ಹುಡುಗಿಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು ಮರಕ್ಕೆ ಕಟ್ಟಿ ಮೂತ್ರ ಕುಡಿಸಿದ ಗ್ರಾಮಸ್ಥರು

ಜೋಧ್‌ಪುರ: ಬಾಲಕಿಯನ್ನು ಭೇಟಿಯಾಗಲು ಬಂದಿದ್ದ ಯುವಕನನ್ನು (Assault on young man) ಹಿಡಿದು ಗ್ರಾಮಸ್ಥರ ಗುಂಪೊಂದು ಮರಕ್ಕೆ ಕಟ್ಟಿ, ಥಳಿಸಿ, ಬಾಯಿಗೆ ಮೂತ್ರ ಸುರಿದಿರುವ ಘಟನೆ ರಾಜಸ್ಥಾನದ ಜಲೋರ್‌ ಜಿಲ್ಲೆಯಲ್ಲಿ ನಡೆದಿದೆ. ಹಲ್ಲೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಹಿನ್ನಲೆಯಲ್ಲಿ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ.

ಭಾನುವಾರ ರಾತ್ರಿ ಹುಡುಗಿಯನ್ನು ಭೇಟಿಯಾಗಲೆಂದು ಯುವಕನೋರ್ವ ಹತ್ತಿರದ ಹಳ್ಳಿಗೆ ಬಂದಿದ್ದನು. ಗ್ರಾಮಸ್ಥರು ಮತ್ತು ಬಾಲಕಿಯ ಕುಟುಂಬಸ್ಥರು ಆತನನ್ನು ಹಿಡಿದು ಮರಕ್ಕೆ ಕಟ್ಟಿದ್ದು, ನಂತರ ಅಮಾನುಷವಾಗಿ ಥಳಿಸಿದ್ದಾರೆ. ಈ ಬಗ್ಗೆ ಮಾಹಿತಿ ಪಡೆದ ಆತನ ಕುಟುಂಬದ ಸದಸ್ಯರು ಕೂಡ ಸ್ಥಳಕ್ಕೆ ಆಗಮಿಸಿ ಆತನನ್ನು ರಕ್ಷಿಸುವಂತೆ ಮನವಿ ಮಾಡಿದರು. ಆದರೆ ಗ್ರಾಮಸ್ಥರು ಆತನಿಗೆ ಎಚ್ಚರಿಕೆ ನೀಡಿದ್ದು, ಆತನನ್ನು ಬಿಡುವ ಮುನ್ನ ಆತನ ಬಾಯಿಗೆ ಮೂತ್ರ ಸುರಿದಿದ್ದಾರೆ ಎಂದು ಆತನ ಕುಟುಂಬಸ್ಥರು ಆರೋಪಿಸಿದ್ದಾರೆ.

ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿ (ಜಲೋರ್) ಹರ್ಷವರ್ಧನ್ ಅಗರ್‌ವಾಲಾ ಹೇಳಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗುತ್ತಿದ್ದಂತೆಯೇ ಪೊಲೀಸರು ಆರು ಮಂದಿಯನ್ನು ಬಂಧಿಸಿದ್ದಾರೆ. ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯ್ದೆಯಡಿಯೂ ಆರೋಪಿಗಳ ವಿರುದ್ಧ ಪ್ರಕರಣವನ್ನು ದಾಖಲಿಸಿದ್ದಾರೆ.

ಇದನ್ನೂ ಓದಿ : Constable committed suicide: ಕುಂದಾಪುರ ಪೊಲೀಸ್ ಠಾಣೆಯ ಕಾನ್ಸ್ಟೇಬಲ್‌ ನೇಣು ಬಿಗಿದುಕೊಂಡು ಆತ್ಮಹತ್ಯೆ

ಇದನ್ನೂ ಓದಿ : Threatening call for mumbai airport: ಮುಂಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬೆದರಿಕೆ ಕರೆ : ಹೈಅಲರ್ಟ್ ಘೋಷಣೆ

ಇದನ್ನೂ ಓದಿ : Kerala student died: ಚಲಿಸುತ್ತಿದ್ದ ಬಸ್‌ ನಿಂದ ಬಿದ್ದು ವಿದ್ಯಾರ್ಥಿ ಸಾವು

ಯುವಕ ಭೇಟಿಯಾಗಲು ಹೋಗಿದ್ದ ಹುಡುಗಿ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿಯಲ್ಲಿ ದೂರು ದಾಖಲಿಸಿದ್ದಾರೆ. ಆಕೆಯ ಹೇಳಿಕೆಯನ್ನು ದಾಖಲಿಸಿದ ನಂತರ ಮುಂದಿನ ತನಿಖೆಯನ್ನು ಪ್ರಾರಂಭಿಸಲಾಗುವುದು ಎಂದು ಶ್ರೀ ಅಗರ್‌ವಾಲಾ ಹೇಳಿದರು.

ಇದನ್ನೂ ಓದಿ : Kerala student died: ಚಲಿಸುತ್ತಿದ್ದ ಬಸ್‌ ನಿಂದ ಬಿದ್ದು ವಿದ್ಯಾರ್ಥಿ ಸಾವು

Assault on young man : Villagers tied a young man to a tree and made him drink urine after coming to meet a girl

Comments are closed.