amazon prime KGF 2 : ಕೆಜಿಎಫ್-2 ನೋಡೋಕೆ 199 ರೂಪಾಯಿ : ಅಮೇಜಾನ್ ಪ್ರೈಂ ವಿರುದ್ಧ ಸುಲಿಗೆ ಆರೋಪ

ಸದ್ಯ ಚಿತ್ರರಂಗದಲ್ಲಿ ಕೆಜಿಎಫ್-2 ಸಿನಿಮಾ ದಾಖಲೆಗಳ‌ ಮೇಲೆ ದಾಖಲೆ‌ ಬರೆಯುತ್ತ ಮುನ್ನಗ್ಗುತ್ತಿದೆ. ಇನ್ನೂ ಥಿಯೇಟರ್ ಗಳಲ್ಲೇ ಮೋಡಿ‌ ಮಾಡ್ತಿರೋ ಸಿನಿಮಾ ಈಗಾಗಲೇ ಓಟಿಟಿ ವೇದಿಕೆ ಅಮೇಜಾನ್ ಪ್ರೈಂನಲ್ಲೂ (amazon prime KGF 2) ಲಭ್ಯವಿದೆ. ಹಾಗಂತ ಕೆಜಿಎಫ್ 2 ಸಿನಿಮಾನ ನಾನು ಮನೆಯಲ್ಲೇ ಕೂತು ಬೇಕಷ್ಟು ಸಲ ನೋಡಿ ಎಂಜಾಯ್ ಮಾಡೋಣ ಅಂತ ನೀವಂದುಕೊಂಡಿದ್ದರೇ, ಅದಕ್ಕೂ ಅಮೇಜಾನ್ ಪ್ರೈಂ ಮತ್ತೊಂದು ಟ್ವಿಸ್ಟ್ ನೀಡಿದೆ.

ಹೌದು, ಈಗಾಗಲೇ ಸಾವಿರ ಕೋಟಿ ಕ್ಲಬ್ ಸೇರಿರುವ ಕೆಜಿಎಫ್ 2 ಸಿನಿಮಾ ಈಗ ಓಟಿಟಿ ಫ್ಲ್ಯಾಟ್ ಫಾರಂ ನಲ್ಲಿ ರಿಲೀಸ್ ಆಗಿದೆ. ಆದರೆ ಕೆಜಿಎಫ್ 2 ಸಿನಿಮಾನ ಓಟಿಟಿಯಲ್ಲಿ ನೋಡೋಕೆ ನಿಮಗೆ ಕೇವಲ ಅಮೇಜಾನ್ ಪ್ರೈಂ (amazon prime ) ಸದಸ್ಯತ್ವ ಇದ್ದರೇ ಸಾಲೋದಿಲ್ಲ. ಬದಲಾಗಿ ಅಮೇಜಾನ್ ಪ್ರೈಂ ಜಾರಿಗೆ ತಂದಿರೋ ಮೂವಿ ರೆಂಟಲ್ ಎನ್ನುವ ಯೋಜನೆಯನ್ನು ನೀವು ಹೊಂದಿರಬೇಕು. ಈ ಮೂವಿ ರೆಂಟಲ್ ನಲ್ಲಿ 199 ರೂಪಾಯಿ ಕಟ್ಟಿ ಸದಸ್ಯತ್ವ ಪಡೆಯಬೇಕು. ಹಾಗಿದ್ದರೇ ಮಾತ್ರ ನೀವು ಕೆಜಿಎಫ್ 2 ಸಿನಿಮಾವನ್ನು ನೀವು ವೀಕ್ಷಣೆ ಮಾಡಬಹುದಾಗಿದೆ.

