permanent solution to flood : ಮಂಗಳೂರಿನಲ್ಲಿ ನೆರೆ ಸಮಸ್ಯೆಗೆ ಶಾಶ್ವತ ಪರಿಹಾರ : ವರದಾನವಾಯ್ತು ರಾಜಕಾಲುವೆ ಸಮೀಪದ ತಡೆಗೋಡೆ

ಮಂಗಳೂರು : permanent solution to flood : ಕರಾವಳಿ ಜಿಲ್ಲೆಗಳಲ್ಲಿ ಕಳೆದೊಂದು ವಾರದಿಂದ ಸುರಿದ ಮಳೆಯು ಭಾರೀ ಪ್ರಮಾಣದಲ್ಲಿ ನಷ್ಟವನ್ನು ತಂದೊಡ್ಡಿದೆ. ದಕ್ಷಿಣ ಕನ್ನಡ ಜಿಲ್ಲೆ ಮಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಬರುವ ರಾಜಕಾಲುವೆ ಸಮೀಪದಲ್ಲಿ ವಾಸವಿರುವ ನಿವಾಸಿಗಳು ಇಷ್ಟುವರ್ಷಗಳಲ್ಲಿ ನೆರೆ ಹಾವಳಿಯಿಂದ ಕಂಗೆಟ್ಟಿದ್ದರು. ಆದರೆ ಈ ವರ್ಷ ಇವರ ಸಂಕಷ್ಟಕ್ಕೆ ಸಣ್ಣ ನೀರಾವರಿ ಇಲಾಖೆಯು ಪರಿಹಾರವನ್ನು ನೀಡಿದೆ. ಸರಿ ಸುಮಾರು 65 ಕೋಟಿ ರೂಪಾಯಿ ಅನುದಾನದಲ್ಲಿ ನಗರದ ಆಯ್ದ ಪ್ರದೇಶಗಳಲ್ಲಿ ತಡೆಗೋಡೆಗಳನ್ನು ನಿರ್ಮಾಣ ಮಾಡಲಾಗಿದ್ದು ಇದರಿಂದ ನೆರೆ ಉಕ್ಕುವ ಭಯ ಇರುವುದಿಲ್ಲ.

ಭಾರೀ ಮಳೆ ಬಂದ ಸಂದರ್ಭಗಳಲ್ಲಿ ರಾಜಕಾಲುವೆಗಳು ತುಂಬಿ ತುಳುಕುವುದರಿಂದ ರಾಜಕಾಲುವೆ ಸಮೀಪದಲ್ಲಿರುವ ಮನೆಗಳಿಗೆ ನೀರು ನುಗ್ಗುತ್ತಿತ್ತು. ಮಳೆ ನಿಂತರೂ ಸಹ ಈ ನೀರು ಸಾಮಾನ್ಯ ಸ್ಥಿತಿಗೆ ಬರಲು ವಾರಗಳೇ ಬೇಕಾಗುತ್ತಿತ್ತು. ಅಲ್ಲದೇ ಇಲ್ಲಿ ಸಮೀಪದ ಮನೆಗಳು ಕೂಡ ನಾಶವಾಗುತ್ತಿದ್ದವು ಅಥವಾ ಹಾನಿಗೊಳಗಾಗುತ್ತಿದ್ದವು. ಆದರೆ ಇದೀಗ ನಗರದ ಸಣ್ಣ ನೀರಾವರಿ ಇಲಾಖೆಯ ಮಾಸ್ಟರ್​ ಪ್ಲಾನ್​ನಿಂದಾಗಿ ನಿರ್ಮಾಣಗೊಂಡಿರುವ ಬೃಹತ್​ ತಡೆಗೋಡೆಗಳು ರಾಜಕಾಲುವೆ ಸಮೀಪದಲ್ಲಿ ವಾಸವಿರುವ ಜನರಿಗೆ ದೊಡ್ಡ ಪ್ರಮಾಣದಲ್ಲಿ ಪರಿಹಾರವನ್ನು ನೀಡಿವೆ.

ಸಣ್ಣ ನೀರಾವರಿ ಇಲಾಖೆಯು ನಿರ್ಮಿಸಿದ ಬೃಹತ್​ ತಡೆಗೋಡೆಗಳಿಂದಾಗಿ ಕಳೆದೊಂದು ವಾರದಲ್ಲಿ ಮಂಗಳೂರು ನಗರದಾದ್ಯಂತ ಭಾರೀ ಮಳೆ ಉಂಟಾಗಿ ಪ್ರವಾಹ ಪರಿಸ್ಥಿತಿ ನಿರ್ಮಾಣವಾದರೂ ಸಹ ರಾಜಕಾಲುವೆ ಬಳಿ ವಾಸವಿರುವ ಮನೆಗಳ ಬಳಿ ನೀರು ಉಕ್ಕಿ ಬಂದಿಲ್ಲ. ತಡೆಗೋಡೆಗಳು ನೀರು ಉಕ್ಕುವುದನ್ನು ತಡೆ ಹಿಡಿದ ಪರಿಣಾಮ ಇಲ್ಲಿನ ಮನೆಗಳು ಈ ಬಾರಿ ಭಾರೀ ಮಳೆ ನಡುವೆಯೂ ಸುರಕ್ಷಿತವಾಗಿವೆ.

ಇದನ್ನು ಓದಿ : Actor Sudeep ವಿರುದ್ಧ ಅವಹೇಳನಕಾರಿ ಮಾತು : ಸೈಬರ್ ಕ್ರೈಂ ಮತ್ತು ಆಯುಕ್ತರಿಗೆ ಭಾಮಾ ಹರೀಶ್ ದೂರು

ಇದನ್ನೂ ಓದಿ : Mekedatu DPR debate : ಮೇಕೆದಾಟು ಡಿಪಿಆರ್ ಚರ್ಚೆಗೂ ಅಡ್ಡಿ : ಮತ್ತೆ ಸುಪ್ರೀಂ ಮೆಟ್ಟಿಲೇರಿದ ತಮಿಳುನಾಡು

ಇದನ್ನೂ ಓದಿ : Insurance Payment Restrictions: ವಾಹನ ಚಾಲನೆಯಲ್ಲಿ ಅಪಘಾತ ಸಂಭವಿಸಿದರೆ ವಿಮಾ ಪಾವತಿ ನಿಬಂಧನೆಗಳು

ಇದನ್ನೂ ಓದಿ : oldest royal Bengal tiger : ದೇಶ ಕಂಡ ಅತ್ಯಂತ ಹಿರಿಯ ಹುಲಿಗಳಲ್ಲೊಂದಾದ ‘ರಾಜಾ’ ಇನಿಲ್ಲ

permanent solution to flood problem in Mangalore

Comments are closed.