Mangaluru blast incident: ಮಂಗಳೂರು ಸ್ಪೋಟ ಪ್ರಕರಣ : ಪಿಎಫ್ಐ ಮುಖಂಡ ಇಜಾಜ್ ಪೊಲೀಸ್ ವಶಕ್ಕೆ

ಮಂಗಳೂರು: (Mangaluru blast incident) ಆಟೋದಲ್ಲಿ ನಿಗೂಢ ಸ್ಪೋಟ‌ ಪ್ರಕರಣದಲ್ಲಿ ನಿಮಿಷಕ್ಕೊಂದು ಮಾಹಿತಿ ಸಿಗುತ್ತಿದ್ದು, ಇದೀಗ ಕುಕ್ಕರ್‌ ಬ್ಲಾಸ್ಟ್‌ ಪ್ರಕರಣದ ಬೆನ್ನಲ್ಲೇ ಪಿಎಫ್ಐ ಮುಖಂಡ ಇಜಾಜ್‌ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನ ನಿವಾಸಿಯಾಗಿರುವ ಇಜಾಜ್‌ ಪಿಎಫ್ಐ ಬ್ಯಾನ್‌ ಬಳಿಕ ನಡೆದ ಪ್ರತಿಭಟನೆಯಲ್ಲಿ ಅಕ್ಟೋಬರ್‌ 27 ರಂದು ಅರೆಸ್ಟ್‌ ಆಗಿದ್ದ. ಮಂಗಳೂರು ಕುಕ್ಕರ್‌ ಬ್ಲಾಸ್ಟ್‌ (Mangaluru blast incident) ಬೆನ್ನಲ್ಲೇ ಈತ ದುಬೈಗೆ ಹಾರಲು ರೆಡಿಯಾಗಿದ್ದು, ಈತನನ್ನು ಮಂಗಳೂರು ಏರ್‌ ಪೋರ್ಟ್‌ ನಲ್ಲಿ NIA ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.

ಈ ಸ್ಪೋಟಕ್ಕೆ ಎಸ್ ಡಿಪಿಐ ಮತ್ತು ಪಿಎಫ್ಐ ಕಾರ್ಯಕರ್ತರ ಮನೆಯ ಮೇಲೆ ನಡೆದ ದಾಳಿಯೇ ಕಾರಣ ಎಂದು ಹೇಳಲಾಗುತ್ತಿದ್ದು, ಇದರಲ್ಲಿ ಇಜಾಜ್‌ ಹೆಸರು ಕೂಡ ಕೇಳಿ ಬರುತ್ತಿದೆ. ಈ ಕೃತ್ಯದಲ್ಲಿ ಆತನ ಕೈವಾಡವಿರುವ ಶಂಕೆಯಿದ್ದು,ಆತನನ್ನು ಕೂಡ ಎನ್ಐಎ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ. ಪಿಎಫ್ಐ ಕಾರ್ಯಕರ್ತರನ್ನು ಮತ್ತು ಮುಖಂಡರನ್ನು ಬಂಧನ ಮಾಡಲಾಗಿತ್ತು ಮತ್ತು ಪ್ರವೀಣ್‌ ನೆಟ್ಟಾರು ಹತ್ಯೆಯಲ್ಲಿ ಉಗ್ರರ ಕೈವಾಡವಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದರು. ಇನ್ನು ಪಿಎಫ್ಐ ಕಾರ್ಯಕರ್ತರಿಗೆ ಉಗ್ರರ ಜೊತೆ ಲಿಂಕ್‌ ಇರುವ ಕಾರಣಕ್ಕಾಗಿ ಪಿಎಫ್ಐ ಕಾರ್ಯಕರ್ತರ ಬಂಧನವಾಗಿತ್ತು. ಇದಕ್ಕೆ ಪ್ರತಿಕಾರ ತೀರಿಸಿಕೊಳ್ಳುವ ಸಲುವಾಗಿಯೇ ಈ ರೀತಿಯ ಸ್ಪೋಟಕ್ಕೆ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ : Mangaluru Blast: ಬೇರೆಲ್ಲೋ ಸ್ಫೋಟವಾಗಬೇಕಿದ್ದ ಬಾಂಬ್ ರಸ್ತೆ ಹಂಪ್ಸ್‌ನಿಂದಾಗಿ ಆಟೋದಲ್ಲೇ ಸ್ಫೋಟ !

ಇದನ್ನೂ ಓದಿ : Mangaluru Bomb blast: ಶಿವಮೊಗ್ಗದಲ್ಲಿ ಬಾಂಬ್‌ ಸಿಡಿಸಿ ನಾಪತ್ತೆಯಾದವನು ಮಂಗಳೂರಲ್ಲಿ ಕುಕ್ಕರ್‌ ಬಾಂಬ್‌ ಸಿಡಿಸಿ ಸಿಕ್ಕಿಬಿದ್ದ

ಇದನ್ನೂ ಓದಿ : Mangaluru Bomb Blast: ಶಂಕಿತನ ಗುರುತು ಪತ್ತೆ: ಅನುಮಾನ ಮೂಡಿಸಿದ ಆತನ ಹೇಳಿಕೆ

ಶಾರಿಕ್‌ ಮಂಗಳೂರಿಗೆ ಬಂದು ಜನಜಂಗುಳಿ ಇರುವ ಪ್ರದೇಶದಲ್ಲಿ ಸ್ಪೋಟ ಮಾಡಬೇಕು ಎಂದು ಸಂಚು ಹೂಡಿದ್ದ. ಮೈಸೂರಿನಲ್ಲಿ ಅದಕ್ಕೆ ಬೇಕಾಗಿರುವ ಎಲ್ಲಾ ತಯಾರಿಗಳನ್ನು ಕೂಡ ನಡೆಸಿದ್ದ. ಇನ್ನೂ ಮೈಸೂರಿನಿಂದ ರೈಲಿನ ಮೂಲಕ ಮಂಗಳೂರಿಗೆ ಬಂದಿರುವ ಸಾಧ್ಯತೆಯಿದ್ದು, ಇದರ ಕುರಿತಾಗಿಯೂ ಪೊಲೀಸರಿಂದ ತನಿಖೆ ನಡೆಯುತ್ತಿದೆ

In the case of a mysterious explosion in an auto, information is being received every minute, now the police have taken the PFI leader Ijaz into custody after the cooker blast case.

Comments are closed.