Gandhadagudi Trailer Release : ಅಪ್ಪು ಅಭಿನಯದ ‘ಗಂಧದಗುಡಿ’ ಟ್ರೇಲರ್ ಗ್ರ್ಯಾಂಡ್‌ ರೀಲಿಸ್‌

ಕರ್ನಾಟಕ ರತ್ನ ಡಾ. ಪುನೀತ್‌ ರಾಜ್‌ಕುಮಾರ್‌ ಅಭಿನಯದ ಕೊನೆಯ ಸಿನಿಮಾ “ಗಂಧದಗುಡಿ” (Gandhadagudi Trailer Release)ಸಾಕ್ಷ್ಯಚಿತ್ರದ ಟ್ರೈಲರ್‌ ಅದ್ದೂರಿಯಾಗಿ ರೀಲಿಸ್‌ ಆಗಿದೆ. ಅಭಿಮಾನಿಗಳಲ್ಲಿ ಕುತೂಹಲ ಮೂಡಿಸಿದ್ದ ಗಂಧದಗುಡಿ, ಇಂದು ಬೆಳಿಗ್ಗೆ 9.45ಕ್ಕೆ ಬೆಂಗಳೂರಿನ ನರ್ತಕಿ ಚಿತ್ರಮಂದಿರದಲ್ಲಿ ನಟ ಅಪ್ಪು ಅಭಿನಯದ ಕನಸಿನ ಪ್ರಾಜೆಕ್ಟ್‌ ಆಗಿರುವ “ಗಂಧದಗುಡಿ” ಸಿನಿಮಾದ ಸಾಕ್ಷ್ಯಚಿತ್ರ ಟ್ರೈಲರ್‌ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ರೀಲಿಸ್‌ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ದೊಡ್ಮನೆ ಮಂದಿ ಸೇರಿದಂತೆ ಹಲವು ಮಂದಿ ಭಾಗಿಯಾಗಿದ್ದಾರೆ. ಗಂಧದ ಗುಡಿ ಟ್ರೇಲರ್‌ನ್ನು ವಿಕ್ಷೀಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಹಾಗೂ ರಾಘಣ್ಣ ದಂಪತಿಗಳು ಭಾವುಕರಾದರು.

(Gandhadagudi Trailer Release ) ಆದ್ರೆ ಪುನೀತ್ ರಾಜ್ ಕುಮಾರ್ ನಟನೆಯ ಕೊನೆಯ ಸಿನಿಮಾದ ಟ್ರೇಲರ್ ನೋಡಿದ ಅಭಿಮಾನಿಗಳು ನೆಚ್ಚಿನ ನಟನನ್ನು ಕಂಡು ಸಂಭ್ರಮಿಸಿದ್ದಾರೆ. ಸಿನಿಮಾ ರಂಗದಲ್ಲಿ ಸಾಕಷ್ಟು ಕನಸು ಕಂಡಿದ್ದ ಅಪ್ಪು ಅಗಲಿಕೆಯ ಬಗ್ಗೆ ಅಭಿಮಾನಿಗಳು ಭಾವುಕರಾಗಿದ್ದಾರೆ. ಪಿಆರ್‌ಕೆ ಪ್ರೋಡಕ್ಷನ್ಸ್‌ ಅಡಿಯಲ್ಲಿ ನಿರ್ಮಾಣಗೊಂಡಿರುವ “ಗಂಧದಗುಡಿ” ಟ್ರೈಲರ್‌ ಅದ್ಬುತವಾಗಿ ಮೂಡಿಬಂದಿದೆ. “ಕರ್ನಾಟಕದ ಕಾಡು ಉಳಿಸಿ” ಎಂಬ ಡಾ.ರಾಜ್‌ಕುಮಾರ್‌ ಸಂದೇಶದ ಮರುಹುಟ್ಟು ಪುನೀತ್‌ ಅಭಿನಯದ ಗಂಧದ ಗುಡಿ ಸಿನಿಮಾ ಕಥೆಯ ಸೀಕ್ರೆಟ್‌ ಆಗಿದೆ.”ನಾನು ಪವರ್‌ಸ್ಟಾರ್‌ ಅಲ್ಲ,ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತೀನಿ ಎಂದು ಹೇಳಿ “ಪವರ್‌ ಸ್ಟಾರ್‌” ಎನ್ನುವುದನ್ನು ಬದಿಗೆ ಇರಿಸಿ ದಿವಂಗತ ನಟ ಪುನೀತ್‌ ರಾಜ್‌ಕುಮಾರ್‌ ನಟಿಸಿದ “ಗಂಧದಗುಡಿ”ಸಿನಿಮಾದ ಕಥೆ, ನಿರ್ಮಾಣ ಹಾಗೂ ಪುನೀತ್‌ ನಟನೆ ಕುರಿತು ಚಿತ್ರದ ನಿರ್ದೇಶಕ ವೈಲ್ಡ್‌ ಖ್ಯಾತಿಯ ಅಮೋಘವರ್ಷ ಮಾತನಾಡಿದ್ದಾರೆ.

ಇದನ್ನೂ ಓದಿ : Gandhadagudi : ಅಪ್ಪು ಅಭಿನಯದ “ಗಂಧದಗುಡಿ” ಟ್ರೇಲರ್‌ ರೀಲಿಸ್‌ : ದಿನಾಂಕ ಘೋಷಿಸಿದ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌

ಇದನ್ನೂ ಓದಿ : Rashmika Mandanna : ‘ಶೂಟಿಂಗ್​ ಸೆಟ್​ನಲ್ಲಿ ರಣಬೀರ್​ ಕಪೂರ್​ ನನ್ನನ್ನು ಅಳುವಂತೆ ಮಾಡಿದ್ದರು’ : ರಶ್ಮಿಕಾ ಮಂದಣ್ಣ

ಸಾಮಾನ್ಯವಾಗಿ ಡಾಕ್ಯುಮೆಂಟರಿ ಸಿನಿಮಾಗಳನ್ನು ಥಿಯೇಟರ್‌ನಲ್ಲಿ ರಿಲೀಸ್‌ ಮಾಡುವುದು ಕಡಿಮೆ ಆಗಿದೆ.ಆದರೆ ಪುನೀತ್‌ ಅಭಿನಯದ “ಗಂಧದಗುಡಿ” ಚಿತ್ರವನ್ನು ಚಿತ್ರಮಂದಿರದಲ್ಲಿ ರಿಲೀಸ್‌ ಮಾಡಿದ್ದಾರೆ. ಈ ಸಿನಿಮಾದ ಡಾಕ್ಯುಮೆಂಟರಿ ಕೂಡ ತಯಾರಾಗಿದ್ದು, ಇದೇ ಬರುವ ಅಕ್ಟೋಬರ್‌ 28ರಂದು ಥಿಯೇಟರ್‌ನಲ್ಲಿ ಬಿಡುಗಡೆಯಾಗಲಿದೆ. ಇನ್ನೂ ಚಿತ್ರವನ್ನು ನೋಡಲು ಅಪ್ಪು ಅಭಿಮಾನಿಗಳು ಕಾತುರದಿಂದ ಕಾದಿದ್ದಾರೆ.

Appu starrer ‘Gandhadagudi’ trailer grand release

Comments are closed.