Doctorate for Actor Ravichandran : ನಟ ರವಿಚಂದ್ರನ್​​ಗೆ ಗೌರವ ಡಾಕ್ಟರೇಟ್​ ಘೋಷಣೆ

ಬೆಂಗಳೂರು : Doctorate for Actor Ravichandran: ಸ್ಯಾಂಡಲ್​ವುಡ್​ ನಟ, ನಿರ್ದೇಶಕ ಹಾಗೂ ನಿರ್ಮಾಪಕ ವಿ.ರವಿಚಂದ್ರನ್​​ಗೆ ಬೆಂಗಳೂರು ವಿವಿ ಗೌರವ ಡಾಕ್ಟರೇಟ್​ ಘೋಷಣೆ ಮಾಡಿದೆ. ಏಪ್ರಿಲ್​ 11ರಂದು ಬೆಂಗಳೂರು ನಗರ ವಿಶ್ವವಿದ್ಯಾಲಯದ ಮೊದಲ ಘಟಿಕೋತ್ಸವ ನಡೆಯಲಿದ್ದು ಈ ಸಂಬಂಧ ಇಂದು ಸುದ್ದಿಗೋಷ್ಠಿ ನಡೆಸಿದ ವಿವಿ ಕುಲಪತಿ ಲಿಂಗರಾಜ ಗಾಂಧಿ ರವಿಚಂದ್ರನ್​ರಿಗೆ ಗೌರವ ಡಾಕ್ಟರೇಟ್​ ನೀಡುತ್ತಿರುವ ಬಗ್ಗೆ ಘೋಷಣೆ ಮಾಡಿದರು.


ಬೆಂಗಳೂರು ನಗರ ವಿವಿ ಮೊದಲ ಘಟಿಕೋತ್ಸವ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರ್​ ಗೆಹಲೋತ್​ ಕೂಡ ಭಾಗಿಯಾಗಲಿದ್ದಾರೆ. ಚಲನಚಿತ್ರ ರಂಗಕ್ಕೆ ನೀಡಿದ ಅಗಣ್ಯ ಸೇವೆಯನ್ನು ಪರಿಗಣಿಸಿ ರವಿಚಂದ್ರನ್​​ರಿಗೆ ಗೌರವ ಡಾಕ್ಟರೇಟ್​ ನೀಡಲಾಗುತ್ತಿದ್ದರೆ, ಸಮಾಜ ಸೇವೆಯ ವಿಭಾಗದಲ್ಲಿ ಆರ್​.ಜೆ. ಶಂಕರ್​ ಈ ಬಾರಿ ಗೌರವ ಡಾಕ್ಟರೇಟ್​ ಸ್ವೀಕರಿಸಲಿದ್ದಾರೆ. ಇನ್ನು ವೈದ್ಯಕೀಯ ಕ್ಷೇತ್ರದಲ್ಲಿನ ಅಪರಿಮಿತ ಸಾಧನೆಗೆ ಡಾ. ಸತ್ಯನಾರಾಯಣ ಗೌರವ ಡಾಕ್ಟರೇಟ್​ಗೆ ಭಾಜನರಾಗಲಿದ್ದಾರೆ.


ಈ ಕಾರ್ಯಕ್ರಮದಲ್ಲಿ ಒಟ್ಟು 41,768 ವಿದ್ಯಾರ್ಥಿಗಳು ಪದವಿಯನ್ನು ಸ್ವೀಕರಿಸಲಿದ್ದಾರೆ ಎಂದು ಬೆಂಗಳೂರು ವಿವಿ ಕುಲಪತಿ ಲಿಂಗರಾಜ ಗಾಂಧಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.

Shiva Rajkumar : ಶಿವರಾಜ್ ಕುಮಾರ್: ಶಕ್ತಿಧಾಮದ ಮಕ್ಕಳಲ್ಲಿ ಅಪ್ಪುನ ಕಾಣ್ತಾ ಇದ್ದೀನಿ !

ಮೈಸೂರಿನ ಶಕ್ತಿ ಧಾಮದ ಹೆಸರು ಹೇಳಿದರೆ ಸಾಕು ನಟ ಶಿವರಾಜ್ ಕುಮಾರ್ (Shiva Rajkumar) ಭಾವುಕರಾಗುತ್ತಾರೆ. ಅದರಲ್ಲೂ, ಪುನೀತ್ ನಿಧನದ ನಂತರ ಶಕ್ತಿ ಧಾಮದ ಒಡನಾಟ ಶಿವಣ್ಣ ಹೆಚ್ಚಿಸಿಕೊಂಡಿದ್ದಾರೆ. ಬೇಸರ ಎನಿಸಿದಾಗೆಲ್ಲ ಶಕ್ತಿಧಾಮಕ್ಕೆ ಹೋಗಿಬರುತ್ತಾರೆ. ಅಲ್ಲಿದ್ದರೆ ಏನೋ ನೆಮ್ಮದಿಯಂತೆ. ಪಾರ್ವತಮ್ಮ ರಾಜ್ ಕುಮಾರ್ ಇದ್ದಾಗ, ಶಕ್ತಿಧಾಮಕ್ಕೆ ಹೋಗಿ ಬಾರಯ್ಯಾ ಅಂದರೂ ಶಿವಣ್ಣ ಆ ಕಡೆ ತಲೆ ಹಾಕುತ್ತಿರಲಿಲ್ಲವಂತೆ.

