Deadly Mosquito: ಸೊಳ್ಳೆ ಕಚ್ಚಿದ್ದಕ್ಕೆ 30 ಬಾರಿ ಆಪರೇಷನ್ ಗೆ ಒಳಗಾದ; 1 ತಿಂಗಳು ಕೋಮಾದಲ್ಲಿದ್ದ.. ಕೊನೆಗೂ ಬದುಕಿ ಬರಲೇ ಇಲ್ಲ..

ಜರ್ಮನಿ: Deadly Mosquito: ಸೊಳ್ಳೆ ಕಚ್ಚಿದ್ರೆ ಏನಾಗಬಹುದು.? ಒಂದೋ ಕಚ್ಚಿದ ಜಾಗದಲ್ಲಿ ಕೆಂಪಗಾಗುತ್ತೆ, ಇಲ್ಲ ತುರಿಕೆ ಉಂಟಾಗುತ್ತದೆ. ಇನ್ನೂ ಕೆಲವೊಮ್ಮೆ ಊದಿಕೊಂಡು ಬಿಡುತ್ತೆ ಅಷ್ಟೆ. ಆದರೆ ಇಲ್ಲೊಬ್ಬ ವ್ತಕ್ತಿ ಸೊಳ್ಳೆ ಕಡಿತದಿಂದ ಪ್ರಾಣವನ್ನೇ ಕಳೆದುಕೊಂಡಿದ್ದಾನೆ. ಅಲ್ಲದೇ ಈತ ಸಾಯುವುದಕ್ಕೂ ಮುನ್ನ ಬರೋಬ್ಬರಿ 30 ಆಪರೇಷನ್ ಗೆ ಒಳಗಾಗಿದ್ದಾನಂತೆ.

ಜರ್ಮನಿಯ ರೋಡರ್ ಮಾರ್ಕ್ ನಿವಾಸಿ ಸೆಬಾಸ್ಟಿಯನ್ ರೋಟ್ಸಚ್ಕೆ ಎಂಬ 27 ವರ್ಷದ ಯುವಕ ಮಾರಕ ಸೊಳ್ಳೆಗೆ ಬಲಿಯಾಗಿದ್ದಾನೆ. ಮೂಲಗಳ ಮಾಹಿತಿ ಪ್ರಕಾರ 2021ರ ಏಪ್ರಿಲ್- ಮೇ ತಿಂಗಳಲ್ಲಿ ಈತನಿಗೆ ಸೊಳ್ಳೆಯೊಂದು ಕಚ್ಚಿದೆ. ಆತನ ಎಡ ತೊಡೆಯ ಭಾಗದಲ್ಲಿ ಏಷಿಯನ್ ಟೈಗರ್ ಸೊಳ್ಳೆ ಕಚ್ಚಿದೆ. ಇದಾದ ಬಳಿಕ ಆತನಿಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಿದೆ. ವೈದ್ಯರ ಬಳಿಗೆ ಹೋದಾಗ ಆಸ್ಪತ್ರೆಗೆ ದಾಖಲು ಮಾಡುವಂತೆ ಸೂಚಿಸಿದ್ದರು. ಅದಾದ ಬಳಿಕ ಆತನಿಗೆ ಹಲವು ಆರೋಗ್ಯ ಸಮಸ್ಯೆಗಳು ಉಲ್ಬಣಗೊಂಡು ಅದನ್ನು ಪರಿಹರಿಸುವುದೇ ವೈದ್ಯ ಲೋಕಕ್ಕೆ ಸವಾಲಾಗಿ ಪರಿಣಮಿಸಿತ್ತು.

