Mangaluru Blast: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ರಸ್ತೆ ಹಂಪ್ಸ್‌ನಿಂದಾಗಿ ಆಟೋದಲ್ಲೇ ಸ್ಫೋಟ !

ಮಂಗಳೂರು : (Mangaluru Blast) ನಗರದ ಪಂಪ್‌ ವೆಲ್‌ ಬಳಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿರುವ ಘಟನೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದೆ. ತನಿಖೆ ತೀವ್ರಗೊಳ್ಳುತ್ತಿದ್ದಂತೆ ಈ ಪ್ರಕರಣಕ್ಕೆ ಸಂಬಂಧಪಟ್ಟ ಹೊಸ ಹೊಸ ಮಾಹಿತಿಗಳು ಬಯಲಾಗುತ್ತಲೇ ಇವೆ. ಇದೀಗ ಮತ್ತೊಂದು ಸ್ಪೋಟಕ ಮಾಹಿತಿ ಬಯಲಾಗಿದ್ದು, ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ಹಂಪ್ಸ್‌ನಿಂದಾಗಿ ಆಟೋ ರಿಕ್ಷಾದಲ್ಲಿ ಸ್ಫೋಟವಾಗಿರಬಹುದು ಎಂಬ ಶಂಕೆ ವ್ಯಕ್ತವಾಗುತ್ತಿದೆ.

ಶನಿವಾರ ಸಂಜೆ ಮಂಗಳೂರಿನ ಪಂಪ್‌ವೆಲ್‌ನಿಂದ ನಾಗುರಿ ಕಡೆ ಚಲಿಸುತ್ತಿದ್ದ ಆಟೋದಲ್ಲಿ ಸ್ಫೋಟ (Mangaluru Blast) ಸಂಭವಿಸಿದೆ. ಇದಕ್ಕೂ ಮುನ್ನ ದಾರಿ ಮಧ್ಯೆ ಪ್ರಯಾಣಿಕನೊಬ್ಬ ಕೈಯಲ್ಲಿ ಕುಕ್ಕರ್ ಹಿಡಿದುಕೊಂಡು ಆಟೋ ಹತ್ತಿದ್ದ. ಆತ ನಾಗುರಿಗೆ ಹೋಗಲು ಚಾಲಕನಿಗೆ ಸೂಚಿಸಿದ್ದ. ಆದರೆ ಕೆಲವೇ ಕ್ಷಣಗಳಲ್ಲಿ ನಾಗುರಿಯ ಕಂಕನಾಡಿ ಪೊಲೀಸ್ ಠಾಣೆಯ ಎದುರು ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಫೋಟಗೊಂಡಿದೆ. ಶಂಕಿತನ ಕೈಯಲ್ಲಿದ್ದ ಕುಕ್ಕರ್ ಸ್ಪೋಟದ ತೀವ್ರತೆಗೆ ಛಿದ್ರಗೊಂಡಿದೆ.

ಜನಜಂಗುಳಿಯಿದ್ದ ಪ್ರದೇಶದಲ್ಲಿ ಅಥವಾ ಬಸ್‌ ನಿಲ್ದಾಣಗಳಲ್ಲಿ ಟೈಮರ್ ಇಟ್ಟು ಕುಕ್ಕರ್‌ ಬಾಂಬ್‌ ಅನ್ನು ಸ್ಫೋಟಿಸುವ ಹುನ್ನಾರವನ್ನು ಮಾಡಲಾಗಿದೆ ಎನ್ನುವ ಶಂಕೆಯಿದೆ. ಅಷ್ಟೇ ಅಲ್ಲದೇ ಸಿ.ಎಂ. ಬೊಮ್ಮಾಯಿ ಅವರು ಮಂಗಳೂರಿಗೆ ಬಂದ ಬೆನ್ನಲ್ಲೇ ಈ ಘಟನೆ ನಡೆದಿದ್ದು ಇನ್ನಷ್ಟು ಆತಂಕಕ್ಕೆ ಕಾರಣವಾಗಿದೆ. ಇನ್ನೆಲ್ಲೋ ಬಾಂಬ್‌ ಸ್ಪೋಟವನ್ನು ನಡೆಸಲು ಕುಕ್ಕರ್‌ ಬಾಂಬ್‌ ಅನ್ನು ತೆಗೆದುಕೊಂಡು ಹೋಗುವ ವೇಳೆಯಲ್ಲಿ ಕುಕ್ಕರ್ ಬ್ಲಾಸ್ಟ್ ಆಗಿರುವ ಸ್ಥಳದ ದಾರಿಯಲ್ಲಿ ಹಂಪ್ಸ್ ಇದ್ದಿದ್ದು, ಆ ಹಂಪ್ಸ್‌ನಲ್ಲಿ ಆಟೋವನ್ನು ಹತ್ತಿಸಿದ್ದರಿಂದ ಕುಕ್ಕರ್ ಬಾಂಬ್ ಸ್ಫೋಟಗೊಂಡಿರಬಹುದು ಎಂಬ ಅನುಮಾನ ಈಗ ಮೂಡುತ್ತಿದೆ.

ಇದನ್ನೂ ಓದಿ : Mangaluru Bomb blast: ಶಿವಮೊಗ್ಗದಲ್ಲಿ ಬಾಂಬ್‌ ಸಿಡಿಸಿ ನಾಪತ್ತೆಯಾದವನು ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

ಇದನ್ನೂ ಓದಿ : Mangaluru Bomb Blast: ಶಂಕಿತನ ಗುರುತು ಪತ್ತೆ: ಅನುಮಾನ ಮೂಡಿಸಿದ ಆತನ ಹೇಳಿಕೆ

ಈ ಪ್ರಕರಣದ ಕುರಿತು ಪೊಲೀಸರು ತನಿಖೆಯನ್ನು ತೀವ್ರಗೊಳಿಸುತ್ತಿದ್ದು, ಇನ್ನಷ್ಟು ಹೊಸ ಹೊಸ ಆಘಾತಕಾರಿ ಮಾಹಿತಿಗಳು ಹೊರಬೀಳುತ್ತಲೇ ಇವೆ. ಈ ಕುರಿತಾಗಿ ಇನ್ನಷ್ಟು ಮಾಹಿತಿಗಳನ್ನು ನಿರೀಕ್ಷಿಸಲಾಗುತ್ತಿದೆ

(Mangaluru Blast) The incident of cooker bomb explosion in an auto near a pump well in the city has shocked the entire state. As the investigation intensifies, new information about the case continues to emerge. Now another explosive information has come to light and it is suspected that the bomb may have exploded in the auto rickshaw due to the humps that were supposed to explode elsewhere.

Comments are closed.