Anurag Kashyap: ಕಾಂತಾರ ಸಿನಿಮಾ ಸಕ್ಸಸ್ ಆಯ್ತು ಅಂತ ರಿಷಬ್ ಶೆಟ್ಟಿ ‘ಆ’ ತಪ್ಪನ್ನು ಮಾಡಬಾರದು; ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ ವಾರ್ನಿಂಗ್

ಮುಂಬೈ; Anurag Kashyap: ಕಾಂತಾರ ಸಿನಿಮಾ ಇಡೀ ಚಿತ್ರರಂಗದಲ್ಲೇ ಹವಾ ಸೃಷ್ಟಿಸಿದ್ದು ಸುಳ್ಳಲ್ಲ. ಇದೀಗ ಕಾಂತಾರ- 2 ಸಿನಿಮಾ ಕೂಡಾ ಬರಲಿದ್ದು, ರಿಷಬ್ ಶೆಟ್ಟಿ ಟೀಂ ಅದರ ತಯಾರಿಯಲ್ಲೇ ತೊಡಗಿದ್ದಾರೆ. ಈ ನಡುವೆ ಬಾಲಿವುಡ್ ನ ಹೆಸರಾಂತ ನಿರ್ದೇಶಕ ಅನುರಾಗ್ ಕಶ್ಯಪ್ ಕಾಂತಾರ ಸಿನಿಮಾದ ಬಗ್ಗೆ ಪ್ರಸ್ತಾಪ ತೆಗೆದಿದ್ದು, ರಿಷಬ್ ಶೆಟ್ಟಿಗೆ ಕೆಲವೊಂದು ಸಲಹೆಗಳನ್ನು ನೀಡಿದ್ದಾರೆ.

ಅನುರಾಗ್ ಕಶ್ಯಪ್ ಅವರು ಪ್ಯಾನ್ ಇಂಡಿಯಾ ಸಿನಿಮಾ ಹಾಗೂ ಬಿಗ್ ಬಜೆಟ್ ಸಿನಿಮಾಗಳ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ ಆಂಗ್ಲಭಾಷೆಗೆ ನೀಡಿರುವ ಇಂಟರ್ ವ್ಯೂನಲ್ಲಿ ಅವರು ಮಾತನಾಡಿರುವ ವಿಚಾರಗಳು ಇದೀಗ ಸುದ್ದಿಯಾಗಿದೆ. ಸಂದರ್ಶನದಲ್ಲಿ ಮರಾಠಿಯ ಸೂಪರ್ ಹಿಟ್ ಸಿನಿಮಾ ಸೈರಾಟ್ ಹೇಗೆ ಇಡೀ ಮರಾಠಿ ಸಿನಿರಂಗವನ್ನು ನಾಶಪಡಿಸಿತು ಎಂಬ ಬಗ್ಗೆ ಅವರು ಹೇಳಿದ್ದಾರೆ. ರಿಷಬ್ ಶೆಟ್ಟಿ ಕೂಡಾ ಕಾಂತಾರ ಸಕ್ಸಸ್ ಬಳಿಕ ಅದೇ ತಪ್ಪನ್ನು ಮಾಡಬಾರದು ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ: Abhishek- Aviva Engagement: ನಾಳೆ ಅಭಿಷೇಕ್ ಅಂಬರೀಶ್ – ಅವೀವಾ ಬಿದ್ದಪ್ಪ ಎಂಗೇಜ್ ಮೆಂಟ್; ಖಾಸಗಿ ಹೋಟೆಲ್ ನಲ್ಲಿ ಅದ್ಧೂರಿ ಕಾರ್ಯಕ್ರಮ

ಕನ್ನಡದ ಕಾಂತಾರ ಹಾಗೂ ಮರಾಠಿಯ ಸಿನಿಮಾವನ್ನು ಹೋಲಿಕೆ ಮಾಡಿ ಅವರು ಮಾತನಾಡಿದ್ದಾರೆ. ಮರಾಠಿಯ ಸೈರಾಟ್ ಸೂಪರ್ ಸಕ್ಸಸ್ ಇಡೀ ಮರಾಠಿ ಚಿತ್ರರಂಗವನ್ನು ಹೇಗೆ ನಾಶಪಡಿಸಿತು ಎಂದು ನಿರ್ದೇಶಕ ನಾಗರಾಜ್ ಮಂಜುಳೆ ಹೇಳಿದ್ದರು. ಕಾಂತಾರ ಕೂಡಾ ಅದೇ ಸಕ್ಸಸ್ ಕಂಡಿದ್ದು ರಿಷಬ್ ಶೆಟ್ಟಿ ಅದೇ ತಪ್ಪನ್ನು ಮಾಡಬಾರದು ಎಂದು ಅವರು ಹೇಳಿದರು. ಕಡಿಮೆ ಬಜೆಟ್ ಸಿನಿಮಾದಿಂದಲೂ ದೊಡ್ಡಮಟ್ಟದಲ್ಲಿ ಹಣ ಗಳಿಸಬಹುದು ಎಂದು ಸೈರಾಟ್ ಸಿನಿಮಾ ತೋರಿಸಿಕೊಟ್ಟಿತ್ತು. ಆ ಬಳಿಕ ಇದ್ದಕ್ಕಿದ್ದಂತೆ ಉಮೇಶ್ ಕುಲಕರ್ಣಿ ಸೇರಿದಂತೆ ಅನೇಕ ನಿರ್ದೇಶಕರು ಸಿನಿಮಾ ಮಾಡುವುದನ್ನೇ ನಿಲ್ಲಿಸಿದರು. ಕಾರಣ ಎಲ್ಲರೂ ಸೈರಾಟ್ ಸಿನಿಮಾವನ್ನೇ ಅನುಕರಿಸಲು ಮುಂದಾದರು ಎಂದು ಅನುರಾಗ್ ಕಶ್ಯಪ್ ತಿಳಿಸಿದರು.

ಕಾಂತಾರ ಸಕ್ಸಸ್ ಬಳಿಕ ರಿಷಬ್ ಶೆಟ್ಟಿ ತನ್ನ ಪಥವನ್ನು ಬದಲಿಸಿದರೆ, ಅಂದರೆ ಬಾಕ್ಸ್ ಆಫೀಸ್ ಮೇಲೆ ಕಣ್ಣಿಟ್ಟು ದೊಡ್ಡ ಬಜೆಟ್ ಸಿನಿಮಾ ಮಾಡಲು ಮುಂದಾದರೆ ದೊಡ್ಡ ಸಮಸ್ಯೆ ಉಂಟಾಗುತ್ತದೆ ಎಂದು ರಿಷಬ್ ಶೆಟ್ಟಿಗೆ ಅನುರಾಗ್ ಕಶ್ಯಪ್ ಎಚ್ಚರಿಕೆಯನ್ನು ನೀಡಿದರು.

ಅಮೆರಿಕಾದ ಖ್ಯಾತ ಸಿನಿಮಾ ನಿರ್ದೇಶಕ ಜೇಸನ್ ಬ್ಲಮ್ ಅವರನ್ನೇ ಉದಾಹರಣೆಯಾಗಿ ತೆಗೆದುಕೊಂಡು ಮಾತನಾಡಿದ ಅನುರಾಗ್ ಕಶ್ಯಪ್ ಅವರು, ಕಡಿಮೆ ಬಜೆಟ್ ನಲ್ಲಿ ಸಿನಿಮಾ ಮಾಡಿ ಯಶಸ್ಸು ಕಂಡ ಬಳಿಕವೂ ಅವರು ತಮ್ಮ ದಾರಿಯನ್ನು ಬದಲಾಯಿಸಿಲ್ಲ. ಕಡಿಮೆ ಬಜೆಟ್ ನಲ್ಲಿ ಹಾರರ್ ಸಿನಿಮಾ ಮಾಡಿ ಸಕ್ಸಸ್ ಪಡೆದ ಬಳಿಕವೂ ಅವರು ಬಿಗ್ ಬಜೆಟ್ ಸಿನಿಮಾ ಮಾಡಲು ನಿರಾಕರಿಸಿದ್ದರು. ಇಂದಿಗೂ ಅತಿ ಕಡಿಮೆ ಬಜೆಟ್ ಸಿನಿಮಾಗಳನ್ನೇ ಅವರು ಮಾಡುತ್ತಿದ್ದಾರೆ ಎಂದು ಅನುರಾಗ್ ಕಶ್ಯಪ್ ತಿಳಿಸಿದರು.

ಇದನ್ನೂ ಓದಿ: Sulochana Chavan Passes Away:ಲಾವಣಿಗಳ ಖ್ಯಾತಿ ಪಡೆದ ಗಾಯಕಿ ಸುಲೋಚನಾ ಚವಾಣ್ ನೆನಪು ಮಾತ್ರ

ಅತೀ ಯಶಸ್ಸು ಕಂಡಿದ್ದ ಸೈರಾಟ್ ಹಾಗೂ ಕಾಂತಾರ ಸಿನಿಮಾಗಳು:

2016ರಲ್ಲಿ ರಿಲೀಸ್ ಆಗಿದ್ದ ಮರಾಠಿಯ ಸೈರಾಟ್ ಸಿನಿಮಾ ಕೇವಲ 4 ಕೋಟಿ ಬಜೆಟ್ ನಲ್ಲಿ ನಿರ್ಮಾಣಗೊಂಡಿತ್ತು. ಆದರೆ ಬಾಕ್ಸಾಫೀಸ್ ನಲ್ಲಿ 110 ಕೋಟಿ ರೂ. ಕಲೆಕ್ಷನ್ ಮಾಡಿತ್ತು. ಅದೇ ರೀತಿ ಕಾಂತಾರ ಸಿನಿಮಾವು 16 ಕೋಟಿ ರೂ. ಬಜೆಟ್ ನಲ್ಲಿ ತಯಾರಾಗಿ 400 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿದೆ.

Anurag Kashyap: Anurag Kashyap warns Rishab Shetty not to make the same mistake as Sairat after Kantara success

Comments are closed.