Alia Bhatt : ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಆಲಿಯಾ ಭಟ್​,ರಣಬೀರ್​ ಕಪೂರ್​ ದಂಪತಿ

Alia Bhatt : ಬಾಲಿವುಡ್​ ನಟ ರಣಬೀರ್​ ಕಪೂರ್​ ಹಾಗೂ ನಟಿ ಆಲಿಯಾ ಭಟ್​ ದಂಪತಿ ಅಭಿಮಾನಿಗಳಿಗೆ ಗುಡ್​ ನ್ಯೂಸ್​ ನೀಡಿದ್ದಾರೆ. ಇನ್​ಸ್ಟಾಗ್ರಾಂನಲ್ಲಿ ರಣಬೀರ್​ ಕಪೂರ್​ ಜೊತೆಯಲ್ಲಿ ಇರುವ ಆಸ್ಪತ್ರೆಯ ಫೋಟೋವನ್ನು ಶೇರ್​ ಮಾಡಿರುವ ನಟಿ ಆಲಿಯಾ ಭಟ್​ ತಾವು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂಬ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಮತ್ತೊಂದು ಫೋಟೋದಲ್ಲಿ ನಟಿ ಆಲಿಯಾ ಭಟ್​ ಎರಡು ಸಿಂಹಗಳು ಮರಿಯೊಂದಿಗೆ ಆಡುತ್ತಿರುವ ಫೋಟೋವನ್ನು ಶೇರ್​ ಮಾಡಿದ್ದಾರೆ. ಈ ಫೋಟೋಗಳಿಗೆ ನಟಿ ಆಲಿಯಾ ಭಟ್​ ನಮ್ಮ ಮಗು ಶೀಘ್ರದಲ್ಲಿಯೇ ಆಗಮಿಸುತ್ತಿದೆ ಎಂದು ಶೀರ್ಷಿಕೆ ನೀಡಿದ್ದಾರೆ.


ಆಲಿಯಾ ಭಟ್​ ತಮ್ಮ ಪ್ರೆಗ್ನೆನ್ಸಿ ಅನೌನ್ಸ್​ ಮಾಡುತ್ತಿದ್ದಂತೆಯೇ ಬಾಲಿವುಡ್​ನ ಸಾಕಷ್ಟು ಸೆಲೆಬ್ರಿಟಿಗಳು ಹಾಗೂ ಅಭಿಮಾನಿಗಳಿಂದ ಶುಭಾಶಯಗಳ ಸಂದೇಶ ಹರಿದು ಬಂದಿದೆ. ರಣಬೀರ್​ ಕಪೂರ್​​ ಸಹೋದರಿ ರಿಧಿಮಾ ಕಪೂರ್​ ಕೂಡ ಈ ಸಿಹಿ ಸುದ್ದಿಯನ್ನು ಇನ್​ಸ್ಟಾದಲ್ಲಿ ಹಂಚಿಕೊಂಡಿದ್ದು ನನ್ನ ಮಕ್ಕಳಿಗೆ ಮಗುವಾಗುತ್ತಿದೆ ಎಂದು ಬರೆದುಕೊಂಡಿದ್ದಾರೆ.


ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸಿದ್ದ ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಇದೇ ವರ್ಷ ಏಪ್ರಿಲ್​ 14ರಂದು ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದರು. ಮುಂಬೈನಲ್ಲಿರುವ ರಣಬೀರ್​ ಕಪೂರ್​ ನಿವಾಸದಲ್ಲಿ ಈ ಜೋಡಿ ಕುಟುಂಬಸ್ಥರು ಹಾಗೂ ಆಪ್ತರ ಸಮ್ಮುಖದಲ್ಲಿ ದಾಂಪತ್ಯದ ಬೆಸುಗೆ ಬೆಸೆದಿತ್ತು. ಕೆಲವು ದಿನಗಳ ಹಿಂದೆಯಷ್ಟೇ ವೈವಾಹಿಕ ಜೀವನದ ಬಗ್ಗೆ ಮಾತನಾಡಿದ್ದ ನಟ ರಣಬೀರ್​ ಕಪೂರ್​. ಈ ವರ್ಷ ನನ್ನ ಪಾಲಿಗೆ ಶ್ರೇಷ್ಠವಾದ ವರ್ಷವಾಗಿದೆ , ನನ್ನ ಜೀವನದಲ್ಲಿ ಅತ್ಯಂತ ಸುಂದರವಾದ ಕ್ಷಣವು ಘಟಿಸಿದೆ ಎಂದು ಹೇಳಿದ್ದರು.


ಮದುವೆ ಎಂದರೆ 50 ವರ್ಷಗಳ ಕಾಲ ಅಥವಾ ನಾವು ಸಾಯುವವರೆ ಅನ್ನ ಸಾಂಬಾರು ತಿಂದಂತೆ ಎಂದು ನಾನೇ ಸಿನಿಮಾದ ಡೈಲಾಗ್​​ ಒಂದನ್ನು ಹೇಳಿದ್ದೆ. ಜೀವನದಲ್ಲಿ ಕಬಾಬ್​, ಹಕ್ಕಾ ನ್ಯೂಡಲ್ಸ್​ನಂತಹ ಫ್ಲೇವರ್ಸ್​ ಇರಬೇಕು ಎಂದು ನಾನೇ ಹೇಳಿದ್ದೆ. ಆದರೆ ನನ್ನ ಜೀವನದ ಮದುವೆ ಅನುಭವವನ್ನು ಹೇಳಬೇಕು ಅಂದರೆ ಅನ್ನ ಸಾಂಬಾರಿಗಿಂತ ಒಳ್ಳೆಯ ಅಡುಗೆ ಇನ್ನೊಂದಿಲ್ಲ. ನನ್ನ ಪತ್ನಿ ಆಲಿಯಾ ಯಾವತ್ತಿಗೂ ಬೆಸ್ಟ್​ .ನನ್ನ ಜೀವನವೆಂಬ ಅನ್ನ ಸಾಂಬಾರಿನಲ್ಲಿ ಎಲ್ಲ ರೀತಿಯ ಮಸಾಲೆಗಳೂ ಇವೆ.ಇದಕ್ಕಿಂತ ಬೆಸ್ಟ್​ ಸಂಗಾತಿ ನನಗೆ ಸಿಗಲಿಕ್ಕಿಲ್ಲ ಎಂದು ಹೇಳಿದ್ದರು.


ರಣಬೀರ್​ ಕಪೂರ್​ ಹಾಗೂ ಆಲಿಯಾ ಭಟ್​ ಜೊತೆಯಾಗಿ ನಟಿಸಿರುವ ಬ್ರಹ್ಮಾಸ್ತ್ರ ಸಿನಿಮಾ ಇದೇ ಸೆಪ್ಟೆಂಬರ್​​ನಲ್ಲಿ ತೆರೆ ಕಾಣಲಿದೆ. ಸಧ್ಯ ಆಲಿಯಾ ಕೈಯಲ್ಲಿ ಡಾರ್ಲಿಂಗ್ಸ್​ ಹಾಗೂ ರಾಕಿ ಔರ್​​​ ರಾಣಿ ಕಿ ಪ್ರೇಮ್​ ಕಹಾನಿ ಸೇರಿದಂತೆ ಹಲವಾರು ಸಿನಿಮಾಗಳಿವೆ.

ಇದನ್ನು ಓದಿ : ಚಿನ್ನಸ್ವಾಮಿ ಮೈದಾನದಲ್ಲೇ ಸೋತಿದ್ದ ನಾಯಕ, ಅದೇ ಮೈದಾನದಲ್ಲಿ ರಣಜಿ ಟ್ರೋಫಿ ಎತ್ತಿ ಹಿಡಿದ !

ಇದನ್ನೂ ಓದಿ : Kapil Dev Gift Sudeep : ಕಿಚ್ಚನಿಗೆ ಸ್ಪೆಷಲ್ ಗಿಫ್ಟ್ ಕೊಟ್ಟ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್.. ಗಿಫ್ಟ್ ನೋಡಿ ಸುದೀಪ್ ಕ್ಲೀನ್ ಬೌಲ್ಡ್

Alia Bhatt, Ranbir Kapoor announce pregnancy, share photo from the hospital: ‘Baby coming soon’

Comments are closed.