Davos Tour : ದಾವೋಸ್ ಪ್ರವಾಸ ಮತ್ತು ಸಂಪುಟ ವಿಸ್ತರಣೆ: ಸಿಎಂಗೆ ಮುಗಿಯದ ತಲೆನೋವು

ಬೆಂಗಳೂರು : ಸದ್ಯ ಬಿಜೆಪಿಯಲ್ಲಿ ಸಚಿವ ಸಂಪುಟ ವಿಸ್ತರಣೆಯದ್ದೇ ಸದ್ದು. 20 ಶಾಸಕರ ಹೆಸರು ದೆಹಲಿ ವರಿಷ್ಠರ ಕೈಸೇರಿದೆ ಎನ್ನಲಾಗ್ತಿದ್ದರೂ ಇನ್ನು ಯಾವುದೇ ಸ್ಪಷ್ಟ ಸಂದೇಶ‌ ಸಿಕ್ಕಿಲ್ಲ. ಇದರಿಂದ ಬೊಮ್ಮಾಯಿ ಸಂಕಷ್ಟಕ್ಕೆ ಸಿಲುಕಿದ್ದು ದಾವೋಸ್ ಪ್ರವಾಸಕ್ಕೆ (Davos Tour ) ಹೋಗಬೇಕೋ ಬೇಡವೋ ಎಂಬ ಗೊಂದಲಕ್ಕೆ ಸಿಲುಕಿದ್ದಾರಂತೆ. ಹೌದು ಕೊನೆಯ ಹಂತದ ಸಚಿವ ಸಂಪುಟ ಸರ್ಕಸ್ ನಲ್ಲಿ ಬಿಜೆಪಿ ಪಾಳಯ ಬ್ಯುಸಿಯಾಗಿದೆ. ಒಂದೆಡೆ ಶಾಸಕರಿಗೆ‌ ಸಚಿವರಾಗುವ ಕನಸಾದರೇ, ಸಚಿವರಿಗೆ ಸ್ಥಾನ ಉಳಿಸಿಕೊಳ್ಳುವ ಪರದಾಟ. ಇದೆಲ್ಲದರ ಮಧ್ಯೆ ಸಿಎಂ ಬೊಮ್ನಾಯಿ ಈ ಸಚಿವ ಸ್ಥಾನಾಕಾಂಕ್ಷಿಗಳು ಹಾಗೂ ವರಿಷ್ಠರ ನಡುವೆ ಸಿಲುಕಿಕೊಂಡು ಪರದಾಡುತ್ತಿದ್ದಾರೆ. ಕಾರ್ಯಕ್ರಮದ ನಿಮಿತ್ತ ದಾವೋಸ್ ಪ್ರವಾಸ ಹಮ್ಮಿಕೊಂಡಿದ್ದ ಬೊಮ್ಮಾಯಿ ಇದೇ ಬರುವ ಮೇ 21 ರಂದು ದಾವೋಸ್ ಗೆ ತೆರಳಬೇಕಿತ್ತು. ಅದರೆ ಈಗ ದಾವೋಸ್ ಗೆ ತೆರಳಲು ಕೇಂದ್ರ ವರಿಷ್ಟರಿಂದ ಸಿಎಂಗೆ ಪೊಲಿಟಿಕಲ್ ಕ್ಲಿಯರೆನ್ಸ ಸಿಕ್ಕಿಲ್ಲ. ಹೀಗಾಗಿ ಸಿಎಂ ಗೊಂದಲಕ್ಕೆ ಸಿಲುಕಿದ್ದಾರೆ.

