Amulya Jagdish couple : ತಿರುಪತಿ ತಿಮ್ಮಪ್ಪನಿಗೆ ಅವಳಿ ಮಕ್ಕಳ ಮುಡಿ ಕೊಟ್ಟ ಅಮೂಲ್ಯ ಜಗದೀಶ್‌ ದಂಪತಿ

ಚೆಲುವಿನ ಚಿತ್ತಾರದ ಬೆಡಗಿ ಅಮೂಲ್ಯ ತಾಯ್ತನದ ಸಂಭ್ರಮದಲ್ಲಿದ್ದಾರೆ. ಅಮೂಲ್ಯ ಜಗದೀಶ್‌ ದಂಪತಿಗಳು (Amulya Jagdish couple) ಇತ್ತೀಚಿಗಷ್ಟೇ ತಮ್ಮ ಅವಳಿ ಮಕ್ಕಳ ನಾಮಕರಣವನ್ನು ಅದ್ದೂರಿಯಾಗಿ ನಡೆಸಿದ್ದಾರೆ. ಈಗ ಅದರ ಬೆನ್ನಲ್ಲೇ ಅವಳಿ ಮಕ್ಕಳ ಮುಡಿ ಕೊಟ್ಟಿದ್ದಾರೆ.

ಚಿಕ್ಕವಯಸ್ಸಿನಲ್ಲೇ ಅನೇಕ ಸಿನಿಮಾಗಳಲ್ಲಿ ಬಾಲನಟಿಯಾಗಿ ನಟಿಸಿದ ಅಮೂಲ್ಯ “ಚೆಲುವಿನ ಚಿತ್ತಾರ” ಸಿನಿಮಾದ ಮೂಲಕ ಕನ್ನಡ ಸಿನಿರಂಗದಲ್ಲಿ ಹೊಸ ಸಂಚಲನವನ್ನು ಮೂಡಿಸಿದ್ದಾರೆ. ನಂತರ ಸ್ಟಾರ್‌ ನಟರ ಜೊತೆ ಅನೇಕ ಸಿನಿಮಾಗಳಲ್ಲಿ ನಟಿಸುವ ಮೂಲಕ ಸಿನಿಪ್ರೇಕ್ಷಕರ ಮನಗೆದ್ದಿದ್ದಾರೆ. ಆದರೆ ತಮ್ಮ ಮದುವೆ ನಂತರ ಸಿನಿಮಾಕ್ಕೆ ಬ್ರೇಕ್‌ ಹಾಕಿ ಸಂಸಾರಿಕ ಜೀವನದಲ್ಲಿ ಪತಿ ಮತ್ತು ಮಕ್ಕಳು ಎಂದು ಬ್ಯುಸಿಯಾಗಿದ್ದಾರೆ. ಇದೀಗ ಇಡೀ ಕುಟುಂಬ ಸಮೇತವಾಗಿ ತಿರುಪತಿಗೆ ತೆರಳಿದ್ದಾರೆ.ಅಮೂಲ್ಯ ಜಗದೀಶ್‌ ದಂಪತಿಗಳು ಅವಳಿ ಮಕ್ಕಳ ನಾಮಕರಣವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ನಾಮಕರಣ ಆಗಿ ಕೆಲವೇ ದಿನಗಳಲ್ಲಿ ಅಮೂಲ್ಯ ಜಗದೀಶ್‌ ದಂಪತಿಗಳು ತಮ್ಮ ಅವಳಿ ಮಕ್ಕಳ ಮುಡಿ ಕೊಟ್ಟಿದ್ದಾರೆ.

ಇದನ್ನೂ ಓದಿ : Nawazuddin Siddiqui : ಮಂಗಳಮುಖಿಯಾಗಿ ಬದಲಾದ ನಟ ನವಾಜುದ್ದೀನ್ ಸಿದ್ದಿಕಿ

ಇದನ್ನೂ ಓದಿ : Drishyam 2 Box Office : ಬಾಕ್ಸಾಫೀಸ್ ನಲ್ಲಿ ದಾಖಲೆ ಬರೆಯತ್ತಿದೆ ಅಜಯ್ ದೇವಗನ್ ದೃಶ್ಯಂ 2

ಇದನ್ನೂ ಓದಿ : Naga Shaurya Wedding : ಕುಂದಾಪುರದ ಅನುಷಾ ಶೆಟ್ಟಿ ಜೊತೆ ಹಸೆಮಣೆ ಏರಿದ ತೆಲುಗು ನಟ ನಾಗಶೌರ್ಯ

ಹೊಸ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಅಥರ್ವ್‌ ಮತ್ತು ಆಧವ್‌ ಅವಳಿ ಜೊತೆ ಇಡೀ ಕುಟುಂಬ ಕ್ಯಾಮರಾಗೆ ಪೋಸ್‌ ನೀಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಅಮೂಲ್ಯ ಮತ್ತು ಜಗದೀಶ್‌ ಕಾಣಿಸಿಕೊಂಡರೆ, ಮಕ್ಕಳು ಒಂದೇ ತರಹದ ಉಡುಗೆಯಲ್ಲಿ ಕಾಣಿಸಿಕೊಂಡಿದ್ದಾರೆ. ಅಥರ್ವ್‌ ಮತ್ತು ಆಧವ್‌ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್‌ ವೈರಲ್‌ ಆಗಿದೆ. ತಿರುಪತಿ ದೇವಸ್ಥಾನದ ಮುಂದೆ ನಿಂತು ಕ್ಯಾಮರಾಕ್ಕೆ ಪೋಸ್‌ ನೀಡಿರುವ ಪೋಟೋಗಳಿಗೆ ಅಭಿಮಾನಿಗಳು ಸಾಕಷ್ಟು ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.

ನಟಿ ಅಮೂಲ್ಯ ಪತಿ ಅವಳಿ ಮಕ್ಕಳು ಜನಿಸಿದ ಸಂದರ್ಭದಲ್ಲಿ ಮಕ್ಕಳಿಗೆ ಬೀದಿ ಬದಿಯಲ್ಲಿ ಬಲೂನ್ ಖರೀದಿ ಮಾಡುವ ಮೂಲಕ ಸಾಕಷ್ಟು ಸುದ್ದಿಯಾಗಿದ್ದರು. ಇತ್ತೀಚಿಗಷ್ಟೇ ನಟಿ ಅಮೂಲ್ಯ ದಂಪತಿ ತಮ್ಮ ಮಕ್ಕಳ ನಾಮಕರಣ ಶಾಸ್ತ್ರವನ್ನು ಮುಗಿಸಿದ್ದರು. ಸಮಾರಂಭದಲ್ಲಿ ಚಿತ್ರರಂಗದ ಗಣ್ಯರು ಭಾಗಿಯಾಗಿದ್ದರು.

Amulya Jagdish couple with twins, Tirupati Thimmappa’s god darshan

Comments are closed.