Uttar Pradesh Crime : ರಸಗುಲ್ಲಾ ವಿಚಾರಕ್ಕೆ ಆರಂಭವಾದ ಜಗಳ ಕೊಲೆಯಲ್ಲಿ ಅಂತ್ಯ

ಮೈನ್‌ಪುರಿ : ಉತ್ತರ ಪ್ರದೇಶದ (Uttar Pradesh Crime)‌ ಮೈನ್‌ಪುರಿ ಜಿಲ್ಲೆಯ ಬಿಕಾಪುರ ಗ್ರಾಮದಲ್ಲಿ ಗುರುವಾರ ನಡೆದ ಮದುವೆ ಆರತಕ್ಷತೆ ಕಾರ್ಯಕ್ರಮದಲ್ಲಿ ರಸಗುಲ್ಲ ವಿಚಾರವಾಗಿ ಗಲಾಟೆ ನಡೆದಿದ್ದು ಅದು ಕೊಲೆಯಲ್ಲಿ ಅಂತ್ಯವಾಗಿದೆ. ರಸಗುಲ್ಲದ ವಿಚಾರವಾಗಿ ನಡೆದ ಗಲಾಟೆಯಲ್ಲಿ ವ್ಯಕ್ತಿಯೊಬ್ಬನನ್ನು ನಾಲ್ಕು ಜನರು ಹೊಡೆದು ಹತ್ಯೆ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ಮೃತರನ್ನು ರಣವೀರ್ ಸಿಂಗ್ (53 ವರ್ಷ ) ಎಂದು ಗುರುತಿಸಲಾಗಿದೆ. ಒಂದು ಬಕೆಟ್‌ ಪೂರ್ತಿ ರಸಗುಲ್ಲವನ್ನು ಕದ್ದುಕೊಂಡು ಹೋಗುತ್ತಿದ್ದಾಗ, ಅದನ್ನು ಕಂಡ ವರನ ಕಡೆಯವರು ವಧುವಿನ ಸಂಬಂಧಿಗೆ ಪ್ರಶ್ನಿಸಿದ್ದಾರೆ. ಆಗ ಮಾತಿಗೆ ಮಾತು ಬೆಳೆದು ಗುಂಪುಗಳಾಗಿ ಗಲಾಟೆ ಬೇರೆಯ ಸ್ಥಿತಿಗೆ ತಲುಪಿದ್ದು ಹೊಡೆದಾಡಿಕೊಂಡಿದ್ದಾರೆ. ವಧುವಿನ ಸಂಬಂಧಿ ಹರಿಯಾಣದ ಮೂಲದ 50 ವರ್ಷದ ರಣವೀರ್‌ ಸಿಂಗ್‌ ಮೃತ ವ್ಯಕ್ತಿ. ಈತನ ಮೇಲೆ ದೊಣ್ಣೆ ಹಾಗೂ ಕಬ್ಬಿಣದ ರಾಡ್‌ಗಳಿಂದ ಹಲ್ಲೆ ಮಾಡಲಾಗಿದೆ. ಇನ್ನೊಂದೆಡೆ ಈತನ ಸಹೋದರ ಸಂಬಂಧಿ ರಾಮ್‌ ಕಿಶೋರ್‌ ಮೇಲೆಯೂ ಹಲ್ಲೆ ಮಾಡಲಾಗಿದೆ. ಹಲ್ಲೆ ಮಾಡಿದ ವ್ಯಕ್ತಿಗಳನ್ನು ರಜತ್‌, ಅಜಯ್‌, ಸತ್ಯಭಾನ್‌ ಹಾಗೂ ಭರತ್‌ ಎಂದು ಗುರುತಿಸಲಾಗಿದೆ. ಇವರೆಲ್ಲರೂ ಬಿಕಾಪುರ ಗ್ರಾಮದ ನಿವಾಸಿಗಳಾಗಿದ್ದಾರೆ. ಗಂಭೀರವಾಗಿ ಗಾಯಗೊಂಡ ರಾಮ್‌ ಕಿಶೋರ್‌ನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಇದನ್ನೂ ಓದಿ : Bulgaria News : ಬಲ್ಗೇರಿಯಾದಲ್ಲಿ ಹಳ್ಳಕ್ಕೆ ತಳ್ಳಿದ ಟ್ರಕ್‌ನಲ್ಲಿ 18 ವಲಸಿಗರು ಶವವಾಗಿ ಪತ್ತೆ

ಇದನ್ನೂ ಓದಿ : Unnao : ಬರ್ತಡೇ ಪಾರ್ಟಿಗೆ ಬಂದ ಡ್ಯಾನ್ಸರ್‌ ಮೇಲೆ 6 ಮಂದಿಯಿಂದ ಸಾಮೂಹಿಕ ಅತ್ಯಾಚಾರ

ಇದನ್ನೂ ಓದಿ : Sexual harrasment on girls: ಅಪ್ರಾಪ್ತ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ: 4 ಮಂದಿ ವಿರುದ್ಧ ಪ್ರಕರಣ

ಮೊದಲಿಗೆ ಸಿಹಿ ತಿನಿಸು ರಸಗುಲ್ಲದ ವಿಚಾರವಾಗಿ ವಧು ಹಾಗೂ ವರನ ಕಡೆಯವರ ನಡುವೆ ಜಗಳ ಶುರುವಾಗಿದ್ದು ಬಳಿಕ ಅದು ವಿಕೋಪಕ್ಕೆ ತಿರುಗಿ ಒಬ್ಬರಿಗೊಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ವಧುವಿನ ಕಡೆಯ 50 ವರ್ಷದ ಸಂಬಂಧಿಯೊಬ್ಬರು ಮೃತಪಟ್ಟಿದ್ದಾರೆ. ಹಾಗೂ ವಧುವಿನ ತಾಯಿಯ ಸಂಬಂಧಿಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಇದೀಗ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಖಾಸಗಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.

Uttar Pradesh Crime: A fight that started over the Rasgulla issue ended in murder

Comments are closed.