Tata Tiago EV : ಇಂದು ಬಿಡುಗಡೆಯಾದ ಟಾಟಾ ಟಿಯಾಗೊ ಎಲೆಕ್ಟ್ರಿಕಲ್‌ ಕಾರ್‌; ಇದು ಜನಸಾಮಾನ್ಯರ ಕಾರ್‌ ಆಗಬಹುದೇ…

ಎಲೆಕ್ಟ್ರಿಕಲ್‌ ಕಾರು (EV Car) ಗಳಲ್ಲಿ ಟಾಟಾ ನೆಕ್ಸಾನ್‌ ಇವಿ ಮತ್ತು ಟಾಟಾ ಟಿಗೋರ್‌ ಇವಿ ನಂತರ ಬಿಡುಗಡೆಯಾಗುತ್ತಿರುವ ಮೂರನೇ ಕಾರು ಟಾಟಾ ಟಿಯಾಗೊ ಇವಿ (Tata Tiago EV). ಇದು ಭಾರತದಲ್ಲಿ ಮಾರಾಟವಾಗುವ ಅತ್ಯಂತ ಒಳ್ಳೆಯ ಎಲೆಕ್ಟ್ರಿಕಲ್‌ ಕಾರ್‌ ಆಗಬಹುದು ಎಂಬ ನಿರೀಕ್ಷೆಯಿದೆ. ದೇಸೀಯ ಕಾರು ತಯಾರಿಕಾ ಕಂಪನಿ ಟಾಟಾ ಮೋಟಾರ್ಸ್‌ (Tata Motors) ಇಂದು ಭಾರತದಲ್ಲಿ ಟಾಟಾ ಟಿಯಾಗೋ ಇವಿ ಕಾರನ್ನು ಅನಾವರಣಗೊಳಿಸಿದೆ. ಟಾಟಾ ಮೋಟಾರ್ಸ್‌ ಮೊದಲೇ ಹೇಳಿರುವಂತೆ ಹ್ಯಾಚ್‌ಬ್ಯಾಕ್‌ ಇರುವ ಎಲೆಕ್ಟ್ರಿಕ್‌ ವಾಹನ ಇದಾಗಿದೆ. ಟಾಟಾ ಮೋಟಾರ್ಸ್‌ ಇತರ ಎಲೆಕ್ಟ್ರಿಕಲ್‌ ವಾಹನಗಳಿಗಿಂತ ವಿಶಿಷ್ಟವಾಗಿದೆ. ಏಕೆಂದರೆ ಇದು ಭಾರತದಲ್ಲಿ 30 ಲಕ್ಷಗಳ ಒಳಗೆ ಮಾರಾಟವಾಗುವ SUV ಎಲೆಕ್ಟ್ರಿಕಲ್‌ ವಾಹನವಾಗಿದೆ. ಹ್ಯಾಚ್‌ಬ್ಯಾಕ್‌ ಹೊಂದಿರುವ ಟಾಟಾ ಟಿಯಾಗೋ ಹೆಚ್ಚಿನ ಬೆಲೆಯನ್ನೇ ಪಡೆಯಬಹುದು. ದೈನಂದಿನ ಪ್ರಯಾಣಕ್ಕಾಗಿ ಕಾರನ್ನು ಹುಡುಕುತ್ತಿರುವವರಿಗೆ ಇದು ಪರ್ಫೆಕ್ಟ್‌ ಆಗಿದೆ.

ಟಾಟಾ ಮೋಟರ್ಸ್‌ನ ಹೊಸ ಎಲೆಕ್ಟ್ರಿಕಲ್‌ ಕಾರ್‌ ಟಾಟಾ ಟಿಯಾಗೊ ಜಿಪ್ಟ್ರಾನ್‌ ತಂತ್ರಜ್ಞಾನ ಪಡೆದುಕೊಂಡಿದೆ. ಆಪಲ್‌ ಕಾರ್‌ಪ್ಲೇ, ಆಂಡ್ರಾಯ್ಡ್‌ ಆಟೋ ಮತ್ತು ಇತರ ಸಂಪರ್ಕ ತಂತ್ರಜ್ಞಾನಗೊಳೊಂದಿಗೆ 7 ಇಂಚಿನ ಟಚ್‌ ಸ್ಕ್ರೀನ್‌ ಇನ್ಪೋಟೈನ್‌ಮೆಂಟ್‌ ಸಿಸ್ಟಮ್‌ ಹೊಂದಿದೆ. ಇದರಲ್ಲಿ ಮಲ್ಟಿ–ಮೋಡ್‌ ಪುನರುತ್ಪಾದಕ ಬ್ರೆಕಿಂಗ್‌ ಸಿಸ್ಟಿಮ್‌ ಇದೆ. ಇದರ ಡ್ರೈವ್‌ ಟ್ರೈನ್‌ ಟಿಗೊರ್‌ ಇವಿ ಯಂತೆಯೇ ಇರುತ್ತದೆ. ಇದು 55 kW ಮೋಟಾರ್ ಮತ್ತು 26 kWh ಬ್ಯಾಟರಿ ಪ್ಯಾಕ್ ಅನ್ನು ಬಳಸಿಕೊಳ್ಳುತ್ತದೆ. ಪೂರ್ಣ ಚಾರ್ಜ್‌ನಲ್ಲಿ ಇದು ಅಂದಾಜು 300 ಕಿಲೋಮೀಟರ್‌ ವ್ಯಾಪ್ತಿಯನ್ನು ಕ್ರಮಿಸಬಹುದು ಎನ್ನಲಾಗುತ್ತಿದೆ.

ಟಾಟಾ ಟಿಯಾಗೊ ಇವಿ ಕಾರ್‌ನ ಎಕ್ಸ್‌ ಶೋರೂಂ ಬೆಲೆಯು ಸುಮಾರು 8.49 ಲಕ್ಷ ರೂಪಾಯಿಂದ ಪ್ರಾರಂಭವಾಗಲಿದೆ. ಕೈಗೆಟಕುವ ಬೆಲೆಯಲ್ಲಿರುವ ಮತ್ತು ಎಲೆಕ್ಟ್ರಿಕಲ್‌ ಹ್ಯಾಚ್‌ಬ್ಯಾಕ್‌ ಹೊಂದಿರುವ ಟಾಟಾ ಟಿಯಾಗೊ ಎವಿ ಗೆ ಸದ್ಯ ಯಾವುದೇ ನೇರ ಪ್ರತಿಸ್ಪರ್ಧಿಗಳಿಲ್ಲ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂ ಓದಿ : Kawasaki W175 : ಭಾರತದಲ್ಲಿ ಬಿಡುಗಡೆಯಾದ ಕವಾಸಕಿ W175 ರೆಟ್ರೊ ಮೋಟಾರ್‌ಸೈಕಲ್‌

ಇದನ್ನೂ ಓದಿ : IRCTC Vrat Thali : ಉಪವಾಸ ಮಾಡುವ ಭಕ್ತರಿಗೆ ಶುಭ ಸಮಾಚಾರ; ನವರಾತ್ರಿಗೆ ರೈಲುಗಳಲ್ಲಿ ವೃತ ಥಾಲಿಗಳು ಲಭ್ಯ

(Tata Tiago EV Launched in India. It may be cover 300 km on a single charge)

Comments are closed.