Amitabh Bachchan : ಶುರುವಾಗ್ತಿದೆ ಬಿಗ್ ಬಿ ಅಭಿಮಾನಿಗಳಿಗೆ ದರ್ಶನ ಭಾಗ್ಯ!

ನಟ ಅಮಿತಾಭ್ ಬಚ್ಚನ್(Amitabh Bachchan) ಅವರನ್ನು ನೋಡಿ ಕಣ್ತುಂಬಿಕೊಳ್ಳಬೇಕು ಅನ್ನೋದು ದೂರದೂರುಗಳಿಂದ ಮುಂಬಯಿ ನಗರಕ್ಕೆ ಬರುವ ಅಭಿಮಾನಿಗಳ ಆಸೆ. ಹೀಗಾಗಿ, ಅಮಿತಾಭ್ ಅವರ ಜುಲ್ಸಾ ನಿವಾಸಕ್ಕೆ ಆಗಾಗ ಎಡತಾಕುತ್ತಲೇ ಇರುತ್ತಾರೆ. ಎಷ್ಟೋ ಸಲ ಮುಚ್ಚಿದ ಗೇಟ್ ಅನ್ನು ನೋಡಿಕೊಂಡು ಹೋಗುವುದು ಉಂಟು.

ಇದನ್ನೂ ಓದಿ : Director R Chandru : ನಟ ಕಿಚ್ಚ ಸುದೀಪ್ ಕಬ್ಜ ತೊರೆದಿಲ್ಲ! ಗಾಳಿ ಸುದ್ದಿಗೆ ಕಿವಿಗೊಡಬೇಡಿ : ನಿರ್ದೇಶಕ ಆರ್ ಚಂದ್ರು

ಅಮಿತಾಭ್ ಇವರಿಗೆ ನೀರಾಸೆ ಮಾಡಿದವರಲ್ಲ. ಹಲವು ವರ್ಷಗಳಿಂದ ಪ್ರತಿ ಭಾನುವಾರ ಬೆಳಗ್ಗೆ ಮನೆಯ ಬಾಲ್ಕನಿಗೆ ಬಂದು ಅಭಿಮಾನಿಗಳ ಕಡೆ ಕೈಬೀಸಿ, ದರ್ಶನ ನೀಡುವ ಪರಿಪಾಠ ಅಮಿತಾಭ್ ಬೆಳಸಿಕೊಂಡು ಬಂದಿದ್ದಾರೆ. ಕೋವಿಡ್ ಕಾರಣದಿಂದಾಗಿ ಸರ್ಕಾರ ನಿರ್ಬಂಧ ಹೇರಿದ್ದರಿಂದ ಕಳೆದ ಎರಡು ವರ್ಷಗಳಿಂದ ಅಮಿತಾಭ್ ಬಚ್ಚನ್ ತಮ್ಮ ಜಲ್ಸಾ ಮನೆಯ ಮುಂದೆ ಅಭಿಮಾನಿಗಳಿಗೆ ದರ್ಶನ ಕೊಡುವುದನ್ನು ನಿಲ್ಲಿಸಿದರು.
ಈಗ ಕೋವಿಡ್ ಸಂಖ್ಯೆ ಇಳಿಮುಖವಾಗಿದೆ. ಪ್ರಕರಣ ಸಂಖ್ಯೆ ಮಹಾರಾಷ್ಟ್ರದಲ್ಲಿ ಹೆಚ್ಚುತ್ತಿಲ್ಲವಾದ್ದರಿಂದ ಸರ್ಕಾರ ಕೋವಿಡ್ ನಿಯಮಗಳನ್ನು ತೆರವುಗೊಳಿಸಿದೆ. ಹೀಗಾಗಿ, ಅಮಿತಾಭ್ ಬಚ್ಚನ್ ಮತ್ತೆ ‘ಅಭಿಮಾನ ದರ್ಶನ’ವನ್ನು ಪ್ರತಿ ಭಾನುವಾರ ಆರಂಭಿಸುವ ಸುಳಿವು ನೀಡಿದ್ದಾರೆ. ಅಮಿತಾಭ್ ತಮ್ಮ ಟ್ವಿಟರ್ ಖಾತೆಯಲ್ಲಿ ಈ ರೀತಿ ಬರೆದು ಕೊಂಡಿದ್ದಾರೆ.

