ಕಬ್ಜ ಸಿನಿಮಾದ ಟ್ರೈಲರ್ ರಿಲೀಸ್ ಮಾಡೋದ್ಯಾರು ? ಕುತೂಹಲ ಹುಟ್ಟಿಸಿದ ಚಿತ್ರತಂಡ

ಸ್ಯಾಂಡಲ್‌ವುಡ್‌ ಆರ್‌.ಚಂದ್ರು ಹಾಗೂ ರಿಯಲ್‌ಸ್ಟಾರ್‌ ಉಪೇಂದ್ರ ಅಭಿನಯದ “ಕಬ್ಜ” ಸಿನಿಮಾದ ಟ್ರೈಲರ್‌ ರಿಲೀಸ್‌ಗೆ ಕ್ಷಣಗಣನೆ ಪ್ರಾರಂಭವಾಗಿದೆ. ಈಗಾಗಲೇ ಬಿಡುಗಡೆಯಾದ ಸಿನಿಮಾದ ಟೀಸರ್‌ ಹಾಗೂ ಹಾಡುಗಳನ್ನು ಸಿನಿಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಇನ್ನು ಈ ಸಿನಿಮಾದಲ್ಲಿ ನಟ ಉಪೇಂದ್ರ ಅವರ ಜೊತೆ ವಿಶೇಷ ಪಾತ್ರದಲ್ಲಿ ಕಿಚ್ಚ ಸುದೀಪ್‌ ಹಾಗೂ ಶಿವ ರಾಜ್‌ಕುಮಾರ್‌ ಕಾಣಿಸಿಕೊಳ್ಳಲಿದ್ದಾರೆ ಎಂದು ಸಿನಿತಂಡ ಹೇಳಿಕೊಂಡಿದೆ. ಹೀಗಾಗಿ ಈ ಸಿನಿಮಾ ಇನ್ನಷ್ಟು ಸಿನಿಪ್ರೇಕ್ಷಕರ ಕುತೂಹಲವನ್ನು ಕೆರಳಿಸಿದೆ. ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾವಾಗಿ ಬಿಡುಗಡೆಯಾಗುವ ಮೊದಲೇ ಟ್ರೈಲರ್‌ನ್ನು ನೋಡಿದ ಬಾಲಿವುಡ್‌ ಸೂಪರ್‌ಸ್ಟಾರ್ ಅಮಿತಾಬ್‌ ಬಚ್ಚನ್‌ (Amitabh Bachchan) ತುಂಬಾ ಖುಷಿ ಪಟ್ಟಿದ್ದಾರೆ. ಹೌದು ಇಂದು (ಮಾರ್ಚ್‌ 4)ಸಂಜೆ 5 ಗಂಟೆ 2 ನಿಮಿಷಕ್ಕೆ ಮುಂಬೈನಲ್ಲಿ “ಕಬ್ಜ” ಸಿನಿಮಾದ ಎಲ್ಲಾ ಭಾಷೆಗಳ ಟ್ರೈಲರ್‌ನ್ನು ಬಿಗ್‌ ಬಿ ಅಮಿತಾಬ್‌ ಬಚ್ಚನ್ ಬಿಡುಗಡೆ ಮಾಡಲಿದ್ದಾರೆ.

ಬಹುಕೋಟಿ ವೆಚ್ಚದಲ್ಲಿ ಕಬ್ಜ ನಿರ್ಮಾಣವಾಗಿದ್ದು, ಅದಕ್ಕಾಗಿ ಸಿನಿಮಾ ಪ್ರಮೋಷನ್‌, ರಿಲೀಸ್‌ ತಯಾರಿ ಭರ್ಜರಿಯಾಗಿ ನಡೆಯುತ್ತಿದೆ. ಇದೇ ಬರುವ ಮಾರ್ಚ್ 17ಕ್ಕೆ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದ ಸಂಭ್ರಮದ ದಿನದಂದು ಸಿನಿಮಾ ತೆರೆಗೆ ಅಪ್ಪಳಿಸಲಿದೆ. ಈಗ ಸಿನಿಮಾ ಟ್ರೈಲರ್‌ನ್ನು ಸಿನಿಮಂದಿರದಲ್ಲಿ ಬಿಡುಗಡೆ ಮಾಡುವುದು ಹೊಸ ಟ್ರೆಂಡ್‌ ಆಗಿದ್ದು, ‘ಕಬ್ಜ’ ಟ್ರೈಲರ್‌ನ್ನು ಕೂಡ ಮಾರ್ಚ್ 2ಕ್ಕೆ ಮುಂಬೈ ಅಂದೇರಿಯ ಸಿನಿಪೊಲೀಸ್ ಸಿನಿಮಂದಿರದಲ್ಲಿ ಲಾಂಚ್ ಈವೆಂಟ್ ನಡೆಯಲಿದೆ. ಅದಕ್ಕೆ ಬೇಕಾದ ಸಕಲ ತಯಾರಿಯಲ್ಲಿ ಸಿನಿತಂಡ ಬ್ಯುಸಿಯಾಗಿದೆ. ಆರ್‌. ಚಂದ್ರು ಬಹಳ ದೊಡ್ಡಮಟ್ಟದಲ್ಲಿ ಸಿನಿಮಾವನ್ನು ಪ್ರೇಕ್ಷಕರ ಮುಂದೆ ತೆಗೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ.

