Ajay Rao : ಮತ್ತೆ ನಿರ್ಮಾಣ ಸಾಹಸಕ್ಕಿಳಿದ ಅಜಯ್ ರಾವ್ – ‘ಕಟಿಂಗ್ ಶಾಪ್’ ನಿರ್ದೇಶಕನ ಚಿತ್ರಕ್ಕೆ ಗ್ರೀನ್ ಸಿಗ್ನಲ್

ಚಂದನವನದ ಪ್ರತಿಭಾವಂತ ನಟ ಅಜಯ್ ರಾವ್ (Ajay Rao) ಹೊಸದೊಂದು ಸಿನಿಮಾಗೆ ಸಜ್ಜಾಗುತ್ತಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ತಮ್ಮ ನಟನೆಯ ಮೂಲಕ ಅವರದೇ ಆದ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಇವರು ಪ್ರೇಮ್‌ ನಿರ್ದೇಶನದ ಎಕ್ಸ್‌ಕ್ಯೂಸ್‌ ಮಿ ಸಿನಿಮಾದ ಮೂಲಕ ಕನ್ನಡ ಚಿತ್ರರಂಗಕ್ಕೆ ಪ್ರವೇಶಿಸುತ್ತಾರೆ. ತಮ್ಮ ಮೊದಲ ಚಿತ್ರದಲ್ಲೇ ಅತ್ಯುತ್ತಮ ನಟನೆಯನ್ನು ಪ್ರದರ್ಶಿಸಿದ್ದಾರೆ. ಇವರು ಕೃಷ್ಣನ್‌ ಲವ್‌ ಸ್ಟೋರಿ, ಕೃಷ್ಣನ್‌ ಮ್ಯಾರೇಜ್‌ ಸ್ಟೋರಿ, ಕೃಷ್ಣ ಲೀಲಾ ಸೇರಿದಂತೆ ಹಲವಾರು ಸಿನಿಮಾದಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ.

ಕೇವಲ ನಟನೇ ಮಾತ್ರವಲ್ಲದೇ ಒಂದಷ್ಟು ಸಿನಿಮಾದಲ್ಲಿ ನಿರ್ಮಾಪಕರಾಗಿ ಕೂಡ ಕೆಲಸ ಮಾಡಿದ್ದಾರೆ. ಪವನ್ ಭಟ್ ನಿರ್ದೇಶನದ ಚಿತ್ರದಲ್ಲಿ ನಾಯಕ ನಟರಾಗಿ ನಟಿಸುದರ ಜೊತೆಯಲ್ಲಿ ಈ ಚಿತ್ರದಲ್ಲಿ ನಿರ್ಮಾಣವನ್ನು ಕೂಡ ಅಜಯ್ ರಾವ್ ಮಾಡುತ್ತಿದ್ದಾರೆ. ಈ ಮೊದಲು ಕೃಷ್ಣ ಲೀಲಾ ಸಿನಿಮಾಕ್ಕೆ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಹಾಗಾಗಿ ಈ ಸಿನಿಮಾದ ಮೂಲಕ ಮತ್ತೊಮ್ಮೆ ನಿರ್ಮಾಣ ಸಾಹಸಕ್ಕೆ ಮುಂದಾಗಿದ್ದಾರೆ ನಟ (Ajay Rao)ಅಜಯ್ ರಾವ್.

ಇದನ್ನೂ ಓದಿ : ಕಿರೀಟಿ ಸಿನಿಮಾ ಟೈಟಲ್ ಲಾಂಚ್ ಗೆ ಮುಹೂರ್ತ ಫಿಕ್ಸ್- ಸೆಪ್ಟೆಂಬರ್ 29ಕ್ಕೆ ಟೈಟಲ್ ಅನಾವರಣ

ಇದನ್ನೂ ಓದಿ : ರಾಯನ್ ಸರ್ಜಾನೇ ನಮ್ಮ ಮನೆ ಮಗ : ನನಗೆ ಮಗ ಬೇಡ ಎಂದ ಧ್ರುವಸರ್ಜಾ

ಇದನ್ನೂ ಓದಿ : ನಟಿ ದೀಪಿಕಾ ಪಡುಕೋಣೆ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು

ಇದನ್ನೂ ಓದಿ : ಬಿಗ್‌ಬಾಸ್‌ ಸೀಸನ್‌ 9 : ಮೊದಲ ವಾರದಲ್ಲೇ ಸ್ಪರ್ಧಿಗಳ ನಡುವೆ ಜಿದ್ದಾಜಿದ್ದಿ, 12 ಮಂದಿ ನಾಮಿನೇಟ್‌

ಈಗಾಗಲೇ ನಿರ್ದೇಶಕ ಪವನ್ ಭಟ್‌ರವರು ಅಜಯ್‌ ರಾವ್‌ರವರಿಗೆ ಕಥೆಯನ್ನು ಹೇಳಿದ್ದಾರೆ. ಕಥೆಯನ್ನು ಕೇಳಿದ ಅಜಯ್ ರಾವ್ ಬಹಳಷ್ಟು ಇಂಪ್ರೆಸ್ ಆಗಿದ್ದಾರೆ. ಹಾಗಾಗಿ ತಮ್ಮದೇ ಶ್ರೀಕೃಷ್ಣ ಆರ್ಟ್ಸ್ ಅಂಡ್ ಕ್ರಿಯೇಷನ್ಸ್ ಬ್ಯಾನರ್ ನಡಿ ಸಿನಿಮಾ ನಿರ್ಮಾಣ ಮಾಡಲು ಡಿಸೈಡ್ ಮಾಡಿದ್ದಾರೆ. ‘ಕಟಿಂಗ್ ಶಾಪ್’ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಅಂಗಳದಲ್ಲಿ ಡೈರೆಕ್ಟರ್ ಕ್ಯಾಪ್ ತೊಟ್ಟಿರುವ ಪವನ್ ಭಟ್‌ರವರಿಗೆ ಇದು ಎರಡನೇ ಸಿನಿಮಾವಾಗಿದೆ. ಸದಕ್ಕೆ ಸಿನಿಮಾದ ಪ್ರಿ ಪ್ರೊಡಕ್ಷನ್ ಕೆಲಸದಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು ಹೊಸ ಕಲಾವಿದರಿಗಾಗಿ ಹುಡುಕಾಟ ನಡೆಸುತ್ತಿದೆ. ಸದ್ಯದಲ್ಲೇ ಚಿತ್ರತಂಡ ಟೈಟಲ್ ಹಾಗೂ ಚಿತ್ರದ ಬಗೆಗಿನ ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಲಿದೆ.

Green signal for Ajay Rao’s ‘Cutting Shop’ directorial venture again

Comments are closed.