‘ಆಲ್ ರೈಟ್,
ಮುಂಬಯಿ ನಗರದಿಂದ ಮಾಸ್ಕ್ ಖಡ್ಡಾ ನಿಯಮವನ್ನು ತೆರವು ಗೊಳಿಸಿರುವ ಸುದ್ದಿ ಬಂದಿದೆ. ಜೊತೆಗೆ, ಸರ್ಕಾರ ಕೋವಿಡ್ ನಿಯಮಗಳನ್ನು ಹಿಂಪಡೆದು ಕೊಂಡಿರುವುದು ನಮಗೆ ಶುಭಸುದ್ದಿ. ದೇಶದ ಆಂತರಿಕ ವಿಮಾನ ಸಾರಿಗೆ, ಅಂತಾರಾಷ್ಟ್ರೀಯ ವಿಮಾನ ಯಾನ ಸಹಜಸ್ಥಿತಿಗೆ ಬಂದಿದೆ. ಹೀಗಾಗಿ, ಬಹುಶಃ ಮತ್ತೆ ಜಲ್ಸಾದಲ್ಲಿ ನನ್ನ ಅಭಿಮಾನಿಗಳನ್ನು ಭೇಟಿ ಮಾಡುವುದು ಸಾಧ್ಯವಾಗಬಹುದು. ನಾನು ಮರಳಿ ಬಂದ ನಂತರ ಇಂಥದ್ದೊಂದು ಖುಷಿಯನ್ನು ನಾವೆಲ್ಲ ಅನುಭವಿಸೋಣ. ನಾನು ಈಗ ಅನಾರೋಗ್ಯದಿಂದ ಹೊರಬರಬೇಕಿದೆ. ಹಾಗಾಗಿ, ವಿಶ್ರಾಂತಿ ಅಗತ್ಯವಿದೆ’ ಎಂದು ಅಮಿತಾಭ್ ಬರೆದುಕೊಂಡಿದ್ದಾರೆ.

ಮಹಾರಾಷ್ಟ್ರ ಸರ್ಕಾರ ಮಾಸ್ಕ್ ಸೇರಿದಂತೆ ಮಾರ್ಚ್ 31ರರಿಂದ ಕೋವಿಡ್ ಎಲ್ಲಾ ನಿರ್ಬಂಧಗಳನ್ನು ಹಿಂಪಡೆದಿದೆ. ಗುಡ್ಡಪಡ್ವಾ ಹಬ್ಬದ ಪ್ರಯುಕ್ತ ಸರ್ಕಾರ ಸಾರ್ವಜನಿಕರಿಗೆ ಈ ರೀತಿಯ ಸಿಹಿಸುದ್ದಿ ನೀಡಿದೆ. ಇತ್ತೀಚೆಗಷ್ಟೇ ಅಮಿತಾಭ್ ಭಚ್ಚನ್ ಅವರಿಗೂ ಕೋವಿಡ್ ಹರಡಿತ್ತು. ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ, ಈಗ ಅವರು ಸುಂಪೂರ್ಣ ಚೇತರಿಸಿಕೊಂಡು, ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ಅವರ
ಮತ್ತೊಮ್ಮೆ ಅಭಿಮಾನಿಗಳಿಗೆ ದರ್ಶನ ಕೊಡಲು ನಿರ್ಧರಿಸಿದ್ದಾರೆ.

ಇದನ್ನೂ ಓದಿ : Poonam Pandey : ನಾನು ನಿಮಗಾಗಿ ಬೆತ್ತಲಾಗ್ತೇನೆ : ಅಭಿಮಾನಿಗಳಿಗೆ ಬಾಲಿವುಡ್ ನಟಿ ಪೂನಂಪಾಂಡೆ ಆಫರ್

(Amitabh Bachchan resume the famous Sunday meet at Jalsa)

Comments are closed.