ಇದನ್ನೂ ಓದಿ: ಪಳನಿಯಲ್ಲಿ ಬಾಯ್ಲರ್ ಸ್ಫೋಟ : ತಪ್ಪಿದ ಬಾರೀ ದುರಂತ

ಕೇವಲ ಸೊಳ್ಳೆ ಕಚ್ಚಿದ್ದರ ಪರಿಣಾಮ ಆತನ ದೇಹದ ಹಲವು ಅಂಗಾಂಗಗಳು ಹಾನಿಗೀಡಾಗಿದ್ದವು. ಕಾಲಕ್ರಮೇಣ ಆತನ ಯಕೃತ್ತು, ಮೂತ್ರಪಿಂಡ, ಹೃದಯ, ಶ್ವಾಸಕೋಶಗಳು ಕೆಲಸ ಮಾಡುವುದನ್ನು ನಿಲ್ಲಿಸುತ್ತಾ ಬಂದವು. ಹೀಗಾಗಿ ವೈದ್ಯರು ತೊಡೆಯ ಆಪರೇಷನ್ ಮಾಡುವುದಾಗಿ ಸೂಚಿಸಿದ್ದರು. ಶಸ್ತ್ರಚಿಕಿತ್ಸೆ ಬಳಿಕ ಆತನ ಆರೋಗ್ಯ ಸುಧಾರಿಸುತ್ತದೆ ಎಂಬುದೇ ವೈದ್ಯರ ನಂಬಿಕೆ ಆಗಿತ್ತು. ಆದರೆ ಆಪರೇಷನ್ ಬಳಿಕ ಸೋಂಕು ಮತ್ತಷ್ಟು ಹೆಚ್ಚಿತ್ತು. ಹೀಗಾಗಿ ಚರ್ಮಕ್ಕೆ ಸಂಬಂಧಿಸಿ ಅನೇಕ ರೀತಿಯ ಆಪರೇಷನ್ ಗಳನ್ನು ಮಾಡಲಾಯಿತು. ಇದಾದ ಬಳಿಕ ಆತ 4 ವಾರಗಳ ಕಾಲ ಕೋಮಾದಲ್ಲಿದ್ದು ಕೊನೆಗೂ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ. ವಿಚಿತ್ರ ಎಂದರೆ ಈತ ಸಣ್ಣ ಹಾಗೂ ದೊಡ್ಡಪ್ರಮಾಣದ ಬರೋಬ್ಬರಿ 30 ಆಪರೇಷನ್ ಗಳಿಗೆ ಒಳಗಾಗಿದ್ದನಂತೆ.

ಇದನ್ನೂ ಓದಿ: Overpass collapse: ಮಹಾರಾಷ್ಟ್ರದಲ್ಲಿ ಮೇಲ್ಸೇತುವೆ ಕುಸಿತ: ಮಹಿಳೆ ಸಾವು, 12 ಜನ ಗಂಭೀರ ಗಾಯ

ಜರ್ಮನಿಯ ಸುದ್ದಿ ಪತ್ರಿಕೆ ಡೈಲಿ ಸ್ಟಾರ್ ಪ್ರಕಾರ, ಸೊಳ್ಳೆ ಕಚ್ಚಿದ ಬಳಿಕ ಆತನ ರಕ್ತದಲ್ಲಿ ಬ್ಯಾಕ್ಟೀರಿಯಾ ವಿಷದ ಅಂಶಗಳು ಸೇರಿಕೊಂಡಿದ್ದು, ಆತ ಹಲವಾರು ಬಾರಿ ಯಕೃತ್ತು, ಹೃದಯ, ಮೂತ್ರಪಿಂಡ, ಶ್ವಾಸಕೋಶದ ವೈಫಲ್ಯವನ್ನು ಎದುರಿಸಿದ್ದಾನೆ. ಆ ಅಂಗಾಂಗಗಳ ಭಾಗದಲ್ಲಿ ಬಂದಿದ್ದ ಬಾವುಗಳನ್ನು ತೆಗೆಯಲು ತೊಡೆಯ ಭಾಗದಲ್ಲಿ ಕಸಿ ಮಾಡಲಾಗಿದೆ. ಇದಕ್ಕೆಲ್ಲಾ ಕಾರಣ ಸೆರಾಟಿಯಾ ಮಾರ್ಸೆಸೆನ್ಸ್ ಎಂಬ ಬ್ಯಾಕ್ಟೀರಿಯಾವು ಆತನ ಎಡ ತೊಡೆಯ ಅರ್ಧದಷ್ಟು ಭಾಗವನ್ನು ತಿಂದುಹಾಕಿದ್ದರಿಂದ ಆತನಿಗೆ ಯಾವ ಚಿಕಿತ್ಸೆಯೂ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎನ್ನಲಾಗಿದೆ.

Deadly Mosquito: Man Slips Into Coma Undergoes 30 Operations After Mosquito Bite

Comments are closed.