ದೆಹಲಿಗೆ ತೆರಳಿದ ವೇಳೆ ವಿದೇಶಿ ಪ್ರವಾಸಕ್ಕೆ ಸಿಎಂ ಹೈಕಮಾಂಡ್ ಅನುಮತಿ ಕೋರಿದ್ದರಂತೆ. ಆದರೆ ಅಮಿತ್ ಶಾ ಪರಿಸ್ಥಿತಿ ನೋಡಿಕೊಂಡು ಅನುಮತಿ ನೀಡುವುದಾಗಿ ಹೇಳಿದ್ದರು ಎನ್ನಲಾಗಿದೆ. ಆದರೆ ಈಗ ಸಂಪುಟ ಸರ್ಕಸ್ ಕ್ಲೈಮ್ಯಾಕ್ಸ್ ಹಂತದಲ್ಲಿದೆ. ಹೀಗಾಗಿ ಈ ಬೆಳವಣಿಗೆ ಬಿಟ್ಟು ದಾವೋಸ್ ಗೆ ಹೋದರೂ ತಪ್ಪು ಸಂದೇಶ ಹೋಗುತ್ತದೆ ಎಂದು ಸಿಎಂ ಆಪ್ತರ ಬಳಿ ಪೇಚಾಡಿಕೊಂಡಿದ್ದಾರಂತೆ. ಅಷ್ಟೇ ಅಲ್ಲ ಈಗಾಗಲೇ ಫಿಕ್ಸ್ ಆಗಿರೋ ಪ್ರವಾಸಕ್ಕೆ ಹೋಗದಿದ್ದರೂ ಪ್ಪು ಸಂದೇಶ ರವಾನೆಯಾಗುತ್ತದೆ ಎಂದು ಬೊಮ್ಮಯಿ ಆಳಲು.

ಈ‌ ಮಧ್ಯೆ ತ್ರಿಪುರ ಸಿ ಎಂ ದಿಢೀರ್ ಬದಲಾಗಿದ್ದರಿಂದ ಬೊಮ್ಮಾಯಿ ಕೂಡ ಕೊಂಚ ಆತಂಕದಲ್ಲಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಮೂಲಕ ಪೊಲಿಟಿಕಲ್ ಕ್ಲಿಯರೆನ್ಸ್ ಗೆ ಮುಂದಾದ ಸಿಎಂ ಅನುಮತಿ ಕೊಡಿಸುವಂತೆ ಮನವಿ ಮಾಡಿದ್ದಾರಂತೆ . ಒಂದೊಮ್ಮೆ ಹೈಕಮಾಂಡ್ ಅನುಮತಿಸಿದರೇ ಸಿಎಂ 21 ರಂದು ದಾವೋಸ್ ಗೆ ತೆರಳಲಿದ್ದು, 26 ರಂದು ಹಿಂತಿರುಗಲಿದ್ದಾರೆ.

ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆಗೆ ಹೋದರೇ ಹಿನ್ನಡೆ ಕಟ್ಟಿಟ್ಟ ಬುತ್ತಿ ಎಂದು ಕೆಲವರು ಟೀಕಿಸಿದ್ದು, ಇದೇ ಕಾರಣಕ್ಕೆ ಹೈಕಮಾಂಡ್ ಸಚಿವ ಸಂಪುಟಕ್ಕೆ ಸರ್ಜರಿ ಮಾಡಿ ವಿಜಯೇಂದ್ರ್ ನನ್ನು ಸಚಿವರನ್ನಾಗಿಸಿ ನಾಯಕತ್ವವನ್ನು ಮತ್ತೊಮ್ಮೆ ಬಿಎಸ್ವೈ ಫ್ಯಾಮಿಲಿ ಹೆಗಲಿಗೆ ಹೊರಿಸಲು ಪ್ಲ್ಯಾನ್ ಮಾಡಿದೆಯಂತೆ. ಈ ಎಲ್ಲ ವಿಚಾರಗಳನ್ನು ತಿಳಿದ ಮೇಲೆ ಸಿಎಂ ದಾವೋಸ್ ಪ್ರಯಾಣಕ್ಕೆ ಹಿಂದೇಟು ಹಾಕುತ್ತಿದ್ದು, ಸ್ಥಾನ ಹಾಗೂ ಪ್ರಭಾವ ಉಳಿಸಲು ಸರ್ಕಸ್ ಆರಂಭಿಸಿದ್ದಾರಂತೆ.

ಇದನ್ನೂ ಓದಿ : ಪುತ್ರ ವಿಜಯೇಂದ್ರಗೆ ಪಟ್ಟ ಕಟ್ಟಿ ಕೆಟ್ಟರಾ ಬಿ.ಎಸ್.ಯಡಿಯೂರಪ್ಪ : ಕೊನೆಯಾಗುತ್ತಾ ರಾಜಾಹುಲಿಯ ರಾಜಕೀಯ ಬದುಕು

ಇದನ್ನೂ ಓದಿ :  ವಿಧಾನಪರಿಷತ್​ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಸವರಾಜ ಹೊರಟ್ಟಿ

Davos Tour and Cabinet Expansion, CM Basavaraj Bommai Unfinished Headache

Comments are closed.