ಸುಮಾರು 50 ದೇಶಗಳಲ್ಲಿ ಏಕಕಾಲಕ್ಕೆ 4000 ಸ್ಕ್ರೀನ್‌ಗಳಲ್ಲಿ ಆರ್‌. ಚಂದ್ರು ‘ಕಬ್ಜ’ ಸಿನಿಮಾವನ್ನು ರಿಲೀಸ್ ಮಾಡುವ ಲೆಕ್ಕಾಚಾರದಲ್ಲಿದ್ದಾರೆ. ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜೊತೆಗೆ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನಟ ಸುದೀಪ್‌ ಕಬ್ಜದಲ್ಲಿ ಭಾರ್ಗವ್ ಭಕ್ಷಿ ಎನ್ನುವ ಖಡಕ್‌ ಪಾತ್ರದಲ್ಲಿ ಅಭಿನಯಿಸಲಿದ್ದಾರೆ. ಉಪೇಂದ್ರ ಜೊತೆ ನಾಯಕಿಯಾಗಿ ಶ್ರಿಯಾ ಶರಣ್ ನಟಿಸಲಿದ್ದಾರೆ. ಇನ್ನುಳಿದಂತೆ ಮುರಳಿ ಶರ್ಮಾ, ನವಾಬ್ ಶಾ, ಕೋಟ ಶ್ರೀನಿವಾಸ್ ರಾವ್, ಕಬೀರ್ ದುಹಾನ್ ಸಿಂಗ್, ಜಾನ್ ಕೊಕೇನ್, ಬಿ. ಸುರೇಶ್ ತಾರಾಗಣದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ತಾನ್ಯಾ ಹೋಪ್ ಸಿನಿಮಾದ ಸ್ಪೆಷಲ್ ಸಾಂಗ್‌ನಲ್ಲಿ ಹೆಜ್ಜೆ ಹಾಕಿದ್ದಾರೆ.

ಇದನ್ನೂ ಓದಿ : ಸ್ಯಾಂಡಲ್‌ವುಡ್ ಅದ್ದೂರಿ ಎಂಟ್ರಿ ಕೊಟ್ಟ ಯುವರಾಜ್‌ ಕುಮಾರ್‌ : ದಾಖಲೆ ಸೃಷ್ಟಿಸಿದ “ಯುವ” ಟೈಟಲ್‌ ಟೀಸರ್‌

ಇದನ್ನೂ ಓದಿ : ಮತ್ತೇರಿಸೋ ಮೈಮಾಟ ತೋರಿದ ಕಣ್ಸನ್ನೆ ಬೆಡಗಿ: ಪ್ರಿಯಾ ವಾರಿಯರ್ ಪೋಟೋಶೂಟ್ ಹೇಗಿದೆ ಗೊತ್ತಾ

ಇದನ್ನೂ ಓದಿ : “ಯುವ” ಟೈಟಲ್‌ ನೋಡಿ ಭಾವುಕರಾದ ಅಪ್ಪು ಫ್ಯಾನ್ಸ್ : ಶೀರ್ಷಿಕೆಯಲ್ಲೇನಿದೆ ಗೊತ್ತಾ ?

ಈ ಸಿನಿಮಾಕ್ಕೆ ರವಿ ಬಸ್ರೂರು ಅವರ ಸಂಗೀತ ನಿರ್ದೇಶನ ಸಿನಿಮಾದ ಮತ್ತೊಂದು ಹೈಲೆಟ್‌ ಆಗಲಿದೆ. ಈ ಸಿನಿಮಾಕ್ಕೆ ಎ.ಜೆ ಶೆಟ್ಟಿ ಸಿನಿಮಾಟೋಗ್ರಫಿ ಮಾಡಿದ್ದಾರೆ. ಕಬ್ಜ ಸಿನಿಮಾದಲ್ಲಿ ಅಂಡರ್‌ವರ್ಲ್ಡ್‌ ಗ್ಯಾಂಗ್‌ಸ್ಟಾರ್‌ಗಳ ನಡುವ ಕಾದಾಟದ ಕಥಾಹಂದರವನ್ನು ಒಳಗೊಂಡಿದೆ. ಸ್ವಾತಂತ್ಯ್ರ ಕಾಲದಲ್ಲಿ ಬ್ರಿಟೀಷ್‌ ಆಳ್ವಿಕೆಯಲ್ಲಿ ಅನಿವಾರ್ಯ ಕಾರಣಗಳಿಂದ ಅರಕೇಶ್ವರ ಭೂಗತಲೋಕಕ್ಕೆ ಕಾಲಿಡುತ್ತಾನೆ.ಮುಂದೆ ಆತ ಅಂಡರ್‌ವರ್ಲ್ಡ್‌ಗೆ ರಾಜನಾಗಿ ಮೆರೆಯುತ್ತಾನೆ. ಈ ಕಥೆಯನ್ನು ಒಳಗೊಂಡ ಸಿನಿಮಾ ಮುಂದೆ ಏನೆಲ್ಲಾ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ನಿರ್ದೇಶಕ ಆರ್‌.ಚಂದ್ರು ತಿಳಿಸಿದ್ದಾರೆ. ನಿರ್ದೇಶಕ ಆರ್‌ ಚಂದ್ರು ಅವರು ಸ್ವತಃ ಕಥೆ, ಚಿತ್ರಕಥೇ ಬರೆದು ಕಬ್ಜ ಸಿನಿಮಾ ನಿರ್ಮಾಣ ಸಾಹಸ ಕೂಡ ಮಾಡಿದ್ದಾರೆ. ನಾಯಕಿ ಶ್ರಿಯಾ ಶರಣ್‌ ರಾಣಿ ಮಧುಮತಿ ಪಾತ್ರದಲ್ಲಿ ಮಿಂಚಿದ್ದಾರೆ. ಇದೀಗ ‘ಕಬ್ಜ’ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗುತ್ತಿದ್ದಾರೆ.

Amitabh Bachchan: Will the trailer of Kabza movie be released? An interesting cast

Comments are closed.