಲು ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಇನ್ನೂ ಈ ಸಿನಿಮಾದ ಬಗ್ಗೆ ಪ್ರೇಮ್, ರಕ್ಷಿತಾ ಕೂಡ ವಿಜಯ್ ಈಶ್ವರ್ ಹೇಳಿದ ಕಥೆ ಕೇಳಿ ಥ್ರಿಲ್ ಆಗಿದ್ದಾರೆ ಎಂದು ಹೇಳಿದ್ದಾರೆ. ಯಾವ ರೀತಿಯ ಸಬ್ಜೆಕ್ಟ್, ರಾಣಾ ಲುಕ್ ಹೇಗಿರುತ್ತೆ, ಸಿನಿಮಾದ ತಯಾರಿ ಯಾವ ಹಂತದಲ್ಲಿದೆ ಇದೆಲ್ಲದಕ್ಕೂ ಸದ್ಯದಲ್ಲೇ ಉತ್ತರ ಸಿಗಲಿದೆ.

After the movie “Ek Love Ya”, actress Rakshita’s brother Rana’s next movie update

Comments are closed.