XE variant : ಮುಂಬೈ ಬಳಿಕ ಗುಜರಾತ್​ನಲ್ಲಿ ಕ್ಸಿ ರೂಪಾಂತರಿ ಪತ್ತೆ

ಕೊರೊನಾ ವೈರಸ್​​ನ ಇನ್ನೂ ಹೆಚ್ಚಿನ ವೇಗದಲ್ಲಿ ಹರಡುವ ಕೊರೊನಾ ವೈರಸ್​ನ ಹೊಸ ರೂಪಾಂತರಿಯ ಕ್ಸಿ ರೂಪಾಂತರಿ ಪ್ರಕರಣವು (XE variant ) ಗುಜರಾತ್​​ನಲ್ಲಿ ಬೆಳಕಿಗೆ ಬಂದಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಉನ್ನತ ಮೂಲಗಳು ತಿಳಿಸಿವೆ. ಮಾರ್ಚ್​ 13ರಂದು ರೋಗಿಯೊಬ್ಬರು ಕೋವಿಡ್​​ 19 ಪಾಸಿಟಿವ್​ ವರದಿಯನ್ನು ಪಡೆದಿದ್ದಾರೆ . ಇವರು ಸೋಂಕು ತಗುಲಿದ ಒಂದು ವಾರದಲ್ಲಿ ಚೇತರಿಸಿಕೊಂಡಿದ್ದಾರೆ.

ಜೀನೋಮ್​ – ಸ್ವಿಕ್ವೆನ್ಸಿಂಗ್​ ನಡೆಸಿದ ಬಳಿಕ ರೋಗಿಗೆ ಕೊರೊನಾ ವೈರಸ್​​ನ ಕ್ಸಿ ರೂಪಾಂತರದ ಸೋಂಕಿಗೆ ಒಳಗಾಗಿದ್ದಾನೆ ಎಂದು ತಿಳಿದುಬಂದಿದೆ. ಆದರೆ ಇದು ಕ್ಸಿ ರೂಪಾಂತರವೇ ನಿಜವಾಗಿಯೂ ಹೌದು ಖಚಿತಪಡಿಸಲು ಈ ಮಾದರಿಯನ್ನು ಮರುಪರಿಶೀಲಿಸಲಾಗುವುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ.


ಈ ಮೂಲಕ ಗುಜರಾತ್​ ಹಾಗೂ ಮಹಾರಾಷ್ಟ್ರದ ಮುಂಬೈನಲ್ಲಿ ಕ್ಸಿ ರೂಪಾಂತರದ ತಲಾ ಒಂದೊಂದು ಪ್ರಕರಣಗಳು ಪತ್ತೆಯಾದಂತಾಗಿದೆ.


ಏನಿದು ಕ್ಸಿ …?
ಹೊಸ ರೂಪಾಂತರವಾದ ಕ್ಸಿ ಓಮಿಕ್ರಾನ್​​ನ ಎರಡು ಆವೃತ್ತಿಗಳಾದ BA.1 ಮತ್ತು BA.2. ರೂಪಾಂತರಿತ ಹೈಬ್ರಿಡ್​ ಆಗಿದೆ. ಇದೀಗ ಸಣ್ಣ ಪ್ರಮಾಣದಲ್ಲಿ ವಿಶ್ವದಲ್ಲಿ ಕಾಣಿಸಿಕೊಳ್ತಿದೆ.
ವಿಶ್ವ ಆರೋಗ್ಯ ಸಂಸ್ಥೆಯು ನೀಡಿರುವ ಮಾಹಿತಿಯ ಪ್ರಕಾರ ಓಮಿ್ಕ್ರಾನ್​​ನ ಈ ಹೊಸ ರೂಪಾಂತರವು ಹಿಂದಿನ ರೂಪಾಂತರಕ್ಕಿಂತ ಸುಮಾರು 10 ಪ್ರತಿಶತ ವೇಗದಲ್ಲಿ ಹರಡುತ್ತದೆ ಎನ್ನಲಾಗಿದೆ. ಹೀಗಾಗಿ ಈ ರೂಪಾಂತರಿಯನ್ನು ಈವರೆಗಿನ ಕೊರೊನಾದ ಎಲ್ಲಾ ರೂಪಾಂತರಿಗಳಿಗಿಂತ ಅತ್ಯಂತ ವೇಗವಾಗಿ ಹರಡುವ ರೂಪಾಂತರಿ ಎಂದು ಪರಿಗಣಿಸಲಾಗಿದೆ.

ಬುಧವಾರದಂದು ಬಿಎಂಸಿಯು ಕ್ಸಿ ರೂಪಾಂತರದ ಮೊದಲ ಪ್ರಕರಣವು ಮುಂಬೈನಲ್ಲಿ ಪತ್ತೆಯಾಗಿದೆ ಎಂದು ಘೋಷಣೆ ಮಾಡಿತ್ತು. ಆದರೆ ಕೇಂದ್ರ ಸರ್ಕಾರವು ಇದನ್ನು ಒಪ್ಪಿರಲಿಲ್ಲ.

ಇದನ್ನು ಓದಿ : KGF 2 : ಕೆಜಿಎಫ್ ಅನ್ನು ಪಾನ್ ಇಂಡಿಯಾ, ಸೌತ್ ಇಂಡಿಯಾ ಸಿನಿಮಾ ಅನ್ನ ಬೇಡಿ! ಅದು ಅದ್ಭುತ ಹಿಂದೂಸ್ತಾನ್ ಮೂವಿ ಎಂದ ಸಂಜಯ್ ದತ್

ಇದನ್ನೂ ಓದಿ : COVID-19 Booster Dose ನೋಂದಣಿ ಹೇಗೆ, ಲಸಿಕೆಯ ಬೆಲೆ ಎಷ್ಟು : ಬೂಸ್ಟರ್ ಡೋಸ್ ಪಡೆಯಲು ನೀವು ಅರ್ಹರೆ : ಇಲ್ಲಿದೆ ಕಂಪ್ಲೀಟ್‌ ಮಾಹಿತಿ

After Mumbai scare, XE variant of coronavirus detected in Gujarat: Govt sources

Comments are closed.