Eye Care:ಕಣ್ಣಿನ ಸಮಸ್ಯೆಗೆ ಮನೆಯಲ್ಲೇ ಆರೈಕೆ

ಆಧುನೀಕತೆಯ ಭರಾಟೆಯಲ್ಲಿ ನಾವೆಲ್ಲಾ ಟಿವಿ, ಕಂಪ್ಯೂಟರ್ ಹೆಚ್ಚಾಗಿ ಬಳಕೆ ಮಾಡುತ್ತಿದ್ದೇವೆ. ದಿನವೀಡಿ ಟಿವಿ ಮುಂದೆ ಕೂರುವುದು, ಕಂಪ್ಯೂಟರ್, ಮೊಬೈಲ್ ಬಳಕೆ ಮಾಡುವುದು (Eye Care)ಕಣ್ಣಿನ ಮೇಲೆ ಗಂಭೀರ ಪರಿಣಾಮವನ್ನು ಉಂಟು ಮಾಡುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ಕನ್ನಡಕ ಬಳಸುವವರ ಸಂಖ್ಯೆಯೂ ದುಪ್ಪಟ್ಟಾಗುತ್ತಿದೆ. ಕಣ್ಣಿನ ಸಮಸ್ಯೆಯ ಪರಿಹಾರಕ್ಕಾಗಿ ಆಸ್ಪತ್ರೆಗಳಿಗೆ ತೆರಳಿ ದುಬಾರಿ ಹಣವನ್ನು ವ್ಯಯಿಸುತ್ತಿದ್ದಾರೆ. ಆದರೆ ಆಸ್ಪತ್ರೆಯ ಬದಲು ಮನೆಯಲ್ಲಿಯೇ ಕುಳಿತು ಕಣ್ಣಿನ ಆರೈಕೆ ಮಾಡಬಹುದಾಗಿದೆ.

ದಿನದಲ್ಲಿ ನಾಲ್ಕೈದು ಬಾರಿ ತಣ್ಣಗಿರುವ ನೀರನ್ನು ಕಣ್ಣಿಗೆ ಎರಚಿಕೊಳ್ಳುತ್ತ ಇರುವುದರಿಂದ (Eye Care)ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ.ಜೊತೆಗೆ ಚೆನ್ನಾಗಿ ಕೆಲಸ ಮಾಡುವುದಕ್ಕೆ ಸಹಾಯವಾಗುತ್ತದೆ. ಪದೇ ಪದೇ ಕಣ್ಣಿಗೆ ನೀರನ್ನು ಎರಚಿಕೊಳ್ಳುವ ಅಭ್ಯಾಸ ಮಾಡಿಕೊಂಡರೆ ಕಣ್ಣಿನ ಆರೋಗ್ಯದ ದೃಷ್ಟಿಯಿಂದಲೂ ಉತ್ತಮ.

ಕೊತ್ತಂಬರಿ ಬೀಜವನ್ನು ನೀರಿನಲ್ಲಿ ತೊಳೆದುಕೊಂಡು ಆ ನೀರನ್ನು ಚೆಲ್ಲಬೇಕು. ನಂತರ ಎರಡು ಗಂಟೆಗಳ ಕಾಲ ಕೊತ್ತಂಬರಿ ಬೀಜವನ್ನು ನೀರಿನಲ್ಲಿ ನೆನಸಿಡ ಬೇಕು. ಆ ನೆನಸಿಟ್ಟ ನೀರನ್ನು ಕಣ್ಣಿಗೆ ಹನಿ ಹನಿ ಯಾಗಿ ಹಾಕಬಹುದು ಅಥವಾ ಆ ನೀರಿಗೆ ಹತ್ತಿಯನ್ನು ಅದ್ದಿ ಕಣ್ಣನ್ನು ಮುಚ್ಚಿ ಹತ್ತಿಯನ್ನು ಇಟ್ಟುಕೊಂಡು ಹತ್ತಿ ಒಣಗುತ್ತಿದ್ದ ಹಾಗೆ ಮತ್ತೆ ಹತ್ತಿಯನ್ನು ಒದ್ದೆ ಮಾಡಿ ಕಣ್ಣಿನ ಮೇಲ್ಭಾಗದಲ್ಲಿ ಹತ್ತು ನಿಮಿಷಗಳ ಕಾಲ ಇಟ್ಟುಕೊಂಡರೆ ಕಣ್ಣಿನ ಉರಿ ಮತ್ತು ಕೆಂಪಾಗುವುದನ್ನು ಕಡಿಮೆ ಮಾಡಬಹುದು. ಹೀಗೆ ಮಾಡುವುದರಿಂದ ಕಾಲಕ್ರಮೇಣ ಕಣ್ಣಿನ ತೊಂದರೆಗಳು ಕಡಿಮೆಯಾಗುತ್ತದೆ.

ಇದನ್ನೂ ಓದಿ:Bigg Boss 9:ದುಡ್ಡು ಇಸ್ಕೊಂಡು ನಗುವುದಕ್ಕೆ ಬರಲ್ಲ; ಆರ್ಯವರ್ಧನ್‌ ಗುರೂಜಿ ಮಾತಿಗೆ ಕಿಚ್ಚ ಸುದೀಪ್‌ ಕ್ಲಾಸ್

ಇದನ್ನೂ ಓದಿ:Mangala Gowari Maduve : 3000 ಎಪಿಸೋಡ್‌ ಬಳಿಕ ಮುಕ್ತಾಯವಾಗ್ತಿದೆ ಮಂಗಳಗೌರಿ ಮದುವೆ

ಮಲಗುವ ಸಮಯದಲ್ಲಿ ಹರಳೆಣ್ಣೆಯನ್ನು ಕಣ್ಣಿನ ರೆಪ್ಪೆಯ ಮೇಲೆ ಹಚ್ಚುವುದರಿಂದ ಕಣ್ಣಿಗೆ ವಿಶ್ರಾಂತಿ ಸಿಗುತ್ತದೆ. ಇಷ್ಟೆ ಅಲ್ಲದೆ ಕಣ್ಣಿನ ದೃಷ್ಟಿಯನ್ನು ಉತ್ತಮ ವಾಗಿಸುತ್ತದೆ. ತುರಿದ ಸೇಬು ಹಣ್ಣನ್ನು ಕಣ್ಣಿನ ಮೇಲ್ಭಾಗದಲ್ಲಿ ಹತ್ತು ನಿಮಿಷಗಳ ಕಾಲ ಲೆಪನ ಮಾಡಿಕೊಳ್ಳುವುದರಿಂದ ದೃಷ್ಟಿ ಕ್ಷೀಣಿಸುವ ಸಮಸ್ಯೆ ಕಡಿಮೆಯಾಗುತ್ತದೆ.

ಕರಿಬೇವಿನ ಸೊಪ್ಪನ್ನು ಚೆನ್ನಾಗಿ ನೀರಿನಲ್ಲಿ ತೊಳೆದು ಅದನ್ನು ಜಜ್ಜಿ ಅದರಿಂದ ಬಂದ ರಸವನ್ನು ಕಣ್ಣಿಗೆ ಹಾಕುವುದರಿಂದ ದೃಷ್ಟಿ ಉತ್ತಮವಾಗುವುದರ ಜೊತೆಗೆ ಕಣ್ಣಿನ ಸಮಸ್ಯೆ ನಿವಾರಣೆ ಆಗುತ್ತದೆ.

Home care for eye problems

Comments are closed.