ಎಲ್ಲ ರಾತ್ರಿಗಳು ಶನಿವಾರದಂತೆ ತೋರುತ್ತವೆ…! ಮೇಘನಾ ರಾಜ್ ಮಾತಿನ ಅರ್ಥವೇನು ಗೊತ್ತಾ…!!

ಮಾತೃತ್ವ ಅನ್ನೋದು ಸವಿ ದಷ್ಟು ಸವಿ ಎನಿಸುವ ಸಕ್ಕರೆ ಇದ್ದಂತೆ ಈ ಮಾತು ಇದೀಗ ನಟಿ ಮೇಘನಾ ರಾಜ್ ಗೂ ನಿಜ ಎನ್ನಿಸಿದ್ದು ಮಗುವಿನ ಜೊತೆಗಿನ ಪೋಟೋ ಹಂಚಿಕೊಂಡ ಮೇಘನಾ ರಾಜ್ ತಾಯ್ತನದ ಸಂತೋಷವನ್ನು ಹಂಚಿಕೊಂಡಿದ್ದಾರೆ.

ಈಗ ಪ್ರತಿ ದಿನವೂ ಭಾನುವಾರದಂತೆ ಹಾಗೂ ಪ್ರತಿ ರಾತ್ರಿಯೂ ಶನಿವಾರ ರಾತ್ರಿಯಂತೆ ತೋರುತ್ತದೆ ಎನ್ನುತ್ತ ಮಾತೃತ್ವದ ಚಿಕ್ಕ ಚಿಕ್ಕ ಸಂತೋಷ ಹಾಗೂ ಕೆಲವು ರಹಸ್ಯಗಳನ್ನು ಹಂಚಿಕೊಳ್ಳು ತ್ತೇನೆ ಎಂದಿದ್ದಾರೆ. ಮಗನೊಂದಿಗೆ ಇರುವ ಪೋಟೋವನ್ನು ಹಂಚಿಕೊಂಡ ಮೇಘನಾರಾಜ್, ತಮ್ಮ ಖುಷಿಯನ್ನು ಶೇರ್ ಮಾಡಿದ್ದಾರೆ.

ಸಹಜವಾಗಿಯೇ ಪುಟ್ಟ ಮಕ್ಕಳು ರಾತ್ರಿ ನಿದ್ದೆ ಮಾಡೋದು ಕಡಿಮೆ. ಜ್ಯೂನಿಯರ್ ಚಿರು ಕೂಡ ಇದೇ ರೀತಿ ರಾತ್ರಿ ನಿದ್ದೆ ಮಾಡದೇ ಹಟ ಮಾಡುತ್ತಾನೆ ಎನ್ನಲಾಗಿದೆ. ಹೀಗಾಗೇ ಮೇಘನಾ ರಾಜ್ ಎಲ್ಲ ರಾತ್ರಿಗಳು ಶನಿವಾರ ರಾತ್ರಿಯಂತೆ ಕಾಣುತ್ತಿವೆ ಎಂದಿದ್ದಾರೆ.

ಮೇಘನಾ ರಾಜ್ ಸದಾ ಮಗನ ವಿಡಿಯೋ-ಪೋಟೋ ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚಿಗಷ್ಟೇ ಜ್ಯೂನಿಯರ್ ಚಿರು ಅಪ್ಪನ ರಾಜಾಮಾರ್ತಾಂಡ್ ಸಿನಿಮಾ ಟ್ರೇಲರ್ ಲಾಂಚ್ ಮಾಡಿ ಸುದ್ದಿಯಾಗಿದ್ದರು.

ಈಗ ಮಗನ ಜೊತೆಗಿನ ಸ್ಪೆಶಲ್ ಪೋಟೋ ಹಂಚಿಕೊಂಡಿದ್ದಾರೆ. ಅಮ್ಮ ಮಗನ ಕ್ಯೂಟ್ ಪೋಟೋ ನೋಡಿದ ಅಭಿಮಾನಿಗಳು ನೂರ್ಕಾಲ ಹೀಗೆ ಸುಖವಾಗಿರಿ ಅಂತ ಹಾರೈಸುತ್ತಿದ್ದಾರೆ. ಇನ್ನು ಕೆಲವರು ಜ್ಯೂನಿಯರ್ ಚಿರು ಪೋಟೋ ನೋಡಿ ಸೇಮ್ ಟೂ ಸೇಮ್ ಚಿರಂಜೀವಿ ಸರ್ಜಾ ನೇ ಎಂದು ಕಮೆಂಟ್ ಮಾಡಿ ಶುಭ ಹಾರೈಸುತ್ತಿದ್ದಾರೆ.

Comments are closed.