ಈ ಯೋಜನೆಯಡಿ ವೀಕ್ಷಕರು ಕೆಜಿಎಫ್ 2 (KGF 2) ಸಿನಿಮಾವನ್ನು ಬಾಡಿಗೆಗೆ ಪಡೆಯಬಹುದಾಗಿದೆ.ಅಮೇಜಾನ್ ಪ್ರೈಮ್ ವೀಡಿಯೋ ಅಪ್ಲಿಕೇಶನ್ ಮೂಲಕ ಬಾಡಿಗೆ ಪಡೆಯಬಹುದಾಗಿದೆ. ನಿಮ್ಮ ಪೋನ್, ಟ್ಯಾಬ್, ಸ್ಮಾರ್ಟ್ ಟಿವಿ ಮೂಲಕ ಅಮೇಜಾನ್ ಪ್ರೈಂ ಅಪ್ಲಿಕೇಶನ್ ನಲ್ಲಿ ಮೂವಿ ರೆಂಟ್ ಆಫ್ಸನ್ ಮೂಲಕ ಸಿನಿಮಾವನ್ನು ಬಾಡಿಗೆಗೆ ಪಡೆಯಬಹುದಾಗಿದೆ. ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಯ ಸಿನಿಮಾ‌ ನೋಡಬಹುದಾಗಿದೆ. ಇನ್ನೂ ಥಿಯೇಟರ್ ನಲ್ಲಿ ಕೆಜಿಎಫ್ 2 ಸಿನಿಮಾ ನೋಡದೇ ಅಮೇಜಾಮ್ ಪ್ರೈಂನಲ್ಲಿ ಸಿನಿಮಾ ನೋಡೋಕೆ ಕಾಯ್ತಿದ್ದ ಜನರಿಗೆ ಈ ಮೂವಿರೆಂಟಲ್ ಯೋಜನೆಯಿಂದ ಅಸಮಧಾನ ಉಂಟಾಗಿದ್ದು, ಇದು ಅಮೇಜಾನ್ ಪ್ರೈಂ ಸುಲಿಗೆ ಎಂದು ಪ್ರೇಕ್ಷಕರು ಆರೋಪಿಸಿದ್ದಾರೆ.

ಈ ವಿಚಾರ ಈಗ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡಿದೆ. ಇನ್ನು ಕೆಜಿಎಫ್ 2 (KGF 2) ಗಳಿಕೆ ಹೊಸ ದಾಖಲೆಗಳನ್ನು ಬರೆಯುತ್ತಲೇ ಇದೆ.‌ಕೇವಲ 31 ದಿನಗಳಲ್ಲಿ ವಿಶ್ವದಾದ್ಯಂತ 1191 ಕೋಟಿ ರೂಪಾಯಿ ಗಳಿಸಿದೆ. ಇನ್ನೊಂದು ವಾರದಲ್ಲಿ ಈ ಸಿನಿಮಾ 1200 ಕೋಟಿ ಗಡಿ ದಾಟಲಿದೆ. ಇನ್ನೂ ಈಗಾಗಲೇ ಕೆಜಿಎಫ್‌ 3 ಶೂಟಿಂಗ್ ಹಾಗೂ ರಿಲೀಸ್ ಡೇಟ್ ಬಗ್ಗೆ ನಾನಾ ಸುದ್ದಿಗಳು ಹರಡಲಾರಂಭಿಸಿದ್ದು, ಸಪ್ಟೆಂಬರ್ ವೇಳೆಗೆ ಸಿನಿಮಾ ಶೂಟಿಂಗ್ ಆರಂಭವಾಗಲಿದೆ ಎನ್ನಲಾಗ್ತಿದೆ.

ಇದನ್ನೂ ಓದಿ : ಬ್ಯಾಕ್​ಲೆಸ್​ ಟಾಪ್​ನಲ್ಲಿ ಗಮನ ಸೆಳೆದ ರಂಗಿತರಂಗ ಖ್ಯಾತಿಯ ರಾಧಿಕಾ ಚೇತನ್​

ಇದನ್ನೂ ಓದಿ : ಸ್ನೇಹಿತೆಯ ಮದುವೆಯಲ್ಲಿ ರಶ್ಮಿಕಾ ಮಿಂಚಿಂಗ್​​ : ಕೊಡವರ ಶೈಲಿಯ ಸೀರೆ ಧರಿಸಿದ ಕಿರಿಕ್​ ಬೆಡಗಿ

Amazon Prime KGF-2 watching 199 Rs Subscription charge, amazon accused of extortion against

Comments are closed.