‘ಹೌದು, ಅಮ್ಮಾಇದ್ದಾಗ ಹೇಳೋರು, ಹೋಗಿ ಬಾರೋ ಅಂತ. ಹಾಗೆಲ್ಲ ಏನೂ ಅನಿಸ್ತಾ ಇರಲಿಲ್ಲ. ಹಾಗಂತ ನಾನು ಶಕ್ತಿಧಾಮಕ್ಕೆ ಹೋಗಬಾರದು ಅಂತಲ್ಲ. ಆದರೂ, ಅಮ್ಮ ಹೇಳೋರು, ಹೋಗಲಿ ಬಿಡು, ನಿನಗೆ ಯಾವಾಗ ಹೋಗಬೇಕು ಅನಿಸುತ್ತೋ ಆಗ ಹೋಗು ಅನ್ನೋರು. ನಾನು ಶಕ್ತಿಧಾಮನ ಬಹಳಮಿಸ್ ಮಾಡ್ಕೊಂಡು ಬಿಟ್ಟೆ’ ಶಿವಣ್ಣ ಹೀಗೆ ಭಾವುಕರಾಗಿ ಮೈಸೂರಿನ ಶಕ್ತಿಧಾಮ ಕಾರ್ಯಕ್ರಮದಲ್ಲಿ ಹೇಳಿದರು.

‘ಈಗ ನನಗೆ ಬೇಸರ ಅನಿಸಿದರೆ ಅಥವಾ ಮೈಸೂರಿನಲ್ಲಿ ಶೂಟಿಂಗ್ ಏನಾದರು ಇದ್ದರೆ ಮಿಸ್ ಮಾಡದೆ ಶಕ್ತಿಧಾಮಕ್ಕೆ ಬರ್ತೀನಿ. 8 ತಿಂಗಳಲ್ಲಿ ಲೆಕ್ಕವಿಲ್ಲದಷ್ಟು ಸಲ ಬಂದಿದ್ದೀನಿ. ನಿಜ ಹೇಳಬೇಕಾದರೆ, ಶಕ್ತಿಧಾಮದ ಮಕ್ಕಳಲ್ಲಿ ಅಪ್ಪು ಕಾಣ್ತಾ ಇದ್ದೀನಿ. ಇಲ್ಲಿಗೆ ಬಂದರೆ ಏನೋ ನೆಮ್ಮದಿ’ ಎಂದರು. ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಸಿ.ಎಂ ಅವರನ್ನು ಉದ್ದೇಶಿಸಿ ಶಿವಣ್ಣ ಮಾತನಾಡಿ, ‘ನಾನು ಈ ರೀತಿಯ ಮುಖ್ಯಮಂತ್ರಿಯನ್ನು ನೋಡಲೇ ಇಲ್ಲ. ಅವರ ಸರ್ಕಾರ ನಮಗೆ ಸಾಕಷ್ಟು ಭರವಸೆಗಳನ್ನು ನೀಡಿದೆ. ನಮಗೆ ಅದ್ಬುತ ಪ್ರತಿಕ್ರಿಯೆ ನೀಡಿ ಸಹಕರಿಸಿದ್ದಾರೆ. ನಮ್ಮ ಕುಟುಂಬದ ಮೇಲೆ ಸಿಕ್ಕಾಪಟ್ಟೆ ಮಮತೆ’ ಎಂದು ಹೊಗಳಿದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, ‘ಅಪ್ಪುಗೆ ತಾಯಿ ಕರುಳು ಇತ್ತು. ಹಾಗಾಗಿ, ಇಷ್ಟೊಂದು ಜನಕ್ಕೆ ಸಹಾಯ ಮಾಡಿದ್ದರು. ಶಿವಣ್ಣ ಈಗ ಶಕ್ತಿಧಾಮ ಮುನ್ನಡೆಸುತ್ತಿರುವುದು ಖುಷಿಯ ವಿಚಾರ. ನಮ್ಮ ಸರ್ಕಾರದಿಂದ ಶಕ್ತಿಧಾಮಕ್ಕೆ ಎಲ್ಲ ನೆರವು ನೀಡಲು ನಮ್ಮ ಸರ್ಕಾರ ಸಿದ್ಧ’ ಎಂದರು.

ಇದನ್ನು ಓದಿ : actress rashmika mandanna : ರಶ್ಮಿಕಾ ಮಂದಣ್ಣ ವಿವಾಹದ ಬಳಿಕ ವಿಚ್ಛೇದನ ಪಡೆಯುತ್ತಾರೆ:ವೇಣುಸ್ವಾಮಿ

ಇದನ್ನೂ ಓದಿ : Wedding Dance : ತಂಗಿ ಮದುವೆಯಲ್ಲಿ ಅಣ್ಣಂದಿರ ಭರ್ಜರಿ ಡ್ಯಾನ್ಸ್‌ : ವೈರಲ್‌ ಆಯ್ತು ಉಡುಪಿಯ ಮದುವೆ ವಿಡಿಯೋ

Announcement of Honorary Doctorate for Actor Ravichandran

Comments are closed.