12 ಕಿ.ಮೀ ರಸ್ತೆಗೆ ಅಪ್ಪು ಹೆಸರು : ಟ್ವೀಟ್ ಮಾಡಿ ಪ್ರಶಂಸಿದ ಸಂಸದೆ ಸುಮಲತಾ

ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಮ್ಮನ್ನಗಲಿದ ಬಳಿಕ ಅವರು ಮಾಡಿದ್ದ ಅಪಾರ ಸಮಾಜಸೇವೆ ಹಾಗೂ ಒಳ್ಳೆಯ ಕೆಲಸಗಳನ್ನು ಪರಿಗಣಿಸಿ ಅವರಿಗೆ ಕರ್ನಾಟಕ ರಾಜ್ಯ ಸರಕಾರ ಪ್ರತಿಷ್ಠಿತ ಕರ್ನಾಟಕ ರತ್ನ (MP Sumalatha) ಗೌರವವನ್ನು ನೀಡಿತ್ತು. ಅಲ್ಲದೇ ಪುನೀತ ನಮನ ಕಾರ್ಯಕ್ರಮವನ್ನು ಆಯೋಜಿಸಿ ಗೌರವ ಸಲ್ಲಿಸಲಾಗಿತ್ತು, ಅಪ್ಪು ಹೆಸರಿನಲ್ಲಿ ಹಲವಾರು ಉದ್ಯಾನವನಗಳು, ರಸ್ತೆಗಳು ಹಾಗೂ ವೃತ್ತಗಳನ್ನು ನಿರ್ಮಿಸಲಾಯಿತು.

ಹೀಗೆ ಅಗಲಿದ ಅಭಿಮಾನಿಗಳ ಆರಾಧ್ಯದೈವ ಪುನೀತ್ ರಾಜ್‌ಕುಮಾರ್ ಅವರ ಹೆಸರನ್ನು ಜೀವಂತವಾಗಿರಿಸಲಾಗಿದ್ದು, ಇದೀಗ ಬೆಂಗಳೂರಿನ ರಿಂಗ್ ರೋಡ್ ಒಂದಕ್ಕೆ ಪುನೀತ್ ರಾಜ್‌ಕುಮಾರ್ ಹೆಸರನ್ನು ಇಡುವ ಮೂಲಕ ಮತ್ತೊಮ್ಮೆ ಪುನೀತ್ ರಾಜ್‌ಕುಮಾರ್ ಅವರಿಗೆ ದೊಡ್ಡ ಗೌರವವನ್ನು ಸಲ್ಲಿಸಿದೆ ರಾಜ್ಯ ಸರಕಾರ. ಇದೀಗ ಸರಕಾರದ ಈ ಕಾರ್ಯಕ್ಕೆ ಸಂಸದೆ ಸುಮಲತಾ ಕೂಡ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.

ಹೌದು, ಮೈಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆಯವರೆಗಿನ 12 ಕಿಲೋಮೀಟರ್ ಉದ್ದದ ರಿಂಗ್ ರಸ್ತೆಗೆ ಪುನೀತ್ ರಾಜ್‌ಕುಮಾರ್ ರಸ್ತೆ ಎಂದು ಈ ಹಿಂದೆಯೇ ಹೆಸರಿಡುವುದಾಗಿ ಘೋಷಿಸಿದ್ದ ರಾಜ್ಯ ಸರಕಾರ ಇಂದು ( ಫೆಬ್ರವರಿ 7 ) ಆ ರಸ್ತೆಯನ್ನು ಉದ್ಘಾಟಿಸಿದೆ. ರಾಜ್ಯದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಈ ರಸ್ತೆಯನ್ನು ಉದ್ಘಾಟಿಸಿದ್ದು, ಅಪ್ಪು ಅಭಿಮಾನಿಗಳು ಹಾಗೂ ಕನ್ನಡಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Raveena Tandon : “ಚೂರು ಬಟ್ಟೆ ಹರಿಯದೇ ಬಲತ್ಕಾರದ ಸನ್ನಿವೇಶದಲ್ಲಿ ನಟಿಸಿದವಳು ನಾನೊಬ್ಳೆ”: ರವೀನಾ ಟಂಡನ್

ಇದನ್ನೂ ಓದಿ : ಬಾಲಿವುಡ್‌ ನವದಂಪತಿಗಳಾದ ಸಿದ್ಧಾರ್ಥ್,ಕಿಯಾರಾ ಜೋಡಿ ಬಗ್ಗೆ ಭವಿಷ್ಯ ನುಡಿದ ಜ್ಯೋತಿಷಿ

ಇದನ್ನೂ ಓದಿ : Vijay Surya : ಸಂಗೀತಗಾರನಾಗಿ ಕಿರುತೆರೆಗೆ ಮರಳಿದ ಅಗ್ನಿಸಾಕ್ಷಿಯ ವಿಜಯ ಸೂರ್ಯ

ಇನ್ನು ಇದರ ಕುರಿತು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಸಹ ಟ್ವೀಟ್ ಮಾಡಿ ಪ್ರತಿಕ್ರಿಯಿಸಿದ್ದು, “ಅಪ್ಪು ಹೆಸರನ್ನು 12 ಕಿ.ಮೀ ರಿಂಗ್ ರಸ್ತೆಗೆ ಇಡುತ್ತಿರುವ ಸರಕಾರದ ನಿರ್ಧಾರವನ್ನು ಹೃತ್ಪೂರ್ವಕವಾಗಿ ಪ್ರಶಂಸಿಸುವೆ.ಅಪ್ಪು ನಮ್ಮೆಲ್ಲರ ಹೃದಯಕ್ಕೆ ಹತ್ತಿರವಾಗಿದ್ದವರು. ಇದೀಗ ನಮ್ಮ ಮನೆಗೂ ಬಂದಿದ್ದಾರೆ. ಮುಖ್ಯ ಮಂತ್ರಿಗಳಾದ ಬಸವರಾಜ್ ಬೊಮ್ಮಾಯಿ, ಕಂದಾಯ ಸಚಿವರಾದ ಆರ್ ಅಶೋಕ್ ಮತ್ತು ಚಲನಚಿತ್ರ ವಾಣಿಜ್ಯ ಮಂಡಳಿಯ ಸರ್ವರಿಗೂ ಧನ್ಯವಾದಗಳು” ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ : ಪಠಾಣ್ ಒಟಿಟಿ ರಿಲೀಸ್ ಡೇಟ್ ಫಿಕ್ಸ್: ಅಮೆಜಾನ್ ಪ್ರೈಮ್ ನಲ್ಲಿ ಯಾವಾಗ ಬರಲಿದೆ ಗೊತ್ತಾ ?

ಇದನ್ನೂ ಓದಿ : ಕಿಯಾರಾ ಅಡ್ವಾಣಿ – ಸಿದ್ಧಾರ್ಥ್ ಮಲ್ಹೋತ್ರಾ ದಂಪತಿಗಳ ಹಳದಿ ಶಾಸ್ತ್ರದ ವಿಡಿಯೋ ಸಖತ್‌ ವೈರಲ್

Appu name for 12 km road: MP Sumalatha praised by tweeting

Comments are closed.