ಬಹುತೇಕ ಹೊಸ ಪ್ರತಿಭೆಗಳೆ ಸೇರಿ ನಿರ್ಮಿಸಿರುವ “ಖಾಸಗಿ ಪುಟಗಳು’’ (Khasagi Putagalu) ಸಿನಿಮಾದ ಮತ್ತೊಂದು ಮನಮೋಹಕ ಗಾನಲಹರಿ ಬಿಡುಗಡೆಯಾಗಿದೆ. ಅರೆಘಳಿಗೆ (Aregalige Nee)ಎಂಬ ಸಾಹಿತ್ಯದಿಂದ ಶುರುವಾಗುವ ಹಾಡಿಗೆ ಕೆ.ಕಲ್ಯಾಣ್ ಚೆಂದದ ಸಾಹಿತ್ಯ ಬರೆದಿದ್ದು, ವಾಸುಕಿ ವೈಭವ್ ಅದ್ಭುತ ಮ್ಯೂಸಿಕ್ ನೀಡಿದ್ದು, ರಘು ರಾಮ್ ಹಾಗೂ ಸುನಿಧಿ ಕಂಠ ಕುಣಿಸಿದ್ದಾರೆ. ಇಬ್ಬರು ಮುದ್ದಾದ ಜೋಡಿಯ ನಡುವಿನ ರೊಮ್ಯಾಂಟಿಕ್ ಗೀತೆ ಇದಾಗಿದ್ದು, ‘ಪರಂವಃ ಮ್ಯೂಸಿಕ್’ ನಲ್ಲಿ ಹಾಡು ಸಖತ್ ಸೌಂಡ್ ಮಾಡ್ತಿದೆ. ಈ ಮೊದಲು ತ್ರಿಲೋಕ್ ತ್ರಿವಿಕ್ರಮ ಬರೆದ ಮೊದಲ ಹಾಡು ‘ಮುದ್ದು ಮುದ್ದಾಗಿ’ ಎಲ್ಲರ ಮನಸೂರೆ ಮಾಡಿತ್ತು.

ಮೇ ತಿಂಗಳಲ್ಲಿ ತೆರೆಗೆ ಬರಲಿದೆ ಸಿನಿಮಾ
ಎಸ್‌ವಿಎಂ ಮೋಶನ್ ಪಿಕ್ಚರ್’ ಬ್ಯಾನರ್‌ನಲ್ಲಿ ಮಂಜು ವಿ. ರಾಜ್, ವೀಣಾ ವಿ. ರಾಜ್, ಮಂಜುನಾಥ್ ಡಿ. ಎಸ್ ನಿರ್ಮಾಣ ಮಾಡಿರುವ ಖಾಸಗಿ ಪುಟಗಳು ಸಿನಿಮಾ ತೆರೆಗೆ ಬರೋದಿಕ್ಕೆ ಸಜ್ಜಾಗಿದೆ. ಒಂದೊಂದೇ ಹಾಡುಗಳನ್ನು ರಿಲೀಸ್ ಮಾಡಿ ಪ್ರಮೋಷನ್ ಮಾಡ್ತುರುವ ಚಿತ್ರತಂಡ ಮೇ ತಿಂಗಳಲ್ಲಿ ಸಿನಿಮಾವನ್ನು ಬಿಗ್ ಸ್ಕ್ರೀನ್ ಗೆ ತರುವ ಯೋಜನೆ ಹಾಕಿಕೊಂಡಿದೆ.

ಯುವ ನಿರ್ದೇಶಕ ಸಂತೋಷ್ ಶ್ರೀಕಂಠಪ್ಪ ಆಕ್ಷನ್ ಕಟ್ ಹೇಳಿರುವ ಖಾಸಗಿ ಪುಟಗಳು ಸಿನಿಮಾದಲ್ಲಿ ನವ ಪ್ರತಿಭೆಗಳಾದ ವಿಶ್ವ ಮತ್ತು ಶ್ವೇತಾ ಡಿಸೋಜಾ ಚಿತ್ರದಲ್ಲಿ ಜೋಡಿಯಾಗಿ ಅಭಿನಯಿಸುತ್ತಿದ್ದು, ಉಳಿದಂತೆ ಚೇತನ್ ದುರ್ಗಾ, ನಂದಕುಮಾರ್, ಶ್ರೀಧರ್ ,ನಿರೀಕ್ಷಾ ಶೆಟ್ಟಿ,ಪ್ರಶಾಂತ್ ನಟನ, ಮೈಸೂರು ದಿನೇಶ್ ಮುಂತಾದವರು “ಖಾಸಗಿ ಪುಟಗಳು’ ಚಿತ್ರದ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ವಿಶ್ವಜಿತ್ ರಾವ್ ಛಾಯಾಗ್ರಹಣ, ಆಶಿಕ್‌ಕುಸುಗೊಳಿ ಸಂಕಲನವಿದೆ. ಚಿತ್ರದ ಹಾಡುಗಳಿಗೆ ವಾಸುಕಿ ವೈಭವ್ ಸಂಗೀತವಿದ್ದು,ಕೆ. ಕಲ್ಯಾಣ್, ಪ್ರಮೋದ್ ಮರವಂತೆ, ತ್ರಿಲೋಕ್ ತ್ರಿವಿಕ್ರಮ ಸಾಹಿತ್ಯವಿದೆ.
ಇದನ್ನೂ ಓದಿ : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್
ಇದನ್ನೂ ಓದಿ : ತಂಗಿ ಮದುವೆಯಲ್ಲಿ ಅಣ್ಣಂದಿರ ಭರ್ಜರಿ ಡ್ಯಾನ್ಸ್ : ವೈರಲ್ ಆಯ್ತು ಉಡುಪಿಯ ಮದುವೆ ವಿಡಿಯೋ
Aregalige Nee Video Song Khasagi Putagalu Vasuki